ಟಾಂಗಾ ಸ್ಟೇಶನ್ನಿಗೆ ಬಂದಿತು. ಮುಂಬಯಿಗೆ ಹೋಗುವ ಗಾಡಿಯೂ ಬಂದಿತು. ಇಬ್ಬರೂ ಫರ್ಸ್ಟಕ್ಲಾಸಿನ ತಿಕೀಟು ತೆಗೆದು ಕುಳಿತರು. ರಾತ್ರಿಯ ವೇಳೆಯಾದ್ದರಿಂದ ಗಾಡಿಯಲ್ಲಿ ಗಲಾಟೆ ವಿಶೇಷವಾಗಿರಲಿಲ್ಲ. ಫರ್ಸ್ಟಕ್ಲಾಸಿನಲ್ಲಿಯಂತೂ ಯಾರೂ ಇರಲಿಲ್ಲ. ಹೊರಟ ಇಪ್ಪತ್ತು ತಾಸುಗಳೊಳಗಾಗಿ ಮುಂಬಯಿಗೆ ಬಂದು ಮುಟ್ಟಿದರು. ಗಾಡಿಯನ್ನಿಳಿದು ಮೊದಲು ಚಿ ನಿ ವಾ ಲ ಗ ಟ್ಟಿ ಗೆ ಹೋದರು.
ನಮ್ಮ ಹಿಂದುಸ್ಥಾನಕ್ಕೆ ಮೊದಲೇ ಬಡತನ- ಬ ರ ಗಳು ಹೆಚ್ಚು, ಅದಕ್ಕಾಗಿ ಎಲ್ಲಿ ನೋಡಿದಲ್ಲಿ ಅಸತ್ಯದ, ಅಪ್ರಾಮಾಣಿಕತೆಯ, ಸ್ವಾರ್ಥದ ವ್ಯಾಪಾರವೇ ಕಂಡುಬರುತ್ತಿದೆ.
ಮೋತೀಬಝಾರದಲ್ಲಿ ಒಂದು ಅಂಗಡಿಯ ಕಟ್ಟೆಯ ಮೇಲೆ ಕುಳಿತಿದ್ದ ಒಬ್ಬ ಇರಾಣಿ ವ್ಯಾಪಾರಸ್ಟನ ಬಳಿಗೆ ಬಂದರು; ತಮ್ಮ ಬಳಿಯಿದ್ದ ಒಡವೆಗಳನ್ನು ಮಾರಲಿಕ್ಕೆ ಕೊಡುವದಾಗಿ ಅವನಿಗೆ ಹೇಳಿದರು. ಅವೆಲ್ಲವುಗಳನ್ನೂ ಅವನು ನಾಲೈದು ನೂರು ರೂಪಾಯಿಗಳಿಗೆ ಕೇಳಿದನು; ಹುಡುಗರಿಗೆ ವ್ಯಾಪಾರ ಬಗೆಹರಿಯಲಿಲ್ಲ; ಹಿಂತಿರುಗಿದರು, ಇರಾಣಿಯು, ತನ್ನ ಹೊರತು ಮತ್ತೆಲ್ಲಿ ಹೋಗುತ್ತಾರೆ ? -ಹುಡುಗರು ಅತ್ತಿತ್ತ ಸುಳದಾಡಿ ಮತ್ತೆ ಬರುವರೆಂದು ಧರಣಿಯನ್ನು ಒಮ್ಮೆಲೇ ಏರಿಸಲಿಲ್ಲ.
ತರುಣರು ಹೇಟಿಯನ್ನು ಸುತ್ತಿ ಸುತ್ತಿ ಸುಳಿದಾಡಿದರು, ಆ ಇರಾಣಿಯವನ ಅಂಗಡಿಯೊಂದೇ ತಮ್ಮ ವ್ಯಾಪಾರಕ್ಕೆ ಅನುಕೂಲವಾಗಿದೆಯೆನಿಸಿ ಮರಳಿ ಮೂರು-ನಾಲ್ಕು ತಾಸಿನಲ್ಲಿ ಅಲ್ಲಿಗೆ ಬಂದುಬಿಟ್ಟರು, ಮುಂಬಯಿಯಂತಹ ಪಟ್ಟಣಕ್ಕೆ ಹುಡುಗರಿಬ್ಬರೂ ತಿರ ಹೊಸಬರು. ಇರಾಣಿಯವನು ಆಗ ಅಲ್ಲಿ ಇರಲಿಲ್ಲವೆಂಬುದು ಅವರಿಗೆ ಗೊತ್ತಾಗಲಿಲ್ಲ. ಅವನ ಅಂಗಡಿಯೆ ತಮಗೆ ಸಿಕ್ಕಲ್ಲದೆಂದು ಅವರ ತಿಳುವಳಿಕೆ. ಹುಳುಹುಳು ನೋಡುತ್ತ ಪೇಟೆಯನ್ನೆಲ್ಲ ಸುತ್ತುತ್ತ ತಿರುಗಾಡುತ್ತಿ