ಪುಟ:ಹನುಮದ್ದ್ರಾಮಾಯಣಂ.djvu/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

286 ಹನುಮದ್ರಾಮಾಯಣ, ದನುವಿಂದಂ ಭೂಮಿಾಸುರ | ಜನಕತಿಮುದದಿಂದೆ ಕೊಟ್ಟು ಸತ್ಕರಿಸಿದನಯ್ \\ ೧೨೭ || ಪುರಮಂ ಸಿಂಗರಿಸುತೆ ರಘು | ವರನಂ ನೋಡುವೊಡೆ ಸಚಿವಸೇನಾನಿಗಳಂ || ಬರಿಸಮ್ ವೇಗದೊಳೆಂದುಂ | ಭರತಂ ಶತ್ರುಘ್ನುನೊಡನೆ ಪೇಳ್ವಂ ಮುದದಿಂ _|| ೧೨೮ || ಆದುದು ಸಿಂಗರಮಾ ಪುಟ | ಭೇದನದೊಳ್ ಶತ್ರುಹರನ ನೇಮದೊಳಂದುಂ || ಮೋದದಮಂಗಲವಾದ್ಯದ || ನಾದಂ ತೀವಿದುದು ನೆರೆದುದಾ ನಗರಜನಂ | ೧೨೯ !! ಅನಿತರೊಳಂಬರದೊಳ್ ಮೀನು | ಮಿನುಗುತುಮೆಳ್ಳಂದುದೈದೆ ರಜತಾಚಲಮೋ || ಎನೆ ಧನದವಿಮಾನಂ ಶ್ರೀ | ಹನುಮಂ ಕಂಡಿದೆಕೊ ಬಂದನವನಿಪನೆಂದಂ | ೧೩೦ | ತೊಳಪ ವಿಮಾನದ ಮಧ್ಯದೊ | ಲೋಲವಿಂದಂ ಮಿಂಚಿನೋಲ್ ವಿರಾಜಿಪ ಸೀತಾ || ಲಲನೆಯನೊಡಗೊಂಡೊಪ್ಪುವ | ಜಲಧರನಿಭ ಕಾಯನಾತನೇ ರಘುವೀರಂ || ೧೫೧ | ಶರಚಾಪಸುಖಡ್ಡ ಗಳಂ | ಧರಿಸುತೆ ನಿಂದಿರ್ಪ್ಪನವನೆ ಲಕ್ಷ್ಮಣದೇವಂ | ಕರಮಂ ಮುಗಿದುಂ ಭಕ್ತಿಯೋ | ಳಿರುವಾತನೆ ಸೂರ್ಯಪುತ್ರನವನಂ ನೋಡಾ | C೩೨ || ನಲವಿಂದಂ ರಾಮನ ಪದ | ನಲಿನಮನೀಕ್ಷಿಸುತೆ ಕಾಲಮೇಘಾಕೃತಿಯೊಳ್ || ಬಲದೊಳಗಿಪ್ಪಣನೆ ರಾಕ್ಷಸ ! ಕುಲತಿಲಕಂ ರಾವಣಾನುಜಾತಂ ನೋಡಾ | ೧೩೩ || ಅವಸಂಗದನವನನಲಜ || ನವನಜಸುತನವನೆ ವೃಷಭನವನೆ ಸುಷೇಣಂ || ಅವನಂಜನೆಯಧಿನಾಯಕ | ನವನೇ ನಳನವನೆ ಮೈಂದನವನೇ ಋಕ್ಷ || ೧೩೪ ||