ಪುಟ:ಹಗಲಿರುಳು.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಕೋಗಿಲೆ, ಜುಲಾಯಿ ೧r೧೮. ಮರಿಯನ್ನಾದರೂ ತಿಂದು ಹೊಟ್ಟೆಹೊರೆಯುತ್ತಾಳೆಂಬುದು ಜಗತ್ಪಸಿದ್ಧವಾಗಿದೆ. ಇದಕ್ಕಿಂತಲೂ ಅಧಿಕವಾದ ಪ್ರಜಾವಾತ್ಸಲ್ಯವೆಂದರೇನು? ಇನ್ನು , ಒಂದೊಂದು ಕಷ್ಟ ಕಾಲಗಳಲ್ಲಿ, ಇಂಥ ಮುಂದಾಳುಗಳ ರಕ್ಷಣೆಗಾಗಿ ತಮ್ಮ ಮೆಯ್ಯಾ ದರೂ ಕೊಟ್ಟು, ಅದರಿಂದ, ನಮ್ಮ ಸಮಾಜೋದ್ಧಾರದ ಕೀರ್ತಿಯನ್ನು ಕಟ್ಟಿಕೊಳ್ಳುವುದು, ಹಿಂದಾಳುಗಳ ಧರ್ಮವು, ಇಂಥ ದೃಷ್ಟಾಂತವು ಆ ಊರ ಲ್ಲಿಯೂ ಬೇಕಾದಷ್ಟಿದೆ. ಎಂದಮೇಲೆ, ಸಂದೇಹದ ಸೆರೆಯೂ ಇಲ್ಲದೆ, ಈ ಜಂಬುಕ ಬಡಗಿ, ಈ ಅಯಂವಿಶೇಷದ ಪ್ರಶ್ನೆಯ ಉಳಿಯನ್ನು, ಹೆಚ್ಚಿದುದೇಕೆ? ಕಪಿ:-(ಮರದಿಂದ) ಮಹನೀಯರೆ, ಒಂದಿಷ್ಟು, ಮೇಲೆ ಕಣ್ಣಿಟ್ಟು ಕಿವಿಗೊಡಿರಿ. ನಮ್ಮ ಕರಿಯಣ್ಣನ ಪ್ರಶ್ನೆ ಯಥಾರ್ಥವಿದೆ. ಹೊರಗಿನವರಿಗೆ, ಹೊಕ್ಕು ನೋಡದೆ, ಒಳಗಿನ ಗುಟ್ಟು ಗೊತ್ತಾಗದು, ಅದರಿಂದ, ಬಡವರ ಅಧಿಕ ವಾಗಿರುವ ಇಲ್ಲಿಯ ಪ್ರಜಾಸಮೂಹದ ಹಿತಚಿಂತನೆಮಾಡುವುದಿದ್ದರೆ, ನರಿ ಯಣ್ಣನ ಮಾತನ್ನು ಚೆನ್ನಾಗಿ ಲಕ್ಷಿಸಬೇಕು. ಹುಲಿಯ ಹೊಟ್ಟೆಪಾಡಿನ ಈ ಮಾತು ಹಿತಕರವಲ್ಲ. ಅವನು ನಾಡಿಗೆ ಹೋಗುವುದು ನಾಲಗೆಯ ಸವಿಗಲ್ಲದೆ, ಈ ಪ್ರಜಾವಾತ್ಸಲ್ಯದಿಂದ ಅಲ್ಲ ಎಂಬುದಕ್ಕೆ ಬೇಕಷ್ಟು ದೃಷ್ಟಾಂತ ಗಳುಂಟು. ಅವನ ಆಕೆಯ ಮರಿಯನ್ನು ಮುಕ್ಕುವುದು ಬಾಳಂತಿಮದ್ದಿ ಗಲ್ಲದೆ, ನಮ್ಮ ಒಳ್ಳಿತಕ್ಕಲ್ಲ ಎಂಬುದನ್ನು ಹೇಳಬೇಕಾಗಿಲ್ಲ. ಸರ್ವಸಮ ಭಾವದವನಾದರೆ, ಈ ಹುಲಿ ತಮ್ಮವರನ್ನು ಯಾಕೆ ಮುಟ್ಟುವುದಿಲ್ಲ ? ಇವನು, ಅಷ್ಟು ನಿಷ್ಪಕ್ಷಪಾತಿಯಾದರೆ, ನಾನೇಕೆ ಮರದಿಂದ ಮರಕ್ಕೆ ಲಂಘಿಸುತ್ತಿರುವುದು ? ಹಕ್ಕಿಗಳು ನೆಲಮುಟ್ಟದೆ ಆಕಾಶದಲ್ಲಿ ಹಾರು ತಿರುವುದಾದರೂ ಯಾಕೆ ? ಈ ಬಗೆಯ ಹಾವಳಿಯನ್ನು ಸೈರಿಸದೆಯೆ, ದನಮುಂತಾದುವು, ಮೊದಲೆ ನಾಡನ್ನು ಸೇರಿದುವು. ಇದಕ್ಕಾಗಿಯೆ, ದೇಶಾಂತರಹೋದರೂ ಸ್ವಾತಂತ್ರವಿರಬೇಕು' ಎಂದು ಆಗಾಗ ಗೋಳಿಡು ತಿರುವುದು, ಅದರಿಂದ, ಮುಖಂಡರಾದವರು, ಇನ್ನಾದರೂ, ಈ ಹೊಟ್ಟೆ * ಬಾಕತನಕ್ಕೆ ಅಡ್ಡ ಬಾರದಿದ್ದರೆ, ಎಲ್ಲವೂ ಗಾಳಿಮಾತಾಗುವುದು, [ಆ ಮಾತನ್ನು ಕೇಳುವ ಮೊದಲೆ ಹುಲಿಗೆ ಮಿತಿಮೀರಿದ ಸಿಟ್ಟಿದ್ದಿತು. ನರಿಯ ಮೇಲಿನ ಕೋಪದ ಕಿಡಿ ಕಪಿಯಲ್ಲಿ ಭುಗಿಲೆಂದಿತು, ಮಾಡುವುದೇನು? ಮಂಗನ ಮನೆ ಭದ್ರವಾಗಿತ್ತು, ಏರಿದ ಸಿಟ್ಟು ಪ್ರತಿಕ್ರಿಯೆಯಿಂದಲೆ ತಣಿದು