ಪುಟ:ಹನುಮದ್ದ್ರಾಮಾಯಣಂ.djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

216 ಹನುಮದ್ರಾಮಾಯಣ. ಕಾಂತನನತಿಮುದದಿಂದಂ | ತಾಂ ತಳ್ಳಿಸಿ ನುತಿಸಿ ಪೇಳ ನಾ ಸಮಯದೊಳಂ || ೫೦ | ವಿಧಿಸುರಪಾದ್ಯರ ನುಡಿಯಂ | ಪದುಳಂಗೆಯ್ದ ವನಿಯಲ್ಲಿ ನರರೂಪದೊಳಿಂ | ದುದಯಿಸಿ ದಶಕಂಧರನುಂ | ಸದೆದುಂ ಪಾಲಿಸಿದೆ ಪರಮಪೂರುಷ ಜಗಮಂ | ೫೩ | ಭರತಂ ಕಾದಿರ್ಷ್ಪo ನಡೆ | ಪುರಕಂ ಪಟ್ಟಾಭಿಷಿಕ್ತನಾಗಿ ತುರಂಗಾ || ಧ್ವರಮುಖಮಖಗಳನಾಗಿಸಿ || ಧರಣೀಸುತೆವೆರಸು ರಾಜ್ಯ ಮಂ ಪೊರೆಯೆಂದಂ || ೫೪ | ತವಪಿತದಶರಥನೃಪಪುಂ | ಗವನೆಳಂದಿರ್ಷ್ಪನಾತನಂ ಸತ್ಕರಿಸಂ | ದವಿಲಂಬದೊಳಂಭೋರುಹ | ಭವವೆರಸುಂ ಪೋದನಭವನಭಾಧ್ವದೊಳಂ | 11 ೫೫ | ಮಿಸುವ ವಿಮಾನದೊಳಂ ರಂ | ಜಿಸುವಂಗಚ್ಛವಿಯ ಬೆಡಗಿನಿಂದಾ ಧರೆಗಂ | ದಶರಥನೆರೆ ಕಾಣುತ | ಮೊಸೆದೆಳ್ಳುಂ ರಾಮನೆರಗಿದಂ ತತ್ಪದಕಂ !! | ೫೬ || ರಾಮನನಾಲಿಂಗಿಸಿ ಸು | ಪ್ರೇಮದೊಳಂ ಬಲದ ತೊಡೆಯನೇರಿಸಿ ಬಳಿಕಂ || ಭೂಮಿಜೆಯಂ ನೇವರಿಸುತ | ಸೌಮಿತ್ರಿಯನೆಡದ ತೊಡೆಯನೇರಿಸಿದನವಂ || ೫೦ | ನೀನೆಸಗಿದ ಸುಕೃತಿಗಳಿಂ || ಜಾನಕಿ ತಾಂ ಗೆಯ್ದ ಪುಣ್ಯಚಾರಿತ್ರ್ಯಗಳಿಂ || ದಾನಿಂತಿರ್ಪ್ಪೆ೦ ದಿನದೊಳ್ | ಭಾನುಕುಲೋದ್ಭವರ್ಗವಾಯ್ತು ಸದ್ದತಿ ಮಗನೇ || ೫ಲೆ || ಅನುದಿನಮಗಲದೆ ಲಕ್ಷ್ಮಣ | ವನುವಿಂ ತವಚರಣಸೇವೆಯಲ್ಲಿದ್ದುದರಿಂ || ಮನಮತಿಹರ್ಷoಗೊಂಡುದು || ಮುನಿವೇಷಮನುಳಿದು ರಾಜ್ಯಮಂ ಪೊರೆ ಮಗನೇ || ೫೯ |