ಪುಟ:ಹನುಮದ್ದ್ರಾಮಾಯಣಂ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

132 ಹನುಮದ್ರಾಮಾಯಣ, ಅರಸನ ಮತಮೆಂತಂತಂ | ತರಿಪುತೆ ನಿಜಪುತ್ರಮಿತ್ರಬಾಂಧವರಂ ತಾಂ || ಪೊರೆವ ಜನಮಿರ್ದೊಡೇಂ ತಾ | ನಿರುವುದೆ ತದ್ರೂಮಿಪಾಲನೊಳ್ ಸರ್ವಸ್ವಂ || ೪೫ || ಅರಿ ತಾನಾವಂ ಬಲಮೆನಿ | ತಿರುವುದು ಸತ್ತಾತಿಶಯಗಳೆಂತವಗೆನುತಂ || ಚರಮುಖದಿಂದಾಲಿಸಿ ಮಿಗೆ | ವಿರಚಿಪುದಾ ಕಾರ್ಯದನುವನರಿತುಂ ಜಾಣಂ | ೪೬ || ಮಾನುಷನೆಂದರಿಯದಿರಾ ! ಮಾನಾಥಂ ಪಿಂತೆ ಸುರರ ದೂರಿಂ ಧರೆಯೊಳ್ || ಮಾನವರೂಪಿಂದಿರ್ಷ್ಪo || ದಾನವರಂ ಮಥಿಸೆವೆಳ್ಳುಮೆಂಬ ನಿಮಿತ್ತಂ 1 ೪೭ || ಈ ಘಟಕರ್ಣಸುಪಾರ್ಶ್ವಕ | ಮೇಘನಿನಾದಾತಿಕಾಯಕುಂಭನಿಕುಂಭರ್ || ಕೂಗಿದೊಡೇಂ ಸಮರದೊಳಂ | ರಾಘವನಿದಿರಾಂತು ನಿಂದು ಪಳಚುವರೊಳರೇ || ೪೮ | ಆತಂ ಹರಿಯಲ್ಲದೊಡತಿ | ಘಾತಿಸುವನೆ ಘೋರತಾಟಕೆಯನುಂ ಗಿರಿಜಾ | ನೇತನ ಧನುವಂ ಮುರಿವನೆ | ಸೀತಾಪತಿಯಾದಿವಿಷ್ಣುವೆಂದರಿ ಮನದೊಳ್ 11 ೪೯ 11, ಅಸುರವಿರಾಧಂ ಬಡವನ | ಪಸುಳೆಯೆ ಮದ್ಭಗಿನಿ ಧೂರ್ತಖರದೂಷಣರುಂ || ನುಸಿಗಳೆ ಮಾರೀಚಾದಿಗ | ಳಸುಗಳೆವೊಡೆ ಸಾಧ್ಯಮುಂಟೆ ನರನಾದೊಡವಂ || ೫೦ || ಸುರದಾನವರೊಳಗಂ ನೀ | ನುರುಶೂರಂ ನಿನ್ನನ್ನೆದೆ ವಾಲಾಗ್ರದೊಳಂ | ಪರಿಬಂಧಿಸಿದಿಂದ್ರಜನಂ || ನೆರೆಕೊಂದವನಾವನೆಂದು ತಿಳಿ ಚಿತ್ತದೊಳಂ || ೫i ಕೇಳರಸ ನಿನ್ನ ಗರ್ವಮ | ನೇಳಿಸಿದತಿಶೂರಕಾರ್ತಿವೀರ್ಯಾರ್ಜುನನಂ ||