ಪುಟ:ಹನುಮದ್ದ್ರಾಮಾಯಣಂ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಥಮಾಶ್ವಾಸ. ತೋಷದೆ ಪೊಗಳುತ್ತಂ ಮಿಥಿ | ಲೇಶಂ ತನ್ನುನಿಪನೊಡನೆ ಮತ್ತಿಂತೆಂದಂ 11 ೫೯ | ಜನ್ನಮನೆಸಗಲ್ ತಿರೆಯಂ | ಮುನ್ನಂ ತಾಂ ಶೋಧಿಸಿ ಕಂಗೆಸೆದಳ್ ಚೆಂ || ಬೆನ್ನಿನ ಪೇಟೆಯೊಳೊರ್ವಳ್ || ಕನ್ಯಾಮಣಿಯಿವಳನೈದೆ ಪೊರೆದೆಂ ಮುನಿಪಾ || ೬೦ |! ಈ ತರುಣೀಮಣಿ ಭಾರ್ಗವಿ | ಭೂತೇಶನ ಧನುವನೆತ್ತಿದಂಗೆ ರಮೇಶ | ಗಾತಂಗೀ ಸುಕುಮಾರಿಯ || ನೋತೀವುದೆನುತ್ತೆ ನಾಕಮುನಿವರನೆಂದಂ || ೬೧ || ಅಂದುಮೊದಲಾಗಿ ಭೂಮಿಪ | ರಿಂದುಶಿಖಾಮಣಿಯ ಧನುವನೆತ್ತದೆ ಪೋದರ್ || ಇಂದೀ ರಾಘವಗೆನ್ನಯ | ನಂದನೆಯಂ ಕುಡುವೆನೆಂದು ಜನಕಂ ಪೇಳ್ತಂ || ೬೨ | ಮಿಥಿಲೇಶನಿಂತೆನಲ್ಲಶ | ರಥಸುತನೀ ರಘುಜನೆದ್ದು ಚಾಪವನಾಗಳ್ || ಶಿಥಿಲಂಗೆಯ್ಯಲೆ ಮನೋ | ರಥಪೂರಿತವಾದುದೆಂದನಾ ನೃಪವರ್ಯ 11 ೬೩ 11, ಭರದಿಂದಂ ಮತ್ತಿತನಂ || ಕರೆಯಿಸಿ ಸಿಂಗರಿಸಿ ಪುರವನಾಗಣ್ಣೀತಾ || ತರುಣೀಮಣಿಯಂ ಧಾರೆಯ | ನೆರೆದಿತ್ತಂ ರಾಮಚಂದ್ರಗಾ ಮಿಥಿಲೇಶಂ | ೬೪ | ತನ್ನಣುಗಿಯನೆನಗಿತ್ತು | ಮನ್ನಿಸಿ ಭರತಂಗೆ ಮದನುಜಗೆ ಸದ್ಗುಣಸಂ || ಪನ್ನ ಕುಶಧ್ವಜರಾಯನ | ಕನ್ನೆಯರು ಮದುವೆಗೆಯ್ದು ಕೊಟ್ಟಂ ಜನಕಂ || ೬೫ || ಪರಿಣಯವಾಗಲ್ಪನಕನ || ಪುರಮಂ ಪೊರಮಟ್ಟು ಮುಂದೆ ಬರೆದರೆ ಭರದೊಳ್ || ಪರಶುಧರನಡ್ಡವಿಸೆ ರಘು | ವರನಾತನ ಗರ್ವಪರ್ವತವನುರೆ ಕಿಳಂ 1 ೬೬ ||