ಪುಟ:ಹಗಲಿರುಳು.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು, ಒ೧. ಹಲವುಮಂದಿ ನೀಚರು, ಗೂಗೆಗಳಂತೆ, ಕಣ್ಮುಚ್ಚಿ ನಿಂದಿಸುತ್ತಾರೆ, ಕೆಲವರು ಕತ್ತಲೆಯಂತ, ತಿಳಿದವರ ಕಣ್ಣನ್ನೂ ಕಟ್ಟಲಿಕ್ಕೆ ಕೈನೀಡುತ್ತಾರೆ, ಬೇರೆ ಕೆಲವು ಮಂದಿ ಗೆದ್ದವನೇ ಮುದ್ದಣ್ಣ'ನೆಂದು ನೆಗೆದ ದೋಣಿಹತ್ತುವ ಹೇಡಿಗಳು ಏನೇನೋ ಗಾಳಿಮಾತಾಡುತ್ತಾರೆ. ಆದರೆ, ತೇಜಸ್ವಿಗಳೆಂದರೆ ಮಾತ್ರ, ಎಂದೆಂದೂ ದೃಢಗೆಡದ ತೇಜಸ್ವಿಗಳೆ, ಅಂಥವರಿಗೆ ವಿಧೇಯರಾಗಿ, ಎಲ್ಲರ ಇ ಯ .ಸ್ವಾಭಾವಿಕವಾಗಿ ತೋರಿಬರುವ ಹಲಕೆಲವು ತಪ್ಪುಗಳನ್ನಷ್ಟ ತಿದ್ದಿ, ಒಡಗೂಡಿ ಬಾಳಿದರೆ, ನೂರು ವರುಷದಲ್ಲಿ ಆಗಬಹುದಾದ ಏಳಿಗೆ ಮರೆ ವರುಷದಲ್ಲಿ ಸಾಧ್ಯವಾಗುವುದು, ಒಂದು ವಿಷಯದ ಸೇಡನ್ನು ಇನ್ನೊಂದಕ್ಕೆ ನೆಯುತ್ತಿದ್ದರೆ, ಅದು ಸಂಕರಜಾತಿಯಂತೆ, ಎಲ್ಲವು ಎಲ್ಲವಕ್ಕೂ ಸಂಬಂಧಿಸಿ, ಇಡಿ ಜನಾಂಗದ ಕೊರಳಿಗೇ ಒಯ್ಯುಚ್ಚ (ಉರುಳು)ವಾಗುವುದು, ಬರಿದೆ ಮುಂದಾಳುಗಳಲ್ಲಿ ತಪ್ಪನ್ನೆ ಒಡ್ಡು ತ್ತಿದ್ದರೆ ಹೇಗೆ ಸಾಗುವುದು ? ಉಪ್ಪಂದ ರಿಂದಲೆ ಊಟವಾಗುವುದೆ ? ಹಾಗೆಂದು, ಅವರೂ ಹಿಂದಾಳುಗಳಲ್ಲಿ ಭೇದವಿಡ ಬಾರದು, ಎರಡು ಪಂಗಡವೂ ಸಂಗಡಿಸಿ ಇರಬೇಕು, ನೋಡಿರಿ, ಕಲೆ ರಡು ನಡೆಯೊಂದು.] ಆರ್ಯ:- ಪ್ರಿಯಲೋಕವೆ, ಈಗ ಇಷ್ಟೊಂದು ಮಾತ್ರವೆ ಹೇಳಬೇಕಾಗಿದೆ. ಕಾಲಗತಿಯಿಂದ ನಾನು, ಈ ವಾತಾವರಣದಿಂದ ಅತ್ತ ಒಯ್ಯಲ್ಪಟ್ಟ ಕೂಡಲೆ, ನಮ್ಮೆಲ್ಲರ ಬಾಳುವೆಯೂ ಕಪ್ಪಾಯಿತೆಂದು ಎದುರಾಳುಗಳು ಎಣಿಸಿರ ಬಹುದು, ಆದರೆ, ನಾನು ಹೋದಹೋದಲ್ಲಿಗೆ ಆಗಾಗ ಬಂದು ನೆರವಾ ಗುತ್ತಿದ್ದ ನಿಮ್ಮ ಮಂತ್ರಶಕ್ತಿಯಿಂದಾಗಿ, ಅವರಿಗೆ ನನ್ನನ್ನು ಕೈಗಟ್ಟುವ ಧೈರ್ಯಶಕ್ತಿಗಳು ಇದ್ದಿಲ್ಲ. ಅದರಿಂದ, ಎತ್ತೆತ್ತಲೂ ಬೆಳಕಿನ ಬಯಲಾ ಯಿತು, ಕಿಕ್ಕಿರಿದ ಕತ್ತಲೆಯೆ ಮಾಯವಾಗಿ, ಪರರಿಗಿಟ್ಟ ಶೂಲ ತನಗೆ ಎಂಬ ಮಾತು ಅವರಿಗೇ ದೃಷ್ಟಾಂತವಾಯಿತು, ಕಡೆಗೂ, ನಿಮ್ಮಿಂದಲೆ ಈ ಪೂರ್ವಸ್ಥಿತಿ ಪ್ರಾಪ್ತವಾಯಿತು, ಇದೀಗ ಪ್ರಜಾಧರ್ಮದ ಲಕ್ಷಣವು ರಾಜಭಕ್ತಿ, ಸ್ವಾಭಿಮಾನ, ಲೋಕಧರ್ಮ, ಇವೆಲ್ಲವನ್ನೂ ಸದುದ್ದೇಶದ ಪರೋಪಕಾರದ ಬುದ್ಧಿಯೊಂದರಿಂದಲೆ ಸಾರ್ಥಕವನ್ನಾಗಿ ಮಾಡಿದ ನಿಮ್ಮ ರೀತಿನೀತಿಗಳನ್ನು ಹೇಳಿ ಮುಗಿಸುವಂತಿಲ್ಲ, ನಿಮ್ಮಲ್ಲಿ ಹೀಗೆ ಹಲವರು ನಡೆದರೂ, ಕೆಲವರು, ಇನ್ನೂ ದಾರಿಗಾಣಲಿಲ್ಲವೆಂದು ತೋರುವುದು.