ಪುಟ:ಹಗಲಿರುಳು.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು, ನಕ್ಷತ್ರಪತಿ;-(ಬಾಡಿಬಸವಳಿದು) ಆರ್ಯ, ಅಮೃತವನ್ನು ಕುಡಿದರೂ, ವಿಷ ವನ್ನು 'ಕಾರುತ್ತಿದ್ದ ಈ ದುಷ್ಟನ ನಡತೆಯನ್ನು ಎಷ್ಟೆಂದು ನಿಂದಿಸಲಿ ! ಆಗಲೇ, ತಪ್ಪನ್ನು ಮನ್ನಿಸಿ ವಾತ್ಸಲ್ಯದಿಂದ ಕೈಗೊಡುತ್ತಿರುವ ನಿನ್ನ ಕನಿ ಕರವನ್ನು ಏನೆಂದು ಬಣ್ಣಿಸಲಿ !! ಲೋಕದಲ್ಲಿ ನ್ಯಾಯಪರರಾದ ಮು ಖಂಡರಿಗೂ ಅನುಯಾಯಿಗಳಿಗೂ, ಇನ್ನು ಬೇರೆ ಕಲಿಯಬೇಕಾಗಿಲ್ಲ. ದೊಡ್ಡವರು ನಿನ್ನ ನಡತೆಯನ್ನು ಕಲಿತು, ಚಿಕ್ಕವರು ನನ್ನ ರೀತಿಯನ್ನು ಅಷ್ಟೂ ಬಿಟ್ಟರೆ, ಅದೆ ಸನ್ಮಾರ್ಗವಾಗುವುದು, ದುರ್ಬೋಧನೆಗೆಟ್ಟ ಸ್ನೇಹಿತ ರನ್ನು ನಾನೀಗ ದೂರುವುದೇಕೆ ? “ಹರಿಣನ ಚಿತ್ತಂ ನೆಲೆಗೊಂ | ಡರೆ ಬೇಡನ ಗಾನವೇನುಮಾಡಲಿಕುಂಟು ?” ಎಂಬಂತೆ, ನನ್ನ ಬುದ್ಧಿ ಭ್ರಂಶತೆಯನ್ನ ನಿಂದಿ ಸಬೇಕು, ಅದಿರಲಿ, ನಾನು ಇನ್ನೂ ಈ ಕಳಂಕದ ಮೋರೆಯನ್ನು ತೋರಿಸಿ, ಭೂಮಿಗೆ ಪಾಪದ ಕನ್ನಡಿಯನ್ನು ಹಿಡಿಯಬಹುದೆ ? ನಿಶ್ಚಯಿಸಿ ದಂತೆ ಈ ಕಡಲಿಗೆ ಬಿದ್ದು, ದುರಿತದ ಹೇಸಿಕೆಗೆ ಸಗಣಿಬಳಿದುಬಿಡುತ್ತೇನೆ. ದಯವಿಟ್ಟು ಅಪ್ಪಣೆಗೊಡಬೇಕು. ಆರ್ಯ:- ಪ್ರಿಯನೆ, ನಿನ್ನ ಈ ಮಾರ್ಪಾಡು ಮಹದಾನಂದಕರವು. ಆದರೆ, ಈಕಡೆಮಾತು ಅಷ್ಟೆ ಶೋಚನೀಯವು, ಆತ್ಮಘಾತವೆಂದರೆ, ಮೊದಲಿನ ಪಾಪಕ್ಕೆ ಬಡ್ಡಿ, ನೀನು ಮಾತಿನಂತೆ ಕೆಲಸವನ್ನು ಮಾಡಿದರೆ, ಪಶ್ಚಾ ಶಾಪದಿಂದ ಕಂಗಾಣದಿರುವ ಪಾಪಿಗಳಲ್ಲಿ, ಆ ದೃಷ್ಟಾಂತದಿಂದ ಕೆಟ್ಟ ಪರಿ ನಾಮವೆ ಆಗುವುದು, ಅದರಿಂದ ಇಡಿ ಲೋಕವೆ ಹಾಳಾಗಬಹುದು ನಕ್ಷತ್ರಪತಿ:- ಮುಂಗಾಣದ ನನ್ನ ಆ ಪಾಪಕ್ಕೆ ಈ ಪರಿಹಾರವೆ ತಕ್ಕುದಲ್ಲವೆ? ಆರ್ಯ:- ಛೀ, ಎಂದೂ ಅಲ್ಲ. ಕಣ್ಣುದೆರೆದರೂ ದಾರಿಗಾಣುವುದಿಲ್ಲವೆ? ನಕ್ಷತ್ರಪತಿ:- ಮುಂದೆ ಕತ್ತಲೆ ಮುತ್ತಿಕೊಂಡಿದ್ದರೆ ಕಾಣುವುದು ಹೇಗೆ ? ಆರ್ಯ:-ಆ ಕತ್ತಲೆಯ ಕಾಡನ್ನು ಒತ್ತಿ, ದಾರಿಬಿಡಿಸುವುದು ನಮ್ಮ ಕೆಲಸವು. ನಕ್ಷ ತುಪತಿ:- ಆದರೆ, ನನ್ನ ಈಗಿನ ಕರ್ತವ್ಯವೇನು? ಆರ್ಯ:- ಈಗ ನೀನು ಈ ಸಮುದ್ರದಲ್ಲಿ ಮುಳುಗಿ ಮಿಂದು, ಪಾಪವನ್ನು ತೊಳೆದು ನಡೆ 'ನಾಳೆ ಮೊದಲ್ಗೊಂಡು, ಕಾಲಕ್ಕಿಂತ ಮೊದಲೆ ನನ್ನಲ್ಲಿಗೆ