ಪುಟ:ಹಗಲಿರುಳು.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು. ಅಂತೂ ಇಂತೂ, ಆ ಕಾಡವರ ಸಂಕಲ್ಪದಲ್ಲಿ ಪುಣ್ಯಕಾಲವು ಕಳೆಯಿತು. ಘಾತುಕ ಪ್ರಾಣಿಗಳ ಒತ್ತಾಟವೂ ಕಳೆಯಿತು. ಪರಮಾತ್ಮನು, ದುಷ್ಟನಾ ಶಕ್ಕೆ ಸಿದ್ಧ ಮಾಡಿಟ್ಟ ಉಪಾಯಗಳಲ್ಲಿ ಇದೂ ಒಂದು. ಹಲವರು ಕಾಲ ದಿಂದ, ಕೆಲವರು ರೋಗದಿಂದ, ಅನ್ಯರು ಹಗೆಗಳಿಂದ, ಅನೇಕರು ಅವಗಡ ಗಳಿಂದ, ಬೇರೆಯವರು ತಮ್ಮವರ ಮರೆಮೋಸಗಳಿಂದ, ಇನ್ನಿರುವವರು ತಮ್ಮಿಂದಲೆ ತಾವು ಸಾವಿನ ಸಜ್ಜೆಯನ್ನು ಸಾರುತ್ತಾರೆ. ಯಜ್ಜನ್ಯಂ ತನ್ನಷ್ಟಂ' ಎಂಬುದನ್ನು ಯೋಚಿಸಿದರೆ, ಅದು ಒಂದು ಆಶ್ಚರ್ಯವಲ್ಲ, ವಿಕೃತಿಯ ಅವತಾರವು ತರತರವಾಗಿದ್ದರೂ, ಕಡೆಗೆ, ಪ್ರಕೃತಿಯ ಮೈ ಒಂದೆ ಸರಿ. ಬಗೆಬಗೆಯ ಬಣ್ಣಗಳ ಬಳಿತದಿಂದ ಕ್ಷಣಕ್ಕೆ ಒಬ್ಬನಾಗಿ, ರಂಗಕ್ಕೆ ಮೊರೆ ತೋರಿಸಿದವನೂ, ಕಡೆಗೆ ಮನೆಗೆ ಹೊರಡುವಾಗ ತಾನೊಬ್ಬನು ಮಾತ್ರವೆ. ಆದರೂ “ವಿಕೃತಿಮೂಲಕವಾಗಿ ಪುಣ್ಯಪಾಪಗಳನ್ನು ಮಾಡಿಸುವುದೂ, ತಕ್ಕಂತೆ ಸ್ವರ್ಗ ನರಕಫಲಗೊಡುವುದೂ ಪರಮಾತ್ಮನೆ ಎಂದ ಮೇಲೆ, ನಾವೇನು ಮಾಡ ಲಿಕ್ಕಿದೆ ?” ಎಂದು ತಪ್ಪೋಸ್ಸುಗಳೆರಡನ್ನೂ ಒಡೆಯನಾದ ಪರಮಾತ್ಮನ ಮೇಲೆ ಹೊರಿಸುವ ಯುಕ್ತಿವಾದವು ಸರಿಯಲ್ಲ. ಯಾಕೆಂದರೆ, ತನ್ನ ಮನೆಗೆ ಬರಲಿಕ್ಕಿ ರುವ ಅತಿಥಿಗಳ ಅನುಕೂಲತೆಗಾಗಿ ಒಳಾರಿಗಳನ್ನು ಮಾಡಿಸುವುದೂ, ಕಳ್ಳರನ್ನು ಹಿಡಿಯಲಿಕ್ಕೆ ಸಂಚುಗಳನ್ನು ಒಡ್ಡುವುದೂ ಯಜಮಾನನ ಕೆಲಸವು. ಆದರೆ, ಅವರವರಿಗೆ ಆಯಾಬದ್ದಿಗಳನ್ನು ಕೊಡುವುದೂ ಅವನ ಕರ್ತವ್ಯವಲ್ಲ. (ಬುದ್ಧಿ: ಕರ್ಮಾನುಸಾರಿಣೀ' ಎಂಬ ಹಾಗೆ, ಪೂರ್ವಕರ್ಮಾನುಸಾರ ವಾಗಿಯೆ ಆಯಾ ಬುದ್ಧಿ ನೆಲೆಗೊಳ್ಳಬೇಕು. ಬಿತ್ತಿದುದೆ ಬೆಳೆಯಲ್ಲವೆ? ಆದರೆ, ಆರಾಜಮಾರ್ಗದಲ್ಲಿ ಬಂದು ತಸ್ಕರಣ ಮಾಡಿದರೆ ಬಂಧನವೇ ಮನ್ನಣೆ. ದುಷ್ಕರ್ಮಕ್ಕೆ, ಅವನೆ ಪ್ರೋತ್ಸಾಹಿಸಿ, ಆಮೇಲೆ ಅವನೆ ಶಿಕ್ಷಿಸುವುದೆಂದರೆ, ಕೆಲವು ದುಷ್ಟರಾದ ಅಧಿಕಾರಿಗಳಂತೆಯೆ ಆಯಿತು. . ಲೋಕರಕ್ಷಕನಾದ ಪರ ಮಾತ್ಮನನ್ನು, ಆ ಅಲ್ಪರಾದ ಅಧಿಕಾರಿಗಳೊಡನೆ ಹೋಲಿಸುವುದೆಂದರೆ, ಹಿಟ್ಟು ಬೂದಿಗಳನ್ನು ಒಟ್ಟುಗೂಡಿಸುವ ಮೂಢತೆಯೆ ಸರಿ, ನಮ್ಮ ಈ ರಾಜ್ಯಗಳಲ್ಲಿ ಹಸಿಬಿಸಿಗಳು ಒಟ್ಟಿಗೆ ಹೊತ್ತಿ ಹೋಮವಾಗುತ್ತಿದ್ದರೂ, ಪರಮಾತ್ಮನ ಅಖಂಡ ಸಾಮ್ರಾಜ್ಯಸಭೆಯಲ್ಲಿ ಸತ್ಯವೇ ಸಾವಿಲ್ಲದ ಸಭಾಹಿತನು ನಮ್ಮಲ್ಲಿ, ಸತ್ಯದ ಕಿಡಿಯ ಸುತ್ತಲೂ ಸುಳ್ಳಿನ ಬೂದಿ ಮುಚ್ಚುವುದು ಸ್ವಭಾವವಾದ ಕಾರಣ, ಅದು ಕ್ರಮೇಣ, ಆ ಕಿಡಿಯನ್ನು ಸವೆಯಿಸುತ್ತ ಬರುತ್ತದೆ. ಸ್ವಾರ್ಥಿಗಳಾದ ಮಂತ್ರಿ ಗಳಿಗೆ ಒಳಗಾದ ಮುಖಂಡರ ಗತಿಯ ಹಾಗೆಯೆ.] --*ಳತಿಳಿಸಿ