ಪುಟ:ಹಗಲಿರುಳು.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು. ಓh. ಆದರೆ ಅದೆಲ್ಲ ಸುಳ್ಳೆಂದು ಈಗ ಪ್ರತ್ಯಕ್ಷಸಿದ್ಧವಾಗುವಂತಿದೆ. ಆ ಸದಾಗತಿ ಮೈಮರೆಯಿಸಿಕೊಂಡು, ಮಿಂಚುಹುಳುಗಳ ಅವತಾರವನ್ನು ಧರಿಸಿದ ತೇಜಸ್ವಿ ಯೊಡನೆ ಸೇರಿ ಈಕಡೆಗೆ ಬೀಸುತ್ತಿದ್ದನು, ಆದರೆ, ನಮ್ಮ ಅಂಧಕಾರನ ಎಡೆ ಯಲ್ಲಿ, ಅವರಿಗೆ ಸ್ಥಿರವಾದ ಆಶ್ರಯವು ಸಿಕ್ಕಲಿಲ್ಲ, ಅದರಿಂದ ಮುಂದಾಳು ಗಳಾದ ನಿಮ್ಮೆಲ್ಲರ ಉಸಿರುಗಳಲ್ಲಿ ಸದಾಗತಿಯೂ, ಕಣ್ಣುಗಳಲ್ಲಿ, ಮಿಂಚು ಹುಳುಗಳ ರೂಪದ ತೇಜಸ್ವಿಯ, ಗೊತ್ತಾಗದಂತೆ ಮನೆಮಾಡಿರುತ್ತಾರೆ. ಅದೋ, ನಿನ್ನ ಕಣ್ಣುಗಳಲ್ಲಿ, ಮಿಂಚುಹುಳುಗಳು ಕೆಂಪು ಕೆಂಡಗಳಂತೆ ವಿನುಗುಟ್ಟುತ್ತವೆ, ಆ ನೀಚರು ನಿಮ್ಮಲ್ಲಿ ಮಾತ್ರವಲ್ಲ; ನಮ್ಮ ಕಣ್ಣು ಗಳಲ್ಲಿಯೂ ಹೊಕ್ಕಿರಬಹುದು, ಆದರೆ, ಕಳ್ಳರು ದೊಡ್ಡವರ ಮನೆ ಗಳಿಗೇ ಹೆಚ್ಚಾಗಿ, ಕನ್ನಹಾಕುವಂತೆ, ಹುಲಿ ಸಿಂಹ ಮೊದಲಾದ ಮುಖಂಡ ರನ್ನೇ ಹೆಚ್ಚಾಗಿ ಪ್ರವೇಶಿಸಿದ್ದಾರೆ. ಒಬ್ಬೊಬ್ಬರಲ್ಲಿ ಯ ಇದ್ದು ಭಿನ್ನ ಭಿನ್ನವಾದ ಯೋಚನಾಭಿಪ್ರಾಯಗಳನ್ನು ತೋರಿಸುವುದೇ ಅವರ ಉದ್ದೇಶವು. ಅದರಿಂದಲೆ, ನಮ್ಮಲ್ಲಿ, ಒಬ್ಬನಿಗೆ ಒಂದು ಅಭಿಪ್ರಾಯವಾದರೆ, ಇನ್ನೊಬ್ಬನಿಗೆ ಮತ್ತೊಂದು ತಲೆದೋರಿ, ಹೀಗೆ ಮನಕೇಶವುಂಟಾಗುವುದು, ಅದಕ್ಕಾಗಿ, ಅವರನ್ನು ಈಗಲೆ, ನಾವೆಲ್ಲ ರೂ ಕಿತ್ತೊಗೆಯಬೇಕು. {ಈ ಮಾತನ್ನು ಕೇಳಿದ ಕೂಡಲೆ, ಹುಲಿ ಸಿಂಹ ಮೊದಲಾದ ಮೂಢಪ್ರಾಣಿಗಳು ಮಹಾಕೋಪದಿಂದ & ಅ8, ನೀಚರೆ, ತೇಜಸ್ವಿಸದಾಗತಿಗಳೆ, ಸಿಕ್ಕಿದಿರಿ' ಎಂದು ಗುಡುಗುಡಿಸಿ ಗರ್ಜಿಸಿ, ತಂತಮ್ಮ ಕಣ್ಣುಗಳನ್ನು ಕುಕ್ಕಿ ಬಿಕ್ಕಿದುವು ಸುಗ್ರೀವನನ್ನು ಹಿಡುಕೊಂಡು ಹೋದ ಕುಂಭಕರ್ಣನ ಕಾರ್ಯದಷ್ಟು ಸತ್ಯತ್ವವು ಇಲ್ಲಿಲ್ಲ ದಿದ್ದರೂ, ಪ್ರತಿಫಲವು, ಅದಕ್ಕಿಂತಲೂ ಅಧಿಕವಾಗಿಯೆ ಆಯಿತೆನ್ನಬಹುದು. ಅಲ್ಲಿ ಮಗು ಬಾಗವಾಯಿತು, ಇಲ್ಲಿ ಕಣ್ಣಿಗೆ ಸೊನ್ನೆ ಮುಚ್ಚಿತು. ಒಡ ನೆಯ ಉರಿಬೇನೆಗಳು ಏರಿದುವು. ಆಗ ನರಿಯ, ಅದರ ಆನುಯಾಯಿ ಗಳೂ (ಹಾ! ಒಳಹೊಕ್ಕು ತಲೆಬಡಿವ ಘಾತಕರೆ, ಜೀವಹೋದರೂ ಸರಿ, ನಿಮ್ಮನ್ನು ಕಿತ್ತೊಗೆವುದೆ ನಿಶ್ಚಯವು' ಎಂದು ಚೀರುತ್ತ ಓಡಾಡಹತ್ತಿದುವು.] ಸಿಂಹಾದಿಗಳು:-(ಚೀರುತ್ತ)'ಮಂತ್ರಿ, ಇದೇನು ಉರಿ ಏರುತ್ತಲೆ ಇದೆ ? ಜಂಬುಕ:- (ದೂರದಿಂದ) ನಮಗೂ ಹಾಗೆಯೇ ಆಗುತ್ತಿದೆ. ಅದೊಂದು ಅಪಾ ಯಕರವಲ್ಲ. ಬೀಗಿದ ಬಾವು, ಕೀವುತುಂಬಿ ಸಿಳಿತವೇರಿದರೆ, ಕೂಡಲೆ ಒಡೆದು ಸೇರಿ ವಾಸಿಯಾಗುವುದು, ಹಾಗೆಯೆ, ತನ್ನ ಒಳಸಂಚು ಬಯ ಲಾಯಿತೆಂದು ನಿರಾಶನಾಗಿ ತೇಜಸ್ವಿ ಈ ರೀತಿಯಲ್ಲಿ ಚುಚ್ಚುತ್ತಿರುವುದು.