ಪುಟ:ಹನುಮದ್ದ್ರಾಮಾಯಣಂ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

171 ಅಷ್ಟಮಾಶ್ವಾಸ. ಬಲಿಯಪ್ಪುದೆಂದುಮವನ | ಪೃಳಿಸಲ್ ಪೆರ್ಮರದೊಳಾಗಳಾ ಸಚಿವೇಂದ್ರಂ || ಧರೆಗುರುಳು ಬಿದ್ದು ರಕ್ತಂ ! ಸುರಿಯಲ್ ತಾಂ ಮುಚ್ಚೆವೋಗಿ ಮಗುಳಿದಿರಾದಂ || ೧೬೫ || ಕಡುಗಿನಿಯೆಂದುಬ್ಬಣಮಂ || ಜಡಿದುಂ ಬರೆ ಕಂಡು ನೀಲನಾ ದಳಪತಿಯಂ || ಪಿಡಿದುಂ ತಲೆಯಂ ಬಡಿದುಂ | ಪೊಡವಿಯೊಳಿದ್ದೊದೆದು ಕೊಂದನಮರರ್‌ ಪೊಗಳಲ್ |೧೬೬|| ಅಳಿದುಳಿದ ಬಲಮನೊಂದೇ || ಗಳಿಗೆಯೊಳಂ ಸದೆದು ಬಂದು ಮಣಿಯಲ್ಲವನಂ || ನಲವಿಂ ಪತಿಕರಿಸುತೆ ರಘು || ಕುಲತಿಲಕಂ ಪೊಗಳುತಿರ್ದ್ದನೆಂದಂ ಸೂತಂ || ೧೬೭ | -