ಪುಟ:ಹಗಲಿರುಳು.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಕೋಗಿಲೆ, ಅಗೊತ್ತು ೧೧೮. ಭವಿಯ ಜೀವನಕ್ಕೆ ಮರುಳಾಗಿ, ಅವರು ತತ್ಕಾಲದ ಏಳಿಗೆಯ ದಿಣ್ಣೆ ಯಿಂದ, ಬಗ್ಗಿ ಬೀಳುವಂತಿದ್ದಾರೆ. ಆ ಜೀವನವನ್ನೂ, ತಮ್ಮ ಸದ್ಗುಣಬದ್ಧ ವಾದ ಕೆಲಸದ ಕೊಡದಿಂದ ಉದ್ಧರಿಸಿ, ಶೋಧಿಸಿಯೇ ಸೇವಿಸತಕ್ಕುದು, ಇರಲಿ, ಅಂಥ ಚಂಚಲಚಿತ್ತರು, ಆ ತತ್ಕಾಲದ ನಿರಾಶೆಯಿಂದ ದಾರಿಗಾ ಣದ ಹುಚ್ಚುಗಟ್ಟುವುದು ಸ್ವಭಾವವು, ಅದರ ನಿವಾರಣೆಗಾಗಿ, ಇಡೀ ಜನಾಂಗದ ವಿದ್ಯಾಭ್ಯಾಸವೆ (National Education) ಮುಖ್ಯವು. ಈಗ ನಕ್ಷತ್ರಪತಿಯ, ದಾರಿಗೆ ಬರುವಂತಿದ್ದಾನೆ. ಅದರಿಂದ, ತಲೆಯ ಹೊರೆ ಹೆಗಲಿಗೆ ಬಂದಂತಾಗುವುದು. ಆದರೆ, ಆಧಾರವು ಇಳಿದಂತೆ ಲೋಕದಲ್ಲಿ ನಿರಂತರೋದ್ಯೋಗದ ಉತ್ಸಾಹವೂ ಇಳಿವುದುಂಟು. ಅದು ಮಾತ್ರ, ತೆಪ್ಪತ್ತರೋಗಿಯ ಅಪಥ್ಯ ಸೇವನೆಯಂತೆ, ಜನಾಂಗಕ್ಕೆ ಅಪಾ ಯಕರವು, ಮನಸ್ಸಿಟ್ಟು ಕೇಳಿರಿ, ನಮ್ಮ ಕರ್ತವ್ಯಭಾರವು ಇನ್ನೂ ಇಳಿ ದಿಲ್ಲ. ಲೋಕವೆಲ್ಲವೂ ರೂಢಿವಿರೋಧವಲ್ಲದ ಶಾಸ್ತ್ರೀಯಸುಧಾರಣೆ ಗಳನ್ನು ತಿಳಿದಮೇಲೆಯೆ, ನಮ್ಮ ಪ್ರಯತ್ನಕ್ಕೆ ಮುಗುಳಿಯನ್ನು ಇಡತಕ್ಕುದು. || ೧ | ಚೌಪದಿ | ಮೊದಲಿನದೆಯಾದರೂ ಧಾನ್ಯವನ್ನು ತಂದು | ವಿಧವಿಧಪರಿಷ್ಕಾರಗಳನೆಸಗಿ ಜನರು || ಸವಿಗೆ ಸರಿಯಾಗಿ ಭಕ್ಷ್ಯವ ಮಾಡುವಂತ | ನವಸುಧಾರಣೆ ಶಾಸ್ತ್ರಬೀಜದಿಂದಹುದು ಆಧಿಯಲಿ ನಮ್ಮಯ ಸುಧಾರಣೆಗೆ ಬಿತ್ತು | ವೇದವಾಯಿತು, ಶಾಸ್ತ್ರವಾಮೇಲೆ ಬಂತು || ಆಧುನಿಕಧರ್ಮಸಮ್ಮತವತವೆ ಮುಂದೆ | ಮೋದವೀವುದು ಶಾಸ್ತ್ರವಾಗಿ ಹಿತದಿಂದ | 11 ೨ | ನೀವೂ ಅದಕ್ಕೆ ಅನುಸಾರವಾಗಿಯೆ, ಕೆಲಸಕ್ಕೆ ಕೈಹಾಕಿರಿ, ನಿಮ್ಮ ಗಳು ಮುಕ್ಕುರುಕುವವೆಂದು ಎದೆಗೆಡಬೇಡಿರಿ, ಆ ವಿಘ್ನದ ಮೈ ಎರಡು. ಆದಿಯಲ್ಲಿ ಸವಿದೋರಿಸುವುದು ಒಂದು ; ಭೀತಿಬಿತ್ತುವುದು ಇನ್ನೊಂದು. ಮೊದಲಿನದು ನಂಜಿನ ಕಚ್ಛಾಯದಂತೆ, ಆದಿಯಲ್ಲಿ ಮಾತ್ರ ಸವಿ, ಎರಡನೆ ಯದು ಗೆರಸಿಹಟ್ಟಿ ಹಕ್ಕಿ ಹಾರಿಸುವಂತೆ, ಮೊದಲೆ ಅಬ್ಬರವು. ಎರಡಕ್ಕೂ ಭಾವಿeನವಿಲ್ಲ, ಬವಿ.