ಪುಟ:ಹನುಮದ್ದ್ರಾಮಾಯಣಂ.djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

272 ಹನುಮದ್ರಾಮಾಯಣ, ಬೆತೆಯಿಂ ತಾನೆಂದಳ್ ಭೂ | ಸುತೆ ವಾನರದನುಜಸಭೆಯೊಳವನೀಶನೊಳಂ | ೨9 | ವಿಪಿನದೊಳಂ ತನ್ನಂ ದಶ | ಅಪನಂ ಕಡುಬಿನಿಂದ ಕೊಂಡುಯ್ಲಿಟ್ಟಂ | ಉಪವನದೊಳ್ ನಿಮ್ಮನೆ ತಾಂ || ಜಪಿಸುತುಮಿರ್ದ್ದೆ೦ ನಿಶಾಚರೆಯರುಪಹತಿಯಿಂ 11 ೨೩ | ಅವನಾನನಗಳನೀಕ್ಷಿಸಿ | ದವಳಲ್ಲಂ ಸಾಕ್ಷಿಯಿರ್ಷ್ಪನೀ ಪವನಸುತಂ || ತವನಾಮಾಮೃತಮಂ ಸವಿ || ಸವಿದುಂ ಜೀವಿಸಿದುದಲ್ಲದನ್ಯಮನರಿಯಂ || ೨೪ || ಜನಪತಿ ಕೇಳುಂ ತವಪದ | ವನರುಹಮಂ ಸೇರ್ದ್ದ ಮೊದಲಿನಿಂದಿಗೆ ನಿ || ಮ್ಮನೆ ಪರದೈವವೆನುತ್ತಂ || ಮನದೊಳ್ಳೆನೆವುತ್ತುಮಿರ್ಪ್ಪೆನನ್ಯರನರಿಯಂ | || ೨೫ | ಸತಿಗು ನಿಜದೈವಂ ನಿಜ | ಪತಿಯಲ್ಲಮೆ ತಿಳಿಯದಿರ್ಷ್ಟುದೇ ತವಚಿತ್ತಂ! ಇತರಾಪೇಕ್ಷೆಯೊಳೆನ್ನಯ | ಮತಿ ಬೆರೆಯದು ಕುಂದನೆಸಗೆನಿನವಂಶಕ್ಕಂ | ೨೬ | ಅನುಮಾನಮಿದೇತಕೆ ತಾ || ನನಲನ ಜಠರಮನೆ ಪೊಕ್ಕು ಪಾವನೆಯಪ್ಪೆಂ | ತನುವುಂ ಕುಂದದೆ ಕಂದದೆ | ಸನಿಹಕ್ಕಂ ಬಂದೊಡೆನ್ನನುಂ ಕಯ್ದಿಡಿಯಮ್ || ೨೭ || ಗಂಡನ ಚಿತ್ತಮನೊಲಿಸಲ್ | ಕುಂಡಂಗೆಝಿಂಧನಂಗಳಂ ತರಿಸುತೆ ಭರದಿಂ || ಕೆಂಡಗಳಂ ಮಾಡಿಸು ಮಾ | ರ್ತಾ೦ಡಂ ಸಲೆ ಮೆಚ್ಚಲೆಂದು ಲಕ್ಷಣಗುಸಿರ್ದಳ್ || ೨೮ || ಧರಣಿಜೆಯಿಂತೆನೆ ಲಕ್ಷಣ | ನರವಿಂದಾಂಬಕನ ಮೊಗಮನೀಕ್ಷಿಸ ತಿಳಿದುಂ || ವಿರಚಿಪುದವಳೆಂದಂದದೊ | ಳುರಿಯಂ ಸತ್ವರಮುಮೆಂದನಾ ರಘುವೀರಂ | | ೨೯ |