ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ನಡೆದುಬಂದ ಲಕ್ಷ್ಮಿ
೮೫

ನಿಂಗನು ಮೊದಲೇ ಕುಡಿದವನು; ಅವಳ ಅಭಿಮಾನ-ಧೈರ್ಯ ಗಳ ಮಾತಿನಿಂದ ಇನ್ನಿಷ್ಟು ರೇಗಿದನು. 14 ಇಲ್ಲ ಬಿಡ, ನಿನ್ನ ಸೊಗ ಸಾಕೂ ಗಂಡೀನಾದಾರ ಇಲ್ಲ ಯಾವ ಹೆಂಗಸು ಬಾಳೇವ ಮಾಡಿ ಮುಂದಕ ಬಾಳ? "

"ಚೀ ಬಿಡ ಮೂಳಾ. ಗಂಡ ಸತ್ತ ರಂಡೀಮುಂಡಿ ಹಾಂಗ ಕಾಲಾ ಕಳ್ಳಾಕ ನಾ ಗಟ್ಟದೆನಿ.... ಇಟ್ ದಿನಾ, ನಾಕಾರ ವರ್ಸದ್ದಿ ನಾ ನಿನ್ನ ಚಾಕ್ರಿ ಮಾಡಿ ಗರ್ತಿ ಹಾಂಗ ಬಾಳೆನ ಮಾಡಿದರೂ ಮಂದಿ ನನಗ ಮತ್ತ ಬಸವೀನ ಅನ್ನಿಲ್ಲ ? ಇನ್ ಮ್ಯಾಗ ಹಾಂಗs ಇದ್ದ ಕ್ಯಾರಾ ಗರತಿ ಗಂಗವ್ವ ಅನಿಸಿಗೊಂಡ ಸಾಯ್ತಿನಿ, ನಿಂಗ ಕೈಯೆತ್ತಿದ. ಧೈರ್ಯವಂತಳಾದ ದ್ಯಾವಕ್ಕನ್ನು ಚಟ್ಟನೆ ಅವನ ರಟ್ಟಿ ಕಿತ್ತು ಹೊರಕ್ಕೆ ಹಾಕಿ ಅಗಣಿ ಹಾಕಿದಳು,

ಈಗ ನಮ್ಮ ದ್ಯಾಂನಕ್ಕನ ವಯಸ್ಸು ಸುಮಾರು ೩೫-೪೦ ಕ್ಕೆ ಬಂದಿದೆ. ಹೂವಿನ ಸುಗ್ಗಿ ಯಲ್ಲಿ ಹೂವಿನ ತೋಟದ ಗುತ್ತಿಗೆ ಹಿಡಿದು ಹೂವುಗಳನ್ನು ಮಾರಿ, ಒಂದಕ್ಕೆರಡು ರೊಕ್ಕ ಮಾಡಿದಳಂತೆ; ಮಾವಿನ ಸುಗ್ಗಿಯಲ್ಲಿ ಮಾವಿನ ತೋಟಗಳನ್ನು ಹಿಡಿದು, ಸಾಹುಕಾರರ ಬಳಿ ಒಂದು ರೂಪಾಯಿಗೆ ತಿಂಗಳಿಗೆ ಎರಡಾಣೆಯಂತೆ ಬಡ್ಡಿ ತೆತ್ತು, ತೋಟದಲ್ಲಿ ಹಗಲು ರಾತ್ರಿಯೆನ್ನದೆ, ಮಳೆ-ಗಾಳಿ-ಚಳಿಯೆನ್ನದೆ, ಕೂಳು ನೀರುಗಳಿಗೆ ಕೂಡ ಅಗ್ಗ ವಾಗಿ, ನಿದ್ರೆ ಕಟ್ಟಿ, ಜೊತೆಗೆ ಎರಡು ಹೆಣ್ಣಾಳು, ಎರಡು ಗಂಡಾಳುಗಳನ್ನಿಟ್ಟುಕೊಂಡು, ರಕ್ತದ ನೀರನ್ನು ಮಾಡಿದಳಂತೆ. ಇಂದಿಗೂ ಅವಳು ಪೇರಲ ಮಾವಿನ ತೋಟಗಳನ್ನು ಹಿಡಿಯುವದನ್ನು ಬಿಟ್ಟಿಲ್ಲ, ಗಂಡಸಿಗಿಂತ ಧೈರ್ಯವಂತಳಾಗಿ ದುಡಿಯುವದನ್ನು ನಾನು ಕಣ್ಣಾರೆ ಕಾಣುತ್ತಿರುವೆ.

ಮೂವತ್ತೈದು ವಯಸ್ಸಿನ ನಡುಹರೆಯದವಳಾಗಿದ್ದರೂ ಇನ್ನೂ ಅವಳ ಮೈ ಕಟ್ಟು ಅದೆಷ್ಟು ಚೆಕ್ಕ ! ಎಳೆಹರೆಯದ ತಳಿಯ