ಪುಟ:ಹಗಲಿರುಳು.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೮ ಕನ್ನಡ ಕೂಗಿದ್ರೆ ಆಗೋತ್ತು ೧೯೧ಕೆ. ಗಳುಂಟ, ಎಷ್ಟೆಷ್ಟು ಮೇಲೇರುತ್ತಾರೋ, ಅಷ್ಟೂ ಮನೆಯನ್ನು ಮರೆಯ ಬೇಕಾಗುತ್ತದೆ. . ಅದರಲ್ಲಿ ಮೊದಲನೆಯವನಾದಕೂಡಲೆ, ಮನೆಗೆ ಮಾರಿ, ಪರರಿಗೆ ಉಪಕಾರಿ' ಎಂಬ ಬಿರುದು ಸಿಕ್ಕುವುದು, ಆದರೆ, ಆ ಬಿರುದಿನ ಬಿರುಗಾಳಿಗೆ ತಲೆಕೊಟ್ಟವನು, ಬುಡವು ಸಪುರವಾಗಿಯೂ, ಕೊಡಿ ತೋರ ವಾಗಿಯು ಬೆಳೆದ ಮರದಂತೆ, ಕಡೆಗೆ ಮೈಮರೆತು ಬಿದ್ದು ದಾರಿಹೋಕರ ತುಳಿತಕ್ಕೆ ಎಡೆಯಾಗುವನು, ಹಾಗೆಂದರೆ, ಪರೋಪಕಾರವೆಂಬುದು ನಿಕೃಷ್ಟ ವೆಂದು ನನ್ನ ಯೋಚನೆಯಲ್ಲ., ಆ ಸದ್ದು ಣವು, ತನ್ನೊಡನೆ ಮನೆಯಲ್ಲಿ ಖಳೆದು ತರಬೇತಾಗಬೇಕು, ಹೇಗೆಂದರೆ-ತನಗೆ, ಮನೆಗೆ, ನೆರೆಹೊರಗೆ, ಹಳ್ಳಿಹಳ್ಳಿಗೆ ಕ್ರಮೇಣ ಊರುದ್ದ ಕ್ಕೂ ಕೃತಜ್ಞತೆಯ ಉಪಕಾರವನ್ನು ಒಪ್ಪಿಸ ಬೇಕು, ಹಾಗಿದ್ದರೆ, ಬುಡಬುಡ ದಪ್ಪವಾಗಿಯೂ, ಕೊಡಿಕೊಡಿ ತೆಳ್ಳಗಾಗಿ ನೆಲೆನಿಂತು ಗಟ್ಟಿಮುಟ್ಟಾಗಿಯೂ ಇರುವ ವೃಕ್ಷದಂತೆ, ಲೋಕಕ್ಕೆ ಹೂವಿನ ಪರಿಮಳದ ಬೋಧನೆಯನ್ನೂ ಫಲವನ್ನೂ ಒದಗಿಸಲು ಸಮರ್ಥನಾಗುವನು. ಹೀಗೆ, ಅಡಿನೋಡಿ ಮುಡಿಹೊರುವ ಎಚ್ಚರಿಕೆ' ಇಲ್ಲದ ಕಾರಣವೆ ನಿನ್ನ ಪರೋಪಕಾರದ ಕೈಯ ಕಟ್ಟಿ ಹೋಯಿತು. ಈಗ, ನಿನ್ನ ಪ್ರೋತ್ಸಾ ಹಕರೂ ಸ್ನೇಹಿತರೂ ಎಲ್ಲಿ? ಕೇಳು. ಕಂದ | ಸಂಕಟವಂಬಾ ಹೆಸರಿನ || ಬೆಂಕಿಯ ಕೋಟೆಯೊಳಗಿಟ್ಟು ಕರಗಿಸ ಹೊನ್ನಂ || ತಾಂಕೂಡಿಕೊಂಡ ಬೆಸುಗೆಯು || ಸಂಕುಲವೆಂಬಾಪ್ರರಲ್ಲಿ ಗಲ್ಲಿಗೆ ಸರಿವರ್ | ೧ || ಇನ್ನಾದರೂ, ಬೆಳ್ಳಗಿದ್ದು ದೆಲ್ಲ ಸಕ್ಕರೆಯೆಂಬ ಅವಿಚಾರಕ್ಕೆ ಎಡೆ ಗೊಡದೆ, ನಿಜವಾದ ಲೋಕೋಪಕಾರವನ್ನೇ ಮಾಡು, ನಿನ್ನಲ್ಲಿದ್ದಂತೆ, ನಿನ್ನನ್ನು ಹೊಂದಿದ ನಕ್ಷತ್ರಮಂಡಲದಲ್ಲಿ ಯೂ, ನನಗೆ ಅಕ್ಕರೆಯುಂಟು. ಕತ್ತಲೆಯನ್ನಾದರೂ, ಸಂಪೂರ್ಣವಾಗಿ, ಅಲ್ಲಗಳೆವವನಲ್ಲ, ಎಲ್ಲೆಲ್ಲಿಯೂ ಅದರ ಕಪ್ಪಿನ ಲೆಪ್ಪಹಾಕಿ ನೋಟಕ್ಕೆ ಅಂದವಾಗಿಸಬಹುದಲ್ಲದೆ, ಕುಂದುಕ ವನ್ನು ಉಂಟುಮಾಡುವ ಆ ಕತ್ತಲೆಯನ್ನ, ಯಾವಾಗಲೂ ಎಲ್ಲೆಲ್ಲಿಯ ಬಿಟ್ಟು ಅವಲಕ್ಷಣಕ್ಕೆ ದಕ್ಷಿಣೆಗೊಡಬಾರದೆಂದು ಮಾತ್ರವೆ ನನ್ನ ಉದ್ದೇಶವು ಎಲ್ಲ ವನ್ನೂ .ಸಾವಧಾನವಾಗಿ ಎಣಿಸಿನೋಡು, ಪಾಪವು ಪಂಕದಲ್ಲಿ ಅದ್ದಿದರೂ, ಅಧೋ, ಪುಣ್ಯದ ವಿಚಾರವು ಕೈನೀಡಿರುವುದು,