ಪುಟ:ಹಗಲಿರುಳು.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು, ಗುರಿ ಒಂದೆಯಾದಕಾರಣ, ಅವುಗಳಿಂದ ಮೈಮರೆಯ ಬಾರದು, ಅದಿರಲಿ, ಎಲ್ಲವನ್ನೂ ತಿಳಿದ ನಿಮ್ಮೊಳಗಿನ ದೃಢಚಿತ್ರರ ಕರ್ತವ್ಯದಕ್ಷತೆಯಿಂದಲೆ, ನನ್ನ ಗತಿ, ಇಷ್ಟರಲ್ಲಿ ಈ ನೆಲೆಗೆ ಬಂತು ಎಂದ ಮೇಲೆ ಹೆಚ್ಚೇಕೆ ಹೇಳಲಿ? ನಮ್ಮ ಈ ತೇಜಸ್ವಿ ಎಂಥೆಂಥ ಕಷ್ಟ ಸಂದರ್ಭಗಳಲ್ಲಿ ಯ ಎದೆಗೆಡದುದ ರಿಂದಲೂ, ಈ ಆರ್ಯಭೂಮಿ ಕಷ್ಟಗಳನ್ನು ಸೈರಿಸಿ ನಡೆದ ಕಾರಣದಿಂದಲೂ, ಅವರ ಮಹಿಮೆ ಎಂದೆಂದೂ ಶಾಶ್ವತವಾಗಿರಲಿ, ಈ ಭೂಮಿ, ಯಜ್ಞಯಾಗಾದಿ ಗಳಿಗೆ ಎಡೆಗೊಡುತ್ತಾ ಲೋಕೋಪಕಾರದಲ್ಲಿ ನಿರತವಾಗಿ ಕೀರ್ತಿಯನ್ನು ಪಡೆಯಲಿ, ಆಹವಿಸ್ಸುಗಳನ್ನು ಸ್ವರ್ಗಕ್ಕೆ ಸಾಗಿಸುವ ಮಹಾಧಿಕಾರವು ತೇಜಸ್ವಿಗೆ, ಅದಲ್ಲದೆ ಚಿತ್ರಭಾನು' ಎಂಬ ನನ್ನ ಹೆಸರಿನ ಬಿರುದನ್ನೂ ಅವನಿಗೆ ಕೊಡುತ್ತೇನೆ. ಜಲಧರಸಧಾಗತಿಗಳೂ, ತಮ್ಮ ಅಧಿಕಾರದ ನಿಜ ತತ್ವವನ್ನು ತಿಳಿದು, ಕಾರ್ಯಕ್ಕೆ ಕೈಹಾಕತಕ್ಕುದು, ಕಡೆಗೆ, ಇದೊಂದು ಮಾತು. ಲೋಕದಲ್ಲಿ , ತಂತಮ್ಮ ಮನಶ್ಯಕ್ತಿ ಕಾರ್ಯಶಕ್ತಿಗಳಿಗೆ ಅನು ಸಾರವಾಗಿಯೆ, ಆಯಾ ವ್ಯಕ್ತಿಗಳು ನಿಜವಾದ ಮುಂದಾಳುಗಳಾಗುವುದು, ಆ ಶಕ್ತಿಗಳಿಲ್ಲದೆ, ಹೊರಗಿನ ಆಡಂಬರದ ಬಲದಿಂದ ಒಮ್ಮೆ ಮುಂದಾಳುಗಳ ಹಂತಿಯಲ್ಲಿ ನಿಂತರೂ, ಅಶಕ್ತನಾದವನು ಎರಡನೆ ನಿಮಿಷದಲ್ಲಿಯೆ ಕೆಳ ಗಿಳಿಯಬೇಕಾಗುವುದು, ನಿಜವಾಗಿ ನೋಡಿದರೆ, ಮುಂದಾಳೆಂದರೆ, ಹಿಂದಾಳು ಗಳ ಊಳಿಗದವರು, ಅವರು, ಏಳಿಗೆಹೊಂದತಕ್ಕ ಉಪಾಯಗಳನ್ನು ಎಣಿಸಿ ಹೂಣಿಸುವ ಕೆಲಸವು ಆ ಮುಂದಾಳುಗಳನ್ನೆ ಹೊಂದಿರುವುದರಿಂದ ಹಾಗೆ ಹೇಳಿದೆನು. ಲೋಕದ ಸ್ಥಾವರಜಂಗಮಾತ್ಮಕವಾದ ಪ್ರತಿಯೊಂದು ವ್ಯಕ್ತಿಯಲ್ಲಿಯೂ ಅಗಾಧಶಕ್ತಿಯಂಟು, ಅವುಗಳೊಳಗೆ ಬಹಳಪಾಲು ಇನ್ನೂ ಪ್ರಕಟವಾಗಲಿಲ್ಲ. ಪ್ರಕಟವಾಗಿರುವವುಗಳಲ್ಲಿ ಯೂ ಮುಖ್ಯಮುಖ್ಯಾಂಶ ಗಳು, ಈಗಿನ, 'ಹಾಲನ್ನು ಹೆಂಡಕ್ಕೆ ಮಾರುವ ನವನಾಗರಿಕತೆಯಿಂದಾಗಿ ಮಾಯವಾದುವು, ವಿಚಾರಿಸಿ ನೋಡಿರಿ, ಅಂದಿನ ಸಂಜೀವನಮಣಿ ಮೊದ ಲಾದ ದಿವೌಷಧಗಳೂ ದಿವ್ಯಕಲೆಗಳೂ ಈಗ ಎಲ್ಲಿರುತ್ತವೆ? ಎಲ್ಲವನ್ನೂ, ಕಣ್ಣಿಗೆ ಮಣ್ಣು ಚೆಲ್ಲಿದ ಕಳ್ಳರು, ಕಣ್ಣೆರೆವಾಗ ಸುಲಿದುಕೊಂಡು ಓಡಿದ್ದಾರೆ. ಆದರೆ, ಅವರಿಗೂ, ಆ ದಿವ್ಯ ವಸ್ತುಗಳ ಪ್ರಯೋಗವಿವೇಕವು ಇಲ್ಲದಕಾರಣ, ಕುರುಬನಿಗೆ ಮಾಣಿಕವೂ, ಕಲ್ಲಾಗುವಂತೆ, ಎಲ್ಲವೂ ಎಲ್ಲೆಲ್ಲಿಯೊ ಚಡ ಹೋಯಿತು, ಆಗಲಿ, ಇನ್ನಾದರೂ ಪ್ರಯತ್ನಿಸಿ ಪ್ರತಿಯೊಬ್ಬನೂ ವಿದ್ವಾಂಸ 10 |