ಪುಟ:ಹನುಮದ್ದ್ರಾಮಾಯಣಂ.djvu/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

298 ಹನುಮದ್ರಾಮಾಯಣ. ಲಲಿತಕಿರೀಟಾಂಗದಕುಂ || ಡಲಮುಖ್ಯಾಭರಣಭೂಷಿತಾಂಗಂ ಸೀತಾ | ಲಲನಾನ್ವಿತವಾಮಾಂಕಂ | ಜಲಜಾಕ್ಷ ರಾಮನೊಪ್ಪಿದಂ ವಿಷ್ಟರದೊಳ್ || ೪೫ | ವಿಧಿಸುತಮುಖ್ಯರ್‌ ಚಾಂಬ | ನದಕಲಶಗಳೊಳ್ ಚತುಸ್ಥಮುದ್ರಾಂಬುವನುಂ || ನದಿಗಳಜಲಮಂ ತುಂಬಿಸಿ | ಮುದದಿಂದರ್ಚಿಸಿದರೆದೆ ತುಂಭಗಳಂ | ೪೬ || ಶ್ರುತಿಮಂತ್ರಗಳಿ೦ ಕನಾ | ತತಿವೆರಸುಂ ವಿಮಲಕುಶಗಳಿಂ ಪ್ರೋಕ್ಷಿಸುತುಂ | ಪ್ರತಿಧಿಕ್ಷಿತಿಸುರರುಂ ರಘು | ಪತಿಗಂ ಪಟ್ಟಾಭಿಷೇಕಮಂ ವಿರಚಿಸಿದರ್ | ೪೭ || ಮಿಸುನಿಯ ಕಾಂಚನದಂಡದ | ಶಶಿಬಿಂಒಮನ್ನೆದೆ ಪಳಿವ ಬೆಳೆಡೆಗಳನುಂ || ಬಿಸಜಾಕ್ಷನ ಮುಕುಟದ ಮೇ | ಲೈ ಸೆವೊಲ್ ಸಲೆ ಪಿಡಿದು ನಿಂದನಾ ಶತ್ರುಷ್ಟಂ | ೪ಲೆ || ಚಾರುತರಚಾಮರಗಳಂ | ಸೂರಾತ್ಮಜದನುಜನಾಧರಿರ್ವರ್ ಪಿಡಿದರ್ || ಮಾರುತಿಯನುಪಮಕಾಂಚನ | ಹಾರಮನರ್ಪ್ಪಿಸಿದನಬ್ಬ ಪತ್ರಾಂಬಕಗಂ || ರ್೪ | ನವಮಣಿಮಯಮಾಲಿಕೆಯಂ | ದಿವಿಜೇಶಂ ರಾಘವಂಗೆ ತಾನೊಪ್ಪಿಸಿದಂ || ಭವವಿಧಿದಿಕೃತಿಮುಖಸುರ | ನಿವಹಂ ನುತಿಸುತ್ತುವಿದ್ದುದದನೇವೇಂ || ೫೦ || ದುಂದುಭಿ ಮೊಳಗಿದುದಮರರ | ವೃಂದಂ ಕರೆದತ್ತು ಪುಷ್ಪವೃಷ್ಟಿಯನಾಗಳ್ || ಗಂಧರ್ವರ್ ಪಾಡಿದರಾ | ನಂದದೆ ನರ್ತಿಸಿದರಮರವಾರಾಂಗನೆಯರ್ | ೫೦ || ಸುಲಲಿತರತ್ಯಾಭರಣಂ | ಗಳನಿತ್ಯರ್‌ ದಿಗಧಿನಾಧರವಧೀಶರ್ ಮಂ ||