ಪುಟ:ಹಗಲಿರುಳು.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನ ಕೋಗಿಲೆ, ಜುಲಾಯಿ ೧೯೧೮. ಆದರೆ, ಆತನ ಆಪ್ತನಾದ ಸದಾಗತಿಯನ್ನು, ಇನ್ನೂ ನಾವು ಶ್ವಾಸಕೋಶ ಗಳಲ್ಲಿ ಹೊಕ್ಕು ಹೊರಡಿಸಿ ಮನ್ನಿಸುತ್ತಿರುವುದರಿಂದ, ಅವನಿಗೆ, ತನ್ನ ಆ ಮಿತ್ರನ ಸಹಾಯವು ಈಗಳೂ ಇದೆ. ವಂಚಕಸದಗತಿಯೆ, ತೇಜಸ್ವಿಗೆ, ಒಳಗೊಳಗೆ ಕೈಗೊಟ್ಟು, ಹೀಗೆ ಪೀಡಿಸುತ್ತಾನೆ. ಕೇಳಿರಿ, ನಾಡಿನ ಸಂಸಾ ರಾಗ್ನಿಯನ್ನು ಸೈರಿಸದೆ ಕಾಡಿಗೆ ಬಂದರೂ, ಯೋಗಿಗಳು ಶ್ವಾಸ (ಸದಾಗತಿ) ಗಟ್ಟಿಯ ಸುಖಿಗಳಾಗುವುದು, ಅದರಂತೆ, ನಾವೂ ಉಸುರಗಟ್ಟಿ, ಅವ ನನ್ನು ಅಟ್ಟಿಬಿಡಬೇಕು, ಹಾಗಾದರೆ, ಬೇನೆಯುರಿಗಳೆಲ್ಲ ತಣ್ಣಗಾಗಿ ಮುಂದಣ ಕೆಲಸವೆಲ್ಲ ತನ್ನಷ್ಟಕ್ಕೆ ತಾನೆ ನೆರವೇರುವುದು, [ನರಿಯ ಮಾತನ್ನೆ ಬ್ರಹ್ಮ ವಾಕ್ಯವೆಂದೆಣಿಸಿ ಘಾತುಕ ಪ್ರಾಣಿಗಳು ಉಸುರುಗಟ್ಟತೊಡಗಿದುವು. ಅದರ ಮಾತು ಸುಳ್ಳಾಗದೆ ಒಂದಕ್ಕೆ ಮೂರರಷ್ಟು ನಿಜವಾಯಿತು, ಹೇಗೆಂದರೆಎಲ್ಲ ಮೃಗಗಳೂ ನರಿಯ ಉಪದೇಶವನ್ನು ಕಡೆವರೆಗೆ ಬಿಗಿಹಿಡಿಯದಿದ್ದರೂ, ಕೆಲವು ಕಣ್ಣಿಲ್ಲ ದುದರಿಂದ ಅಲ್ಲಲ್ಲಿ ಎಡವಿತಡವರಿಸಿ ಕಂಡಿಗುಂಡಿಗಳಿಗೆ ಬಿದ್ದು ಮಡಿದುವು. ವ್ಯಾಘ್ರ ಸಮೂಹದ ಹುಲಿಹುಣ್ಣು' ಎಂಬುದು ಪ್ರಸಿದ್ಧ ವಷ್ಟೆ, , ಹುಲಿಗಳು ಅತ್ತಣಿಂದ ಇತ್ತ, ಇತ್ತಣಿಂದ ಅತ್ತ, ಚುಚ್ಚಿಟ್ಟು ಒದ್ದಾಡಿ ಕೈಕಾಲು ಬಡಿದು ಕೆಡೆದುವು. ಹಲವು ಬದುಕಿದರೂ, ಆ ಕುರುಡುಮೊರಡು ಗಳಿಂದ ಏನಾಗಲಿಕ್ಕಿದೆ ? ಸ್ವಲ್ಪ ಕಾಲದಲ್ಲಿ ಆ ಮೃಗಗಳ ಮೆಯ ತಣ್ಣಗೆ ; ಘಾತುಕ ಕೃತ್ಯಗಳೂ ತಣ್ಣಗೆ: ಕಾಡೂ ತಣ್ಣಗೆ, 'ಓಂ ಶಾಂತಿಶ್ಯಾಂತಿಶ್ಯಾಂತಿಃ ? ಆಯಿತು. ಕೊಟ್ಟುದಕ್ಕೆಲ್ಲ ದಸ್ಕತು' ಎಳೆಯುತ್ತಿದ್ದ ಅಂಧಕಾರಧೃತರಾಷ್ಟ್ರನು, ಇನ್ನು ಮಾಡುತ್ತಾ ನೇನು? ನೋಡಿರಿ, ಹೀಗೆಯೆ, ನಮ್ಮಲ್ಲಿಯ ಕೆಲವು ಜಂಬುಕ ವ್ಯಕ್ತಿಗಳು ಜನಾಂಗವನ್ನೇ ವಂಚಿಸುತ್ತಿರುವುದು ತುಂಬ ವಿಷಾದಕರವು, ಹುಂ, ವಿಷಾದವೇಕೆ ? ವಂಚಿಸಬೇಕಾದರೆ, ಆ ಮಾತು ಸಯುಕ್ತಿಕವಾಗಿರತಕ್ಕುದಷ್ಟೆ. ಅಂಥ ಮಾತುಗಳು, ಕೇಳುವ ಜನರ ಹೃದಯಕ್ಕೆ ಅನುಸಾರವಾಗಿಯೆ ಕಾರ್ಯರೂಪವನ್ನು ಹೊಂದುತ್ತವೆ ಎಂಬುದೂ ನಿಶ್ಚಯವು, ಕತ್ತಿ, ಕಟುಕನ ಕೈಗೆ ಬಂದು ಅಬಲರನ್ನು ಕಡಿಯಲಿಕ್ಕೂ, ಧೀರನ ಹಸ್ತಗತವಾಗಿ ಕಾಯ ಲಿಕ್ಕೂ ಕಾರಣವಾಗುವುದಲ್ಲವೆ? ಅದರಿಂದ, ಇದೂ ಪ್ರಕೃತಿಯ ಒಂದು ಅವತಾರವೆಂದು ಹೇಳಬಹುದು, ಆದರೆ, ಈ ಅವತಾರದಿಂದ ನಿರಪರಾಧಿ ಗಳೂ ಬಲಿಬಿದ್ದು ವಿಕೃತಿಯ , ಅನ್ಯಾಯವಾಗುವುದೆಂದು ಆಕ್ಷೇಪಿಸಿದರೆ, (ಆದಿಕಾಡಸುಡುವಲ್ಲಿ ಹಸಿಯೊಣಗಿಲೆಂದುಂಟೆ?' ಎಂದು ನ್ಯಾಯವನ್ನು ಸಮರ್ಥಿಸಬೇಕು, ದುಷ್ಟಸಂಗದ ಫಲವೆ ಅಷ್ಟು, ಕಲ್ಲಪ್ಪ ಗುಂಡಪ್ಪರ ಎಡೆಯಲ್ಲಿ ಮೆಣಸಪ್ಪ ನುಗದ' ರೀತಿಯ ಹೀಗೆಯೆ.