ಪುಟ:ಹಗಲಿರುಳು.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು. 6 ಇಳಿಯಬೇಕಷ್ಟೆ, ಮೊದಲು ಕೈ, ಅದು ಮುಟ್ಟದಿದ್ದರೆ ನಾಲಗೆಯಾದರೂ ನೀಡುವುದು ನೀಚರ ಸ್ವಭಾವವು.] ಹುಲಿ:- (ಗುಡುಗುಡಿಸಿ) ಅಃ, ನಿನ್ನ ನೆತ್ತರನ್ನು, ಈಗಲೆ ಕುಡಿಯಬೇಕಿತ್ತು! ಕಪಿ:-ಉಃ, ಏನುಮಾಡಲಿ, 'ಕೈನಿಲುಕದಷ್ಟು ದೂರವಾಯಿತಲ್ಲ' ಎಂದಲ್ಲವೆ ಚಿಂತೆ? ಇದಕ್ಕೆ ನಾವು ಇಷ್ಟು ಎತ್ತರದಲ್ಲಿರುವುದೆಂದು ಗೊತ್ತಾಯಿತೆ? ಹುಲಿ:-ಆಗಲಿ, ನೀನೆಲ್ಲಿ ಹೋಗುವೆ? ನೋಡೋಣ. ಕಪಿ:- ಮತ್ತೆಲ್ಲಿ? ಮರದಿಂದ ಮರಕ್ಕೆ ಚೆನ್ನಾಗಿ ನೋಡಬಹುದು. ಹುಲಿ:- ಏನು, ಈ ಮರಕ್ಕೆ ಹತ್ತ ಕೂಡದೊ? ಕಪಿ:- ಒಂದುವೇಳೆ ಹತ್ತಿದರೂ, ನನ್ನಂತೆ ಹಾರಕೂಡದು, ಹುಲಿ:- ಇರಲಿ; ನಮ್ಮದೆಲ್ಲ ಅನ್ಯಾಯವು. ಆ ಮನುಷ್ಯರು ಸೊಂಟಕ್ಕೆ ಹಗ್ಗ ಹಾಕಿ, ಕೇರಿಕೇರಿಗಳಲ್ಲಿ ನಿಮ್ಮನ್ನು ಕುಣಿಸುವುದು ನ್ಯಾಯವಷ್ಟೆ. ಕಪಿ:-ಸೊಂಟಕ್ಕೆ ಹಗ್ಗ ಹಾಕಿದರೂ, ನಿಮ್ಮಂತೆ ಕೊರಳಿಗೆ ಬಾಯಿಹಾಕುವ ಅಪಾಯವಿಲ್ಲ ವಲ್ಲವೆ? ಹುಟ್ಟುಗುರುಡನಿಗಿಂತ ಒಕ್ಕಣ್ಣನಾಗಿರುವುದೆ ವಾಸಿ. [ಈಗ ವ್ಯಾಘ್ರನ ಮನಸ್ಸು ಮುಖ್ಯಿಗೆ ಎಡೆ ಎಲ್ಲಿ ?” ಎಂದು ಹುಡುಕುತ್ತಿತ್ತು. ಆ ಮರದ ತೊಗಟೆ ನುಣುಪಾಗಿಯೂ, ಉಗುರುನಾಟದಂತೆ ಗಟ್ಟಿಯಾಗಿಯ ಇದ್ದುದರಿಂದ ಹತ್ತಲಿಕ್ಕೂ ಸಾಧ್ಯವಿಲ್ಲ, ಆದಕಾರಣ ಕೈಯೂ ಇಲ್ಲ ಬಾಯ ಇಲ್ಲ, ಮರದ ಬುಡವನ್ನೆಲ್ಲ ಕೀರಿ ಎಡೆಗಾಣದೆ ಸಿಟ್ಟು ತಿರು ಗಿತು, ಆಮೇಲೆ ಅದು ಎಲ್ಲಿ ಹೋಗಬೇಕು ? ಬಾದರಾಯಣಸಂಬಂಧ ಹಿಡಿದು, ಹೀಗೆ ಚರ್ಚೆಗೆ ಮೊದಲುಮಾಡಿದ ತನ್ನಲ್ಲಿ ಆಸಿಟ್ಟು ಬರಬಹುದೆಂದು ನರಿ ಊಹಿಸಿತು, ನರಿಯ ಕಲಿಕೆಗೆ ಬೆನ್ನುಂಟೆ?] ಜಂಬುಕ:- ಹುಲಿಯಣ್ಣ, ಬಾವಿಯ ಕಪ್ಪೆಯಂತಿರುವ ಈ ಮರದ 'ಮಂಗನ ಮಾತಿಗೆ ಬೆಲೆಯುಂಟೆ? ಮೇಲಾಳುಗಳ ವಿಚಾರವು, ಕೀಳಾಳುಗಳೆಲ್ಲ ರಲ್ಲಿ ಯ ಸರಿಯಾಗಿ ಹಬ್ಬುವುದರಿಂದ, ಅದು ಮೆಲ್ಲ ಮೆಲ್ಲನೆ ಜರಗಬೇಕೆಂಬುದು ಖಂಡಿ ತವು, ಆದರೆ, ಸ್ವಾರ್ಥದಲ್ಲಿ ಮಾತ್ರ ಕಣ್ಣಿರುವ ಇಂಥ ಅಲ್ಪರಿಗೆ ಅದು ನಿಮ್ಮ,