ಪುಟ:ಹಗಲಿರುಳು.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇರುಏ ತಿಯ ನಾಮಾಂತರದ ವಿದ್ಯೆಯ ರೂಪವೆ - ಪರಮಾತ್ಮನ ಅಂಗಚ್ಛವಿ. ಮಾಯಾದೇವಿಯೆಂಬ ಅಜ್ಞಾನಾಂಧಕಾರವೆ, ಆತನ ಹೊದಕೆ, ಜ್ಞಾನ ಹಸ್ತದಿಂದ ಆ ಹೆದಕೆಯನ್ನು ಎತ್ತಿದರೆ, ಪರಬ್ರಹ್ಮನ ರೂಪು ಪ್ರಕಟ ವಾಗುವುದು, ಅದನ್ನ ವಿದ್ಯಾಭ್ಯಾಸವೆಂದು ಹೇಳುವರು, ಅದನ್ನು, ಧರ್ಮಾನುಸಾರವಾಗಿ, ಎಷ್ಟೆಷ್ಟು ಚೆನ್ನಾಗಿ ಮಾಡುತ್ತಾರೆ ಅಷ್ಟಷ್ಟ ಪರ ಮಾತ್ಮನ ಬಂಧುಗಳಾಗುತ್ತಾರೆ, ಸಂಪೂರ್ಣವಾಗಿ ತತ್ವಾರ್ಥವನ್ನು ಅರಿತ ಮೇಲೆ, ಹೊಳೆ ಸಮುದ್ರದಲ್ಲಿ ಬೆರತುಹೋಗುವಂತ, ಪರಬ್ರಹ್ಮನ ಅಖಂಡ ಜ್ಯೋತಿಯಲ್ಲಿ ಐಕ್ಯವಾಗುತ್ತಾರೆ, ಎಷ್ಟೆಷ್ಟು ಪರಮಾತ್ಮನ ಹೊರಗಾಗಿ ತೊಳಲುತ್ತಾರೋ, ಅಷ್ಟಷ್ಟೂ, ಅವನ ಹೊದಕೆಯ ಅಂಧಕಾರವೇ ಕಣ್ಣು ಕಟ್ಟು ತಿದೆ. ಅದು, ರಾಜಸ್ಥಾನದ ದ್ವಾರಪಾಲಕನಂತೆ, ಅಪರಿಚಿತನನ್ನು ತಡೆದು ಬಿಡುತ್ತದೆ. ಆ ದ್ವಾರವನ್ನು ಬಿಟ್ಟು ಎತ್ತೆತ್ತ ಹೊಂಚುಹಾಕಿದರೂ, ಅಜ್ಞಾ ನವೂ, ಅಪರಾಧವೂ, ಅವನ ತಲೆಹೊರೆಯಾಗುತ್ತದೆ. ಕಳ್ಳದಾರಿಯಲ್ಲಿ ಮುಂದುವರಿದರೆ, ಆತನಿಗೆ ಶಿಕ್ಷೆಯ ಗತಿಯಾಗಿ ಬಹಿಷ್ಕಾರಹೊಂದಿ ಪಾಪಿ ಯಾಗುತ್ತಾನೆ, ಅದರಿಂದ, ವಿನಯ ವಿಧೇಯತೆ ಮೊದಲಾದ ಗುಣಗಳನ್ನು ಬಿಗಿಹಿಡಿದು, ಕಷ್ಟಗಳನ್ನು ಸೈರಿಸಿ ಪ್ರಯತ್ನಿಸಿದರೆ, ಒಂದಲ್ಲ, ಇನ್ನೊಂದು ಸಂದರ್ಭದಲ್ಲಿ ಆ ಜಗತ್ಪತಿಯ ಕರುಣೆಯನ್ನು, ರಾಜದ್ವಾರದಿಂದಲೆ ಪಡೆಯ ಬಹುದು, ವಿನಯಪೂರ್ವಕವಾದ ಕಷ್ಟವೆ, ಸಫಲವಿದ್ಯಾಭ್ಯಾಸದ ಪೂರ್ವ ರೂಪವೆಂಬುದನ್ನು ಯಥಾರ್ಥತತ್ಪರವಾದ ಲೋಕವೆಂಬ ವಿದ್ಯಾರ್ಥಿ ಮರೆಯ ಬಾರದು, ನಿಜವಾದ ವಿದ್ಯಾರ್ಥಿಗಳ ಇಷ್ಟಾರ್ಥವನ್ನು, ಜಗದ್ದು ರುವಾದ ಪರಮಾತ್ಮನು ಸಲಿಸಿ, ಗುರುವಿನಂತೆ ಶಿಷ್ಯ' ಎಂಬಂತೆ ಸಿದ್ಧ ಪಡಿಸದೆ ಇರ ಲಾರನು. ಈಗ, ಹಗಲೆಂದರೆ, ಕಣ್ಣೆರೆಯಿಸುವ ಆವಿದ್ಯೆಯೆಂದೂ, ಇರು ಳೆಂಬುದು, ಆ ಅಂಧಕಾರರೂಪದ ಕತ್ತಲೆಯಿಂದೂ, ಲೋಕಕ್ಕೆ ಮನ ಮುಟ್ಟಿರಬಹುದು, ಅದರಿಂದ, ಈ ಹಗಲಿರುಳಿನ ಕಥೆ ಎಲ್ಲವೂ, ಪವಿತ್ರ ಧಾರಿಯಾದ ಭಗವಂತನ ಎಣಿಕೆಯಂತೆಯೇ ನಡೆದಿದೆ. ಅವನಾದರೂ ಆಯಾ ವ್ಯಕ್ತಿಗಳನ್ನು, ಗಾಳಿಯ ಮೂಲಕ ಜಳ್ಳನ್ನು ತೂರಿ ನಲ್ಲ ನ್ನು ಆರಿಸುವಂತೆ, ಪರೀಕ್ಷಿಸಿಯೇ ಒಳಗೊಳ್ಳತಕ್ಕವನು, ಆ ಕೆಲಸಕ್ಕೆ ಸಾಧನರೂಪವಾಗಿ, ನನ್ನನ್ನು ನಿಯಮಿಸಿರುವುದು, ಅಕಟಾ ! ಈ ಗುಟ್ಟನ್ನು ತಿಳಿಯದ ಲೋಕವು, ಸುಖಬಂದಾಗ ತಾನೆ ಸಮರ್ಥನೆಂದು ಹಿಗ್ಗಿ, ದುಃಖವೊದಗಿದಾಗ, ಕೈ