ಪುಟ:ಹಗಲಿರುಳು.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦. ಕನ್ನಡ ಕೋಗಿಲೆ, ಅಗೋಸ್ತು ೧೯೧೮. ಬರತೊಡಗು, ದಿನಗಳೆದಂತೆ, ಹೆಚ್ಚು ಹೆಚ್ಚು ಹೊತ್ತು, ನನ್ನ ಬಳಿಯಲ್ಲಿ ಇರಬೇಕಾದೀತು, ಆದರೆ ಈಗಲೆ ಹೇಳುತ್ತೇನೆ; ಮೊದಮೊದಲು ನೀನು ಕೃಷನಾಗಹತ್ತುವಂತೆ ತೋರುವೆ, ಮದ್ದಿನಿಂದ ರೋಗನಿವೃತ್ತಿಯಾಗುತ್ತಿರು ವಾಗ ಮುಂಚೆಮುಂಚೆ ರೋಗಿಯು ಮೈ ಕುಂದುವ ಹಾಗೆ, ನಿನ್ನಂಥ ದಾರಿ ದಪ್ಪಿದ ಪ್ರಾಯಸ್ಥ ವಿದ್ಯಾರ್ಥಿಗಳೂ, ಆದಿಯಲ್ಲಿ ಒಮ್ಮೆ, ಬದಲಿಕೆಯ ಗುಣವು ನೆಲೆಗೊಳ್ಳುವ ವರೆಗೆ, ಅಬಲರಾಗುತ್ತ ಬರುವುದು ಸ್ವಭಾವವು, ಆದರೆ, ಅದು ಅಪಾಯಸೂಚಕವಲ್ಲದುದರಿಂದ ಭಯವಿಲ್ಲ. ಆಮೇಲೆ ಬೋಧಿಸಿ ನಿನ್ನನ್ನು ಪರಿಪೂರ್ಣನನ್ನಾಗಿಯೂ ಕಳಾವಂತನನ್ನಾಗಿಯೂ ಮಾಡುವೆನು. ಬರಿದೆ, ಈಗಿನ ಕೆಲ ವಿದ್ಯಾರ್ಥಿಗಳ ಯೋಚನೆಯಂತೆ ಕಂಡಲ್ಲಿ ಕೈಹಾಕಿ ದರೆ ಗುರಿಮುಟ್ಟದು. ನಕ್ಷತ್ರಪತಿ:- ಹೇಗಾದರೂ ಗಾಯಮಾಡಿ ಮದ್ದು ಬಳಿದಂತಾಗುವುದರಿಂದ, ಈ ಕಪ್ಪು ಕಳಂಕವೊಂದು ನನ್ನನ್ನು ಬಿಡುವಂತಿಲ್ಲ. ಇಂಥ ದೋಷದ ನಿದ ರ್ಶನವು, ಲೋಕಕ್ಕೆ ಸನ್ಮಾರ್ಗದಾಯಕವೆಂಬುದನ್ನಾದರೂ, ಹೇಗೆ ನಂಬಲಿ? ಆರ್ಯ:- ಅದು ಯಾರನ್ನು ಬಿಟ್ಟಿದೆ? ಹುಟ್ಟುವುದೇ ಕಳಂಕದಿಂದ. ಆದರೆ, ಆ ದೋಷವನ್ನು ಒಳಗೆ ಅಡಗಿಸಿ, ನಿರ್ದೋಷಿಯೆಂದು ನಟಿಸುವುದೆ ವಂಚಕ ತನದ ತಪ್ಪು, ತನ್ನದನ್ನಾದರೂ, ತಿಳಿದು ಬಯಲಾಗಿಸಿದರೆ, ಅದು ಭೂಷಣವೆ, ನೀನು ಕಳಂಕವನ್ನು ಪ್ರಕಟಿಸಿದ ಕಾರಣ ಧರ್ಮವೆ ಆಯಿತು. ಪಂತಿಯಲ್ಲಿ ತಪ್ಪಿನ ಕೆಳಗೆ ಹಂಸಪಾದವನ್ನು ಎಳೆದಂತೆ, ನಿನ್ನಲ್ಲಿ ಆ ಕಳಂಕ ವಿರಲಿ, ಮೇಲೆ ತಳತಳಿಸುವ ಕಳೆಯ ಒಪ್ಪು ಹೊಳೆಯುತ್ತಿರುವುದಲ್ಲವೆ? ಕೈತಷ್ಟು ಪ್ರತಿಯೊಬ್ಬನನ್ನೂ ಬಿಡದಿರುವಂತೆ, ಇಂತಹ ರಾಜನನ್ನಾದರೂ ದೋಷದ ಬ್ರಹ್ಮಕಫಾಲವು ಬಿಟ್ಟಿಲ್ಲ ವೆಂದು, ಪ್ರಜೆಗಳಿಗೆ ಜಾಗ್ರತೆಯ ದೃಷ್ಟಾಂತವೆ ಆಗುವುದು, ಮುಂದಿನವನು ಮರೆತು ಕಲ್ಲನ್ನು ಎಡವಿದರೆ, ಹಿಂದಿನವನೂ ಎಡವಲೇಬೇಕೆಂಬ ಕಟ್ಟಳೆಯುಂಟೊ ? ಎಚ್ಚರಿತು ಕೆಳನೋಡಿ ಕಾಲಿಡಬೇಕೆಂಬ ವಿವೇಕವುಂಟಾಗುವುದೆ ? [ಆರ್ಯನ ಅಪ್ಪಣೆಯಂತೆ, ಸಮುದ್ರಸ್ನಾನ ಮಾಡಿ, ನಕ್ಷತ್ರಪತಿ ನಡೆದನು, ಮೂರ್ಖತೆಯ ಮರುಗುತ್ತಕ್ಕೆ ಪಶ್ಚಾತ್ತಾಪವೆ ಮೊದಲಿನ ಮದ್ದೆಂದು ಆರ್ಯನ ಅಭಿಪ್ರಾಯವು, ಹಾ ! ಇಂಥ ಹಿತಬೋಧನೆಯನ್ನೂ,