ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೦

ಹೂಬಿಸಿಲು

ಅಕೀನೂ ಒಂದ ಮೂಗತಿ ತಂದೀದ್ಲಂತ. ಎಲ್ಲಾನು ಅಲ್ಲೇ ಕೈಗೆ ಬಂದ್ಹಾಂಗ ಮಾರಿ ನಾಕೈದಿ ನಾ ಚಲ್ಲಾಟ ಆಡ್ಯಾನ. ಇತ್ತಾಗ ಗಡ್ಯಾನೂ ಅವನ ತಾಯಿ ಪೋಲಿಸರಿಗೆ ವರದೀ ಕೊಟ್ರಂತ. ಇಂದ ಮುಂಜಾನೆ ಅವರಿಬ್ಬರ್ನೂ ಮುಂಬಯಿಯಿಂದ ಊರಿಗೆ ಹಿಡಕೊಂಡು ಬಂದು ಪೋಲಿಸಕಚೇರಾಗಿಟ್ಟಾರ. ಗಡಾ ನಡಿ ನೀ ಊರಿಗೆ."

ದ್ಯಾಂವಕ್ಕ ಹಣೆಹಣೆ ಗಟ್ಟಿಸಿಕೊಂಡಳು-ಅತ್ತಳು-ಕರೆದಳು. ಯಾರಿಗಾಗಿ ತನ್ನ ಇಡೀ ಜನ್ಮ ಕಷ್ಟ ಪಟ್ಟಳೊ, ಯಾರಿಗಾಗಿ ಸಾವಿರಗಟ್ಟಲೆ ದುಡ್ಡನ್ನು ಸಂಗ್ರಹಿಸಿಟ್ಟಿದ್ದಳೊ, ಆ ಮಗನೇ ತನ್ನ ಕೈಲಿ ತಾನು ಹಾಳುಮಾಡಿಕೊಂಡಿನಲ್ಲ; ತನ್ನ ಕಾಲಮೇಲೆ ತಾನು ಕಲ್ಲು ಹಾಕಿ ಕೊಂಡದ್ದಲ್ಲದೆ, ಚಾವಡಿಯ ಕಟ್ಟಿಯನ್ನೆರಿ, ತನಗೂ ಕಚೇರಿಗೆ ಹೋಗುವ ಮಾನಹಾನಿಯ ಹೊತ್ತನ್ನು ತಂದನಲ್ಲ-ಎಂದು ಅವಳಿಗೆ ಬಹಳ ಕಷ್ಟವಾಯಿತು. ಎಷ್ಟೆಷ್ಟೋ ಬೋರಾಡಿದಳು. ತನ್ನ ಹೊಟ್ಟೆಯಲ್ಲಿದ್ದಿದ್ದ ಕಿಚ್ಚನ್ನೆಲ್ಲ ಭೀಮಣ್ಣನ ಮುಂದೆ ತೋಡಿಕೊಂಡಳು.

ಆಗ ಭೀಮಣ್ಣನು “ ದ್ಯಾಂವಕ್ಕಾ, ಕಳಕೊಂಡು ಹುಡುಕಿದ್ರ ಎಲ್ಲಿಂದ ಬರ್ತೈತಿ? ಈಗ ಗಡಾ ಊರಿಗೆ ನಡಿ. ಆ ನೀಚ ಗಡ್ಯಾ ಮದ್ಲs ಹುಡುಗಿ ಹೊಡಹೊಡ್ಡ ದಿನಾ ಅದರ ಹೆಣಾ ಮಡಚಿ ಹಾಕತಿದ್ನ. ಈಗನಕಾ ನಿನ್ನ ಮಗನ ಸಂಗಾಟ ಹ್ವಾದದ್ದನಕಾ ಅವನ ಹೊಟ್ಟ್ಯಾಗ ಬೆಂಕೀನ ಸುರುವಿದ್ದಾ೦ಗಾಗೇತಿ, ಅವರಿಬ್ಬರ ಸಾದಿಸಿದ್ರ ನಿನ್ನ ಸುದಶಾ ಬದಿಕಾನೆ ಕಾಣಿಸಿ, ತಗಣಿ ರೊಟ್ಟಿ, ತಿನ್ನಾಕ ಹಚ್ಚ ತೇನಂತ ಊರಾಗೆಲ್ಲಾ ಮಿಶೀ ಮ್ಯಾಲೆ ಕೈ ಎಳಕೊಂತ ಹಲ್ ಮಶಾಶ್ಚತ್ಯಾನ. ನಿನ್ನ ಬಂಗಾರ ಹ್ವಾದದ್ದು ಹೊಗವಲ್ಲಾಕ, ನಿನ್ ಮಗನ ಮಾರೀ ನೋಡಳು.”

ಮೊದಲೇ ದ್ಯಾಂವಕ್ಕ ವಿಚಾರವಂತಳು; ಎಲ್ಲವನ್ನೂ ಕೇಳಿಕೊಂಡು ಕೆಲಹೊತ್ತು ಸುಮ್ಮನಿದ್ದಳು.