ಪುಟ:ಹನುಮದ್ದ್ರಾಮಾಯಣಂ.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮಾಶ್ವಾಸ. 193 ಖ್ಯಾತಂ ಶ್ರುತಿಸಂಪನ್ನಂ || ನೀತಿಜ್ಞಂ ಸಮರಧೀರನತಿಕಾಯಾಖ್ಯಂ || ೧೫೭.). ಎಂಬನಿತರೊಳ ತಿಕಾಯಂ | ಮುಂಬರಿದುರವಣಿಸಿ ತರುಬುತಟಪೀಚರರಂ | ತಾಂ ಬಗೆಗಂ ತಾರದೆ ಕಮ | ಲಾಂಬಕನೆಡೆಗೈದೆ ಬಂದು ನೋಡಿದನವನಂ || ೧೫ಲೆ || ಈತಂ ಲಕ್ಷ್ಮೀಶನಲಾ || ಭೂತಳಭಾರಾಪಹಾರಕೋಸುಗಮಿಳೆಯೊಳ್ || ಚಾತನುಮಾದಂ ದಿಡಮೆಂ | ದೋತುಂ ಕಣ್ಮುರ್ಚ್ಚಿ ಜಾನಿಸಿದನತಿಕಾಯಂ || ೧೫೯ | ಸಮರದೊಳೀ ರಾಮನ ಪದ | ಕಮಲಕ್ಕರ್ಪಿಸುವೆನೆನ್ನ ತನುವನೆನುತ್ತಂ || ಸಮದೋಕ್ತಿಗಳಿಂ ಮಾಯಾ | ಭ್ರಮಿತರ್ ತಿಳಿವಂತು ಜರೆವುತನನಿದಿರಾದಂ || ೧೬೨ | ಗುಣಟಂಕೃತಿಗೆಯ್ಯಲ್ ದಿನ | ಮಣಿಕುಲವರನೈದೆ ಚಾಪಮಂ ಕಯ್ಯೋಳೆ ಲ || ಕ್ಷಣನಗ್ರಜಾತನಡಿಗ | ಮಣಿದುಂ ಬಿಲ್ಗೊಂಡು ತಿರುವನೇರಿಸಿ ನಿಂದಂ || ೧೬೧ || ತರುವಲಿ ನೀನೆನ್ನೋಳ್ಳಂ || ಗರಕಂ ವಾರಾಂತು ನಿಲ್ಲಲಾರ್ಪ್ಪೆಯ ಸೀತಾ || ವರನೆಂದುಂ ಸೆಣಸಿದೆ || ಡುರುಸತ್ವಂ ಕಾಣ್ಣು ಮೆದು ಗಜರ್ದಂ ದನುಜಂ | ೧೬೨ | ತರುಣಂ ತಾನಾದೊಡದೇ || ನುರುಸತ್ವಕೆ ಕೊರತೆಯುಂಟೆ ಕಣೆಯುಬ್ಬಬೆಯಂ || ದುರುಳತೆ ಫಡ ನೋಡೆಂದಂ | ಶರಮಂ ತೆಗೆದೆಚ್ಚು ಲಕ್ಷಣಂ ಬೊಬ್ಬಿರಿದು {{ ೧೬೩ || ಇಸಲಂಬಂ ಕತ್ತರಿಸುತೆ || ಬಿಸುಗಣೆಯಂ ತುತಿಸಿ ಸಿಂಜಿನಿಗೆ ವೇಗದೊಳಂ | ದಸರಂ ತೆಗೆದೆಚ್ಚುಂ ಗ | ರ್ಜಿಸ ಲಕ್ಷ್ಮಣನಾ ಕಳುಬದುಂ ಕಡಿದಿಟ್ಟಂ | 1