ಪುಟ:ಹಗಲಿರುಳು.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

LO ಕನ್ನಡ ಕೋಗಿಲೆ, ಜುಲಾಯಿ ೧೯೧೮. ದುರುದ್ದೇಶವೆಂದು ತೋರಬಹುದು, ಮನೆಕಟ್ಟಿದವನೆ ಬಲ್ಲ, ಮದುವೆಮಾಡಿ ದವನೆ ಬಲ್ಲ' ಎಂಬ ನಾಡವರ ಮಾತಿನಂತೆ, ಯಜಮಾನಿಕೆಯ ಕಷ್ಟವನ್ನು ಬಲ್ಲವರೆ ಬಲ್ಲ ರು. ಇಂಥ ಅಲ್ಪರ ಅಪವಾದಗಳನ್ನು, ನಿಮ್ಮಂಥ ದೊಡ್ಡವರು ಮನಮುಟ್ಟಿಸಿಕೊಳ್ಳಬಾರದು, ಮಂಗಗಳು ಮಾತ್ರ ಮರಹತ್ತಿದರೂ, ಹಲವು ಅಬಲಜಂತುಗಳು ನಿಮ್ಮ ಕಾಲಡಿಯಲ್ಲಿ ಸುಖವಾಗಿ ಬಾಳಿಕೊಂಡಿಲ್ಲ ವೆ? ಎಲ್ಲದಕ್ಕಿಂತಲೂ ಹೆಚ್ಚಾಗಿ, ಅಶಕ್ತನಾದ ನನ್ನನ್ನು ತಮ್ಮವನೆಂಬ ಅಕ್ಕರೆಯಿಂದ ಮಂತ್ರಿಪದವಿಯಲ್ಲಿ ನೇಮಿಸಿದ, ಒಂದೇ ಒಂದು ದೃಷ್ಟಾಂತವು ನಿಮ್ಮ ಸಮ ದೃಷ್ಟಿಯನ್ನು ಸಮರ್ಥಿಸುತ್ತಿದೆ. ನಾನು ಮೊದಲು ಹೇಳಿಕೊಂಡುದಾದರೂ ನಿಮ್ಮ ತಪ್ಪನ್ನೆ ಕಂಡಲ್ಲ, ನಮ್ಮೊಳಗೆ ಏನಾದರೂ ಕುಂದಿದ್ದರೆ ಮೊದಲೆ ನಿವಾರಿಸಿಕೊಳ್ಳಬೇಕೆಂಬ ಎಣಿಕೆಯಿಂದ ಮಾತ್ರವೆ. ನಿಮ್ಮ ಉತ್ತರವಾದರೂ ಅರ್ಥಗರ್ಭಿತವಾಗಿಯೇ ಇತ್ತು. ವ್ಯಾಘ್ರ:- (ಆನಂದಬಟ್ಟು ನರಿಯಣ್ಣ, ಚೆನ್ನಾಗಿ ಹೇಳಿದೆ. ನೀನು ಇಷ್ಟರ ಸುವಿಚಾರಿಯೆಂದು ತಿಳಿದಿರಲಿಲ್ಲ, ನನಗೆ ನಿನ್ನಲ್ಲಿದ್ದ ಓರೆಗಣ್ಣು ಈಗಲೆ ನೇರಾ ಯಿತು, ಅದರಿಂದ ನನ್ನ ಬಿರುನುಡಿಯ ಬೇಸರವನ್ನು ಬಿಟ್ಟು ಕ್ಷಮಿಸು. ನಾವು ಮನಸ್ಸಾಕ್ಷಿಗೆ ಸರಿಯಾಗಿರುತ್ತೇವೆ, ಆದರೇನು ? ಹೇಳೆನೆಂದಿದ್ದರೂ ಕೇಳೆನೆಂದಿರಬಹುದೆ ?” ಇಂಥ ವಿಚಾರಪೂರ್ವಕವಾದ ಸಮಾಧಾನವು, ನಿನ್ನಂಥ ಯಥಾರ್ಥವಾದಿಗಳ ಮಾತಿನಿಂದಲೆ ನೆಲೆಗೊಳ್ಳಬೇಕು. ಜಂಬುಕ:-ಹುಲಿಯ ಮುಖವನ್ನೇ ನೋಡುತ್ತ ತಿಳಿದವನಂತೆ ನಟಿಸಿ) ಓಹೋ, ಹೀಗೆ ? ಗುಟ್ಟೂಡೆಯಿತು, ನಮ್ಮೊಳಗೆ ಎಂದೂ ಇಲ್ಲದ `ಈ ಮಾತಿನ ಜಗಳಕ್ಕೆ ಕಾರಣವೇನಿರಬಹುದೆಂದು ಆಗಿನಿಂದಲೆ ಯೋಚಿಸುತ್ತಿದ್ದನು. ಅದು ಈಗಲೆ ಹೊರಬಿತ್ತು, ಮರೆಯಲ್ಲಿ ಅಡಗಿದರೂ ಮೈದಾನಿನಲ್ಲಿ ಆಗದಿರುವಂತೆ, ಕೈಗೆ ಸಿಕ್ಕಿದ ಮೇಲೆ, ಆ ಮೋಸದ ತೇಜಸ್ವಿಯ ಆಟಕ್ಕೆ ಎಡೆಯುಂಟೆ ? ವ್ಯಾಘ್ರ:- ಅದೇನು ? ಬೇಗನೆ ಹೇಳು. ಅವನ ಕುಹಕವನ್ನು ಹಾದಿಗೆಳೆದು, ಅಜಿಗಿಜಿಮಾಡಿಬಿಡುತ್ತೇನೆ. ಜಂಬುಕ:- ಅದೀಗ ನಮ್ಮ ಮೊದಲಿನ ಕೆಲಸವು, ಆ ದುಷ್ಟನಾದ ಸದಾಗತಿ, ತೇಜಸ್ವಿಯೊಡನೆ ಹಗೆಗಟ್ಟಿದನೆಂದು ನಮ್ಮ ಕತ್ತಲೆಯಿಂದ ಗೊತ್ತಾಗಿದೆಯಷ್ಟೆ.