ಪುಟ:ಹನುಮದ್ದ್ರಾಮಾಯಣಂ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

80 ಹನುಮದ್ರಾಮಾಯಣ, ಶಾರದಘನಮಾಚ್ಛಾದಿಸೆ | ಕ್ಷೀರಾಬ್ಬಿಯ ಬೆಡಗನಾಂತು ರಾರಾಜಿಸುಗುಂ || ೧೨೭ | ಮುಂಬರಿವ ಮರಳೂ ತೆರೆಯ ಕ | ದಂಬಗಳಿಂ ನಿಖಿಲವಾರಿಚರನಿಸ್ತನದಿಂ || ಕುಂಬಿನಿಯಂ ಮಿಗೆ ಬಳಸಿ | ರ್ಪಂಬುಧಿಯಂ ಕಂಡು ವಾಲಿಸುತನಿಂತೆಂದಂ || ೧೨೮ || ಈ ವಾರ್ಧಿಯನುಂ ದಾಂಟುವ | ನಾವಾತನೋ ದಿವಿಜದೈತ್ಯರೊಳ್ಳಿಜಮಂ ಮಾ | ದೇವನೆ ಬಲ್ಲನೆನುತ್ತಂ || ಕೋವಿದಪಟುಭಟರ ಮೊಗಮನೀಕ್ಷಿಸುತೆಂದಂ || ೧೨೯ || ಸುರಪನ ಪೌತ್ರನೊಳಾ ಕಪಿ | ವರರೊರೆದರ್ತಮ್ಮತಮ್ಮ ಬಲಪೌರುಷಮಂ | ತರಿಸಲ್ಲ ಶಯೋಜನಸಾ | ಗರಮಂತೆತ್ತು ಯೋಜನಂ ಶರನಿಧಿಯಂ \\ ೧೫೦ || ವಿಧಿತನುಜಾತಂ ಪೇಳ್ತಂ ! ಮುದುಪಂ ತಾನಾದೆನ್ನೆದೆ ಕಡುಜವ್ವನದೊಳ್ || ಮುದದಿಂ ಮೂರೇಳ್ತಳೊಳ್ | ವಿಧಿಯಿಂ ತೈವಿಕ್ರಮಂಗೆ ಬಲವಂದಿರ್ಪೆಂ || ೧೩೧ | ಯುವರಾಜನ ಕೇಳ್ತಾನರ | ನಿವಹದಿನಾಂ ಸುದಶಯೋಜನಾಧಿಕನಸ್ಸೆಂ || ಭುವನಧಿಯಂ ನೆಗೆವುದರೊಳ | ಗವಸಾನಂ ತಾನದಲ್ಲಿ ತೀರದದೆನ್ನಿಂ || ೧೩೨ | ಎನಲಂಗದನಿಂತೆಂದಂ | ವನಧಿಯನಾಂ ದಾಂಟಲಾರ್ಪೆನಾದೊಡಮಿ || ಜನಪದಕಂ ಮಗುಳ್ಳೆಯ | ರ್ಪೆನೊ ಬಾರೆನೊ ಎಂಬುದಿಂದು ತಿಳಿಯದು ಕೇಳಮ್ ||೧೩೩! ಶತಯೋಜನಮಂ ಲಂಘಿಸಿ | ದಿತಿಜಾತಾಧಿಪನ ನಗರಮಂ ಪೊಕ್ಕುಂ ಭೂ || ಸುತೆಯಂಘಿಯನೇಂ ಕಾಣೆನೊ | ಯತನಂ ತನಗಿಲ್ಲವೆಂದು ಯೋಚನೆಗೆಯಂ || ೧೩೪ |