ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಡೆದುಬಂದ ಲಕ್ಷ್ಮಿ

೯೭

ಎಂದ ಮೇಲೆ ಹೈಸ್ಕೂಲು-ಕಾಲೇಜುಗಳ ಮೆಟ್ಟಿಲು ಹತ್ತಿದ ಹುಡುಗರಂತೆ ಆಪ್-ಟು-ಡೇಟ್ ಫ್ಯಾಶನ್ನು ಮಾಡಲಿಕ್ಕೆ ಅವರಿಗೆ ಹೇಗೆ ತಾನೇ ಬರಬೇಕು ? ಕಂಡದ್ದೆಲ್ಲವೂ ಅವರಿಗೆ ಫ್ಯಾಶನೇಬಲ್ಲಾಗಿಯೇ ಕಂಡಿತು, ನಿಜವಾಗಿ ನೋಡಿದರೆ, ಈಗಿನ ದಿನಮಾನಕ್ಕೆ ಚಪ್ಪಲಿಗಳು ಒಳ್ಳೆಯ ಸುಧಾರಕರೆನಿಸಿಕೊಳ್ಳುವವರಿಗೆ ಸಹ ಚಂದ ಕಾಣುವಂತಹವು. ಆದರೆ ನಮ್ಮಿ ತರುಣಯುಗಲಕ್ಕೆ ಬೂಟುಗಳನ್ನು ಕೊಳ್ಳಬೇಕೆನಿಸಿತು. ಇಬ್ಬರೂ ಒ೦ ದೊ ೦ ದು ರೂಪಾಯಿಯ ಟೆನಿಸ್ ಬೂಟುಗಳನ್ನು ಕೊಂಡುಕೊಂಡು ಮೆಟ್ಟಿದರು. ನಾಲ್ಕೈದು ದಿನಗಳ ವರೆಗೆ ಬಲು ಸೊಗಸಿನಿಂದ ಕಾಲ ಕಳೆದರು, ಫರ್ಸ್ಟಕ್ಲಾಸಿನಲ್ಲಿ ಸಿನೇಮಾ ನಾಟಕಗಳನ್ನು ನೋಡುತ್ತ, ಉಪಹಾರ ಗೃಹ, ಟ್ರಾಮು, ಸಮುದ್ರದ ದಂಡೆ, ಬ್ಯಾಕಬೇ, ಶಾಲೆಕಾಲೇಜು, ಹಾಸ್ಟೆಲ್ಮು, ಉಪವನಗಳು, ಎಲ್ಲೆಲ್ಲಿಯೂ ಮುಂಬಯಿಯಲ್ಲಿ ಸುತ್ತಾಡಿ, ಚಕ್ಕಂದದಿಂದ ಚಲ್ಲಾಟವಾಡಿದರು.

ಮುಂಬಯಿಗೆ ಬಂದು ಅಂದು ಐದನೆಯ ದಿನವಿದ್ದಿತು. ಮಟ ಮಟ ಮಧ್ಯಾಹ್ನ, ಹೊರಗೆಲ್ಲ ರಣ ರಣ ಬಿಸಿಲು ಸುರಿಯುತ್ತಿದೆ. ತರುಣರಿಬ್ಬರೂ ತಮ್ಮ ಅಟ್ಟದ ಮೇಲಿನ ಕೋಣೆಯೊಳಗೆ ಬಾಗಿಲಿಕ್ಕಿಕೊಂಡು, ಹಗಲುಹೊತ್ತಿದ್ದರೂ ವಿದ್ಯುದ್ದೀಪಗಳನ್ನು ಹಚ್ಚಿಕೊಂಡು, ಅವರಿಗೆ ವಿದ್ಯುದ್ದೀ ಪಪೂ ವಿಚಿತ್ರವೆನಿಸಿ, ಅದೂ ಒಂದು ಫ್ಯಾಶನ್ನಾಗಿತ್ತು-ವಿದ್ಯುದ್ದೀಸಣಿಕೆಗಳನ್ನು ಬಿಸಿಕೊಂಡು, ಹರಟೆಕೊಚ್ಚು, ನಗೆಯಾಟವಾಡುತ್ತ ಕುಳಿತಿದ್ದರು. ಮುಂದಿನ ತಮ್ಮಿರ್ವರ ಸುಖ- ದುಃಖದ ಬಗೆಗೂ ಎಷ್ಟೋ ಮಾತುಕತೆಗಳಾದವು. ಮಾತಾಡುತ್ತ ಮಾತಾಡುತ್ತ ತಮ್ಮ ಹತ್ತಿರವಿದ್ದ ಹಣವು ತೀರಿದ ಬಳಿಕ ಮುಂದೇನು ಮಾಡುವದೆಂದು ಯೋಚಿಸತೊಡಗಿದರು.

"ಊರಿಗೆ ಹ್ವಾದ ಬಳಿಕ ಹ್ಯಾಂಗಾರ ಮಾಡಿ ನಿನ್ನ ಮದಿವ್ಯಾಗೇ ಬಿಡತೇನಿ ನೋಡು....."