ಪುಟ:ಹಗಲಿರುಳು.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ ಸ್ವಾ ನ ನೆ. -•@ ಈ ನಮ್ಮ ಈ • ಹಗಲಿರುಳು' ಎಂಬ ಪುಸ್ತಕವು ಬೇರೆ ಯಾವ ಗ್ರಂಥದ ಆಧಾರದಿಂದ ಬರೆದುದೂ ಅಲ್ಲ, ಬರಿಯ ಹಗಲು ಇರುಳು' ಇವುಗಳ ರೀತಿಯಿಂದಲೆ ಆಕರ್ಷಿಸಿ ಬರೆದುದಾಗಿದೆ. ಕಾಲಪುರುಷ, ಸೂರ್ಯ, ಚಂದ್ರ, ಅಗ್ನಿ, ಕತ್ತಲೆ, ಮೇಘ, ಬೃಹಸ್ಪತಿ, ವಾಯು, ಶುಕ್ರ ಮೊದ ಲಾದವರನ್ನೆ ಪಾತ್ರಗಳನ್ನಾಗಿ ಮಾಡಿ, ನಮ್ಮ ಸಮಾಜದ ಚಿತ್ರವನ್ನೆ ಇದರಲ್ಲಿ ಚಿತ್ರಿಸಲ್ಪಟ್ಟಿದೆ. ಇದನ್ನು ಓದುವವರು, - ನಾವು ಈಗಿನ ಸಮಾಜದ ಗುಟ್ಟನ್ನೆ ಒಡೆದು ನೋಡುತ್ತೇವೆ' ಎಂದು ಭಾವಿಸಿದರೆ, ನಮ್ಮ ಪ್ರಯತ್ನವು ಸಫಲವಾದೀತು. ಸೂರ್ಯಚಂದ್ರರೆ ನಾಯಕರಾಗಿರುವ ಹಗ ಲಿರುಳುಗಳಲ್ಲಿ ನಮ್ಮ ಜೀವನವು ಸಾಗುವುದು, ಅದರಲ್ಲಿ, ಸೂರ್ಯನ ಆಡಳಿತದ ಹಗಲಲ್ಲಿ ನಾವು ಎಚ್ಚರಿತು ಹೇಗೆ ಕರ್ತವ್ಯವನ್ನು ಮಾಡುತ್ತೇವೆ ? ಚಂದ್ರನ ಯಜಮಾನಿಕೆಯ ಇರುಳಲ್ಲಿ ಹೇಗೆ ಸ್ಮೃತಿ ತಪ್ಪಿ ಹೋಗುತ್ತೇವೆ ? ಇರುಳೇ ಹಗಲಾಗಬೇಕೆಂದು ಪ್ರಯತ್ನಿಸಿದರೆ ಸಾಧ್ಯವೆ ? ಆ ಹಗಲಿರುಳುಗಳು ತಂತಮ್ಮ ಕೆಲಸಗಳನ್ನಷ್ಟೆ ಮಾಡಿದರೆ ಲೋಕಕ್ಕೆ ಎಷ್ಟು ಸುಖವಾದೀತು ? ಮೊದ ಲಾದುವುಗಳನ್ನು ವಿಚಾರಿಸಿದರೆ, ನಮ್ಮಲ್ಲಿ ಭಿನ್ನವಾಗಿ ತೋರುವ ಸಮಾಜರೋಗವು ವಾಸಿಯಾದೀತು. ಹಾಗೆಂದು ನಮ್ಮಲ್ಲಿ ಕೆಲವ್ಯಕ್ತಿಗಳು ಇತರರಿಗೆ ತಲೆಬಗ್ಗಿಸಬೇಕೆಂದಲ್ಲ. ಅವರವರು, ಲೋಕ ಹಿತವಾದ ಕಾಲಸೂಚಿತವಾದ ತಂತಮ್ಮ ಕೆಲಸಗಳಿಗಷ್ಟೆ ತಲೆಬಗ್ಗಿಸಿದರೆ ಎಲ್ಲವೂ ಸುಗಮವಾಗುವುದು. ಎಂದರೆ - ವ್ಯಕ್ತಿ ಸಮಾಜ ಇವುಗಳಲ್ಲಿ ದ್ವೇಷವನ್ನು ಇಡದೆ ಕಾರ್ಯದಲ್ಲಿ ನಿರತರಾದರೆ ಬಂಗಾರ ವಾಗುವುದು, ಇದರಲ್ಲಿ ಜಾತಿಭೇದದ ಕುಶ್ಚಿತ ಪ್ರಶ್ನೆಯುಂಟೆಂದು ನೆನಸಬಾರದು, ಆರ್ಯರ ಆಗಮನಕಾಲ ಮೊದಲ್ಗೊಂಡು, ಆರ್ಯ, ದಸ್ಯು' ಎಂಬ ಭೇದವಳಿದು ಹೇಗೆ : ಹಿಂದಿ' ಎಂಬ ಒಂದೆ ಹೆಸರು ನೆಲೆಗೊಂಡಿದೆಯೊ ಹಾಗೆಯೆ ಬ್ರಾಹ್ಮಣ ಬ್ರಾಹ್ಮಣೇತರ ಭೇದವಳಿದು ಸಮರ್ಥ ರಾದವರೆ ಮುಖಂಡರಾಗಬೇಕೆಂದೂ, ಅವರೇ ಆರ್ಯರೆಂದೂ ನಮ್ಮ ನಂಬಿಕೆ, ಆ ಅಭಿಪ್ರಾಯವೆ ಕಾಲವುರುಷನ ಮಾತಿನಲ್ಲಿ ಪ್ರತಿಬಿಂಬಿಸುತ್ತಿದೆ. ವಾಚಕಮಹಾಶಯರು ಈ ಚಿಕ್ಕ ಪುಸ್ತಕದಲ ತೋರುವ ಗುಣ ದೋಷಗಳನ್ನು ವಿಮರ್ಶಿಸಿ ಬಹಿರಂಗಪಡಿಸಿದರೆ ಮುಂದಿನ ಕಾರ್ಯಕ್ಕೆ ಸುಗಮವಾಗು ವುದು, ನಮ್ಮ ಕನ್ನಡದಲ್ಲಿ ಇಂಥ ಪುಸ್ತಕಗಳು ಅಪೂರ್ವವಾದ್ದರಿಂದ ಪ್ರತಿಯೊಬ್ಬ ಕನ್ನಡಿಗನೂ ಸೂಕ್ಷದೃಷ್ಟಿಯಿಂದ ವಿಚಾರಿಸಿ ತಿಳಿಸುವರೆಂದು ನಂಬಿದ್ದೇವೆ. ಇತಿ ಗ್ರ೦ಥ ಕಾರ , ←ಟ್ಟwhke--