ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೦೮
ಹೂಬಿಸಿಲು

ಇಷ್ಟು ಕತ್ತಲೆಯಾದ ಬಳಿಕ ಅದಾರು ಬಂದಿರಬಹುದೆಂದು ಅನುಮಾನಿಸುತ್ತ ಹೊರಗೆ ಬಂದರು. ದವಾಖಾನೆಯಲ್ಲಿ ಅವರಿಬ್ಬರು ತಾಯಿ-ಮಕ್ಕಳು ಇವರಿಗಾಗಿ ಕಾಯ್ದಿದ್ದರು. ಎಲ್ಲಿಯವರು? ಬಂದ ಕೆಲಸ ಯಾವದು?' ಎಂದು ಕೇಳಿದರು.

ಆಗ ಆ ವೃದ್ಧೆಯು ಹೇಳಿದಳು. 'ಡಾಕ್ಟ ರಸಾಹೇಬರೆ, ನಾವು ಘೋರಪಡಿಯವರು. ಘೋರಪಡಿಯ ಶ್ರೀಧರರಾಯರು ತಮಗೆ ಒಂದು ಪತ್ರವನ್ನು ಕೊಟ್ಟಿದ್ದಾರೆ. ”

ಪತ್ರವನ್ನೊದಿದರು; ಡಿಕಿಡಿಯಾದರು. 'ಇಂತಹ ಹಜಾಮಗಿರಿ ಮಾಡಲಿಕ್ಕೇನೆ ಏನು ನಾನು ಡಾಕ್ಟರನಾದದ್ದು ? ನಡೆಯಿರಿ, ಹೊರಬೀಳಿರಿಲ್ಲಿಂದ ? "

“ಉಶ್, ನಡೆಯದ್ವಾ ಲೀಲಾ! ಟಾಂಗಾದವಗೆ ನಿಲ್ಲಲಿಕ್ಕಾದರೂ ಹೇಳಬೇಕಿಲ್ಲ ! ” ಎನ್ನುತ್ತ ಮುದುಕಿಯು ಯಾವನಾದರೊಬ್ಬ ಟಾಂಗಾದವನು ಆ ದಾರಿಯಿಂದ ಬರುತ್ತಿರಬಹುದೇ ಎಂಬುದನ್ನು ನೋಡಲೆಂದು ಹೊರಕ್ಕೆ ಹೊದಳು.

ಅದೇ ವೇಳೆಯನ್ನು ಲೀಲೆಯು ಸಾಧಿಸಿದಳು. ಚಟ್ಟನೆದ್ದು ಮುದುಕಿಯನ್ನು ದುರುಗುಟ್ಟಿ ನೋಡುತ್ತ ನಿಂತ ಒ೦ರ ಕಾಲುಗಳನ್ನು ಹಿಡಿದವಳೆ, “ಡಾಕ್ಟರ್ ಸಾಹೇಬರೇ, ತರ ಮಾಡಿ ನನ್ನನ್ನು ಈ ಸಂಕಟದೊಳಗಿಂದ ಪಾರು ಮಾಡಿ ೬ ಈ ರಾಕ್ಷಸಿಯ ಕೈಯಿಂದ ಬಿಡಿಸಿರಿ. ನೀವೇ ನನ್ನ ಹಡೆದ ತಾಯಿ-ನೀವೆ? ನನ್ನ ತಂದೆ- ಡಾಕ್ಟ ರದಾದಾ........ ” ಎಂದೆನ್ನುತ್ತ ಕಾಲಮೇಲೆ ಬಿದ್ದು ಅಳ- ಹತ್ತಿದಳು,

"ದಾದಾ !............ ಡಾಕ್ಟರರ ಎದೆಯಲ್ಲಿ ಎಲ್ಲಿಂದಲೋ ಕರುಣೆಯ ಝರಿ ಹುಟ್ಟಿದಂತಾಯಿತು.

ಆಗಲಿ, ಮಗೂ. ನಾಳೆ ಮಧ್ಯಾಹ್ನಕ್ಕೆ ಬಾ, ಮುದುಕಿಯನ್ನು ತರಬೇಡ"

"ಪರಮಾತ್ಮನು ನಿಮಗೆ ಕಲ್ಯಾಣಮಾಡಲಿ."