ಪುಟ:ಹನುಮದ್ದ್ರಾಮಾಯಣಂ.djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

273 ಚತುರ್ದಶಾಶ್ವಾಸ. ಸ್ವಾಮಿಯ ಸಮ್ಮತದಿಂದ | ಸೌಮಿತ್ರಿ ವಿಭೀಷಣಂಗೆ ಪೇಳಲ್ಕತ್ತಲ್ | ನೇಮದೊಳಾದುದು ನಿರ್ಮಲ | ಭೂಮಿಯೊಳುರುಕುಂಡಮದರೊಳಂ ತನಿಗಂಡಂ || ೫೦ | ಉರಿ ನೆಗೆದುದು ನಭಕಂ ಸುರ | ತರುಣಿಯರಚ್ಚರಿಯೋಳೀಕ್ಷಿಸುತುಮಿರ್ದ್ದರ್ ವಾ || ನರರಾಕ್ಷಸರುಂ ಚಿಂತಾ || ತುರದಿಂ ನೋಡುತ್ತುಮಿರ್ದ್ದರದನೇವೇಳ್ತಂ 11 ೩೧ { ಆ ಸಮಯದೊಳವನಿಜೆ ಸಂ | ತೋಷದೊಳಂ ರಾಮಚಂದ್ರನಂಘ್ರಗೆ ಮಣಿದುಂ || ಲೇಶಂ ಕಂದಿದೊಡೀ ಸಮ || ಕೇಶಂ ಕುಂದಿದೊಡೆ ನಿನ್ನ ಸತಿಯಿಂದಳ | ೩೨ | ಪರಮಪತಿವ್ರತೆಯಾದೊಡೆ | ಚರಣಕ್ಕನುಕೂಲಪತ್ನಿಯಾದೊಡೆ ತನಗೀ || ಉರಿ ಹಿಮವಕ್ಕುಮೆನುತ್ತಂ | ಪರಿತಂದಳ್ ಕುಂಡದೆಡೆಗೆ ನಿಶ್ಚಿಂತೆಯೊಳಂ 11 ೩೩ || ಸುರನಿಕರಕೆ ವಂದಿಸಿ ಭೂ | ಸುರರ್ಗ೦ ತಲೆವಾಗಿ ವಗಂ ಬಲವಂದುಂ || ಕರಮಂ ಮುಗಿದುಂ ವೈಶ್ವಾ | ನರನು ನೋಡುತ್ತುಮೆಂದಳುಚ್ಚಸ್ವರದಿಂ | ೩೪ || ಪತಿಪಾದಾಂಬುಜಸೇವಾ | ರತಿಯೊಳ್ತಾನಿರ್ದೋಡಿಂದು ಕೃಪೆಯಿಂದಂ ನೀ | ನತಿಶೀತಲನಾಗೆನುತುಂ || ಕ್ಷಿತಿಸುತೆ ದುಮ್ಮಿಕ್ಕಿದಳ್ ಸುಕುಂಡದೊಳಾಗಳ | ೩೫ | ಮೊರೆಯಿಟ್ಟರ್ ಸುರಸತಿಯರ್ | ಮರುಗಿದರಾಸುರರ ತರುಣಿಯರ್‌ ಕಣ್ಣನಿಯಂ | ಕರೆದರ್ ವಾನರರುಂ ರಘು | ವರನೀಕ್ಷಿಸುತಿರ್ದ್ದನಗ್ನಿಕುಂಡವನಾಗಳ | | ೩೬ || ಬಂದರ್ ಶಶಿಶೇಖರಸಂ | ಕ್ರಂದನಪರಮೇಷ್ಟವಾಯುಕಾಲಕುಬೇರರ್ |