ಪುಟ:ಹಗಲಿರುಳು.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಕne, 'ಅಮೂತ್ತು ೧೯೧೮. ಕನ್ನಂತ ಬೇರೆಯವನೂ | ಎನ್ನುವ ವಿಜ್ಞಾನಬೀಜವಲ್ಲರ ಬಗೆಯೊಳ್ | ತನ್ನಂತೆ ಮೊಳೆಯಲಾರ್ಯಮ | ತೋನ್ನತಿ ಕನ್ನಡಿಸಲಾಶಿವಂ ಕೈಗೊಡಲಿ ||೬|| (ಎಲ್ಲ ರೂ ಹೋಗುವರು.) ಸೂತ್ರಧಾರನಾದ ಕಾಲನು:-(ಪ್ರವೇಶಿಸಿ) ಅ8 ! ಈ ಒಂದು ಹಗಲಿರುಳಲ್ಲಿ ಏನೆಲ್ಲ ಕೆಲಸವಾಯಿತು!! ಒಮ್ಮೆ ಹೊನ್ನಾದುದು ಇನ್ನೊಮ್ಮೆ ಮಣ್ಣಾ ಗಿಯೂ, ಮತ್ತೊಮ್ಮೆ ಮಣ್ಣಾಗಿದ್ದು ದು ಮೇಲೊಮ್ಮೆ ಹೊಕ್ಕಾಗಿಯ ತೋ ರಿತು. ಈ ಅಶಾಶ್ವತವಾದ ಮಾರ್ಪಾಟದಿಂದ ಏನು ಫಲ ? ಎಲ್ಲವೂ ನಾಟಕದ ವೇಷಾಂತರವಲ್ಲದೆ ಬೇರೇನೂ ಇಲ್ಲ.' ಎಂದು ಕೆಲವರು ಆಕ್ಷೇಪಿಸ ಬಹುದು, ಆದರೆ, ಅದು ಸರಿಯಲ್ಲ. ಈ ಪ್ರಪಂಚವೆ ಸುಳ್ಳು, ಮೇಲೆ ಮಾತ್ರ ಸತ್ಯದ ಬಣ್ಣ ಬಳಿದಿದೆ. ಆ ಬಣ್ಣವು, ಆಗಾಗ ಮಾಸಿಹೋಗು ವುದು ಪ್ರಕೃತಿ, ಅದರಿಂದ, ಪುನಃ ಬಣ್ಣಹಿಡಿಯಲಿಕ್ಕಾಗಿ ಒಂದಿಷ್ಟು ಬದ ಲಾವಣೆಮಾಡಬೇಕಾಗುವುದು, ಮೊದಲೊಮ್ಮೆ ಬೆಳೆಗೆಟ್ಟ ಹಳೆಮಣ್ಣನ್ನು ನೇಗಿಲಗುಳದಿಂದ ಮಗುಚಿ, ಎರಡನೆ ಅದರಲ್ಲಿ ಬಿತ್ತಿ ಬೆಳೆಮಾಡುವ ರೂಢಿಯೂ ಇದಕ್ಕೆ ಅನುಸಾರವಾಗಿಯೆ, ಹಾಗೆಯೆ, ಈ ಲೋಕವನ್ನು ಹೆಚ್ಚಾಗಿ ಕವಿದು ನಿಂತ ಅಸತ್ಯದ ಅಜ್ಞಾನಾಂಧಕಾರವೆಂಬ ಕತ್ತಲೆಮಣ್ಣನ್ನು, ಸತ್ಯ ಸೂರ್ಯನೆಂಬ ಗುಳದಿಂದ ಅಡಿಮಗುಚಿ ಜ್ಞಾನಬೀಜವನ್ನು ಬಿತ್ತಿ ಬೆಳೆಯಿಸಿ ಬೆಳಕಿಗೆ ತರಬೇಕು, ಆ ಕೃಷಿಯಲ್ಲಿ ಅನೇಕ ಮಿಥಾತ್ಮದ ಕ್ರಿಮಿಕೀಟ ಗಳು ನಾಶವಾಗಿ ಅವುಗಳೆ ಗೊಬ್ಬರವಾಗುವವು, ಆ ಮೇಲೆ ಅದರಲ್ಲಿ ಯೆ ಮೊಳೆತು ಬೆಳೆಯನ್ನು ಅಳಿಯಿಸುವ ಕಳೆಗಳನ್ನೂ, ಹೊರಗಿನ ಸೊಪ್ಪು ಸದೆ ಗಳನ್ನೂ ಆ ಪೈರಿಗಾಗಿ ಬೂದಿಮಾಡುವರು, ತಪ್ಪಿನ ನಾಶವೆ ಒಪ್ಪಿನ ಪೋಷಕವೆಂಬ ಹೇಳಿಕೆಯಂತೆ ಇದು ಯುಕ್ತವೆ ಆಗಿದೆ. “ಅಸತ್ಯಂ ಪಥ ಮಾರುಹ್ಯ ಸತ್ಯಂ ಪಶ್ಯಾಮಿ ಭಾರತ=ಎಲೈ ಅರ್ಜುನನೆ, ಅಸತ್ಯವನ್ನು ಹೊಂದಿ ಸತ್ಯವನ್ನು ನಿರೀಕ್ಷಿಸುತ್ತೇನೆ' ಎಂಬ ಪರಮಾತ್ಮನ ಉದ್ದೇಶವಾ ದರೂ ಇದೆ. ಈ ಹಗಲಿರುಳಿನ ಉದ್ದೇಶವೂ ಇದೇ, ಒಂದ ಮರದ ಎರಡು ಕೊಂಬೆಗಳು ಒರಸೊರಸುವಂತೆ, ಈ ಹಗಲಿರುಳುಗಳು ನಮ್ಮ ದೃಷ್ಟಿಗೆ ಅನ್ನೋನ್ಯ ವಿರೋಧಭಾವದಿಂದ ತೋರಿದರೂ, ನಿಜವಾಗಿ ಹಾಗಿಲ್ಲ, ಪಕ್ಷ