ಪುಟ:ಹನುಮದ್ದ್ರಾಮಾಯಣಂ.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

200 ಹನುಮದ್ರಾಮಾಯಣ. ಶ್ವೇತದ್ವೀಪದೊಳಂ ಸು | ಜ್ಯೋತಿರ್ಮಯಮಾಗೆ ಶೋಭಿಸುವ ಶೈಲಗಳಂ || ವಾತಭವಂ ಕಂಡುಂ ಸಂ | ಪ್ರೀತಿಯೋಳಂ ನೆಗೆದನದ್ರಿಶಿಖರಂಗಳಂ | ೩೦ || ಇವನಾರಿಲ್ಲಿಗೆ ನಡೆತಂ || ದವನೆನುತಂ ಕಾಪಿನಮರರುಂ ಗರ್ಜಿಸಿ ರಾ || | ಘವದೂತಂ ತಾಂ ತತ್ವಾ ! ರ್ಯವಿಶೇಷಮನೆಸಗೆ ಬಂದೆನೆಂದಂ ಹನುಮಂ | ೩೧ | ಸೆಳರ್ಗೊಂಡು ಕಾವಿನಮರರ | ಕುಳಮೆಯಿದುದಂತು ಕರಣಿಸಂಕುಳಮಾಗಳ್ || ಕಳೆಗುಂದಿಯಡಂಗಲ್ಯಪಿ | ತಿಳಕಂ ನೆರೆಯರಸುತಿರ್ದ್ದನಾ ಮೂಲಿಕೆಯಂ || ೩೨ || ಕಾಣದಿರಲ್ ಭರದಿಂ ತ | ತೊಣೀಧರಮಂ ಸಮೂಲಮೆನೆ ಕಿಳ್ಳು ಮೇಣ್ | ಪ್ರಾಣಕುಮಾರಂ ತನ್ನಯ | ಪಾಣಿಗಳೊಳ್ ತಳೆದು ನೆಗೆದನಂಬರಪಥದೊಳ್ || ೩೩ || ಸರಭಸವಾಶುಗಗತಿಯೋಳ್ | ಬರೆವರೆ ರಾವಣನ ಮತದೊಳಸುರರ್ ಬಂದುಂ | ತರುಬಿದೊಡವರಂ ವಾಲದೊ | ಳುರೆ ಬಿಗಿದುಂ ಕೆಡವುತಿರ್ದ್ದನಂಭೋನಿಧಿಯೋಳ್ || ೩೪ | ಗಾಹಿನ ನಕ್ಕ೦ಚರರ ಸ | ಮೂಹಮನುರೆ ವಾಲದಿಂದೆ ಸದೆದಳಂದಂ || ಊಹಿಸಲಸದಳಮೀಾತನ | ಸಾಹಸಮನೆನ್ನುತ್ತೆ ಪೊಗಳುತಿರ್ದ್ದರ್ ದಿವಿಜರ್ | ೩೫ | ಕರಧೃತಗಿರಿಶಶಿರವಿಗಳಿ | ನುರುವೇಷ್ಟಿತವಾಲಭುವನಚಕ್ರದೆ ಚಾಮಿಾ | ಕರಮಕುಟಸುಶೃಂಗಂ ಸುರ | ಗಿರಿಯಂದಂಬಡೆದು ಬಂದನಾ ಕಲಿಹನುಮಂ | a೬ ). ಇಳಿದಿರಿಸಿದನಚಲಮನಂ | ದೊಲವಿಂ ಜಾಂಬವನ ಪೊರೆಯೊಳದನೀಕ್ಷಿಸುತಂ |