ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ನಡೆದುಬಂದ ಲಕ್ಷ್ಮಿ
೧೦೧

"ಹೂಂ, ಹೀಂಗ ಬ್ಯಾರೆ ಈ ಐತೇನ ? ಆ ಗಾಂಜಿ ಬಡತ ಮೂಳಾ ಪಣಾ ಬ್ಯಾರೆ ತೊಟ್ಟೆ ತೇ, ನಮ್ ತಾಯಿ ಮಕ್ಕಳಿಗೆ ಬಂದೀಕಾನೆ ಕಾಣಸ್ನೇಕಂತ? ಆಗಲಿ, ಹೀಂಗ ಜರ ಇದ್ದದ್ದು ಕರೇವಿ ನಾನೂ ದೇವಿ ಮುಂದ ನಿಂತು ಸಂತಾ ಕಟ್ನಿ--ನನ್ನ ಮಗಾ, ನಾನೂ ತಗಣಿ : ರೊಟ್ಟಿ ತಿನ್ನೂ ದು ಮರಿ ಅನ್ನ ಅಂಗ, ಅದನಕಾ ಒತ್ತಟ್ಟಿಗಿರ್ಲಿ, ಆ ಹುಡಿಗಿನ್ ಸಂಕಾ ಜೇಲಿನ ಹೊಚ್ಚಲಾ ಮೆಟ್ಟಗೊಡಾಕಿಲ್ಲಾ, ಹಿಂತಾಕೀ ಮಗನದಶಿ೦ದ ಹೀಂಗ ಹೋತ ಆ ಹುಡುಗೀ ಅಂತ, ಮಂದೀ ಕಡಶಿಂದ ಅನಗೊಡಾಕಿಲ್ಲ, ತಿಳೀತಿ? ಹಂತಾ ಪರಸಂಗ ಬಿದ್ರ, ನನ್ನ ದುಕ್ಕೂ ಹೋಗಲಿ, ದುಗ್ಗಾಣೀನೂ ಹೋಗ್ಲಿ, ನನ್ನ ಹೊಲಾ ಹೋಗ್ಲಿ, ಮನಿ ಹೋಗ್ಲಿ, ನನ್ನ ಇದ್ದ ಬಿದ್ದದ್ದೆಲ್ಲಾನೂ ಹೋಗ್ಲಿ. ಆಕೀ ದಶಿಂದ ನನ್ಮಗನ ಜೀವಾ ಹರೀತಿದ್ರ, ಆಕಿನ್ನ ಆ ಯಮನ ದವಡ್ಯಾಗಿಂದ ಬಿಡಿಸಿಕ್ಯಾರಾ ತಂದು, ನನ್ ಮಗನ ಸಂಗಾಟ ಲಗಣಾ ಮಾಡಿ, ನನ್ನ ಮನ್ಯಾಗ ತಂದಿಟಗೊಂತೇನಿ-ಎಲ್ಲಾನೂ ಹೋಗಲಿ ನನ್ನ ಮಗನ ಮ್ಯಾಗಿಂದ ನಿವಾಳಿಸಿ! ದೇವಿ ಸತ್ತುಳ್ಳಾಕಿ ಆಗಿದ್ರ ತೊರಹ್ಲಿ ಎಲ್ಲಾನೂ ನಾಕ ಮುದಿಗೆ!

ಚಟ್ಟ ನೆದ್ದು ಗಂಟು ಕಟ್ಟಿ ಕೊಂಡು, ತಮ್ಮನನ್ನು ಭೀಮಣ್ಣನನ್ನೂ ಕರಕೊಂಡು ಹೊರಟುಬಿಟ್ಟಳು, ಮಧ್ಯಾನಕ್ಕೆ ಊರಿಗೆ ಬಂದವರು ನೇರವಾಗಿ ಪೊಲೀಸ ಕಚೇರಿಗೆ ಹೋದರು, ತರುಣ-ತರುಣಿಯರಿಬ್ಬರನ್ನೂ ಹೊರಗೆ ಕುಳ್ಳಿರಿಸಿ ಅವರ ಜವಾಬು ತೆಗೆದುಕೊಳ್ಳುತ್ತಿದ್ದರು.

ಭೀಮಣ್ಣನು ಮಲ್ಲಗೆ, "ದ್ಯಾಂವಕ್ಕಾ, ಅಟ ಮುಂದಕ್ಕ ಬಂದು ನೋಡಬಾರ ನಿನ್ನ ಮಗನs, ದುರ್ಪತಿನ್ನ ಹ್ಯಾ........ಹ್ಯಾಂಗ ಸಾಬಾ-ಮಡ್ಡ ಮ್ಯಾಗ್ಯಾರ! ಮುಂಬೈಗೆ ಹೋಗಿ ಆಗ್ಯಾರ ಮುಂಬೈಗೆ? ” ಎಂದನು.