"ಬಾರೆ ಲೀಲಾ, ಟಾಂಗಾ ಬಂದ ಹಾಗಿದೆ........ಉಪಾಯವಿಲ್ಲ ಬಾ........ ಮತ್ತೆಲ್ಲಿಯಾದರೂ........” ಮುದುಕಿಯು ಕರೆಯ ತೊಡಗಿದಳು.
ಇಂದಿರಾಬಾಯಿಯವರು ಬಾಗಿಲ ಮರೆಗೆ ನಿಂತು ಎಲ್ಲವನ್ನೂ ಕೇಳಿದರು. ಪತಿಯು ಇನ್ನೂ ಪುತ್ತಳಿಯಂತೆ ತಟಸ್ಥರಾಗಿ ನಿಂತು ಬಿಟ್ಟಿದ್ದಾರೆ. ಕೈಯಲ್ಲಿ ಘೋರಪಡಿಯಿಂದ ಬಂದ ಅವಳ ತಮ್ಮ ಧರರಾಯನ ಪತ್ರ !
"ಹಾಳಾಗು ನೀಚಾ........” ಪತ್ರವು ಕೈಯಿಂದ ಕಳಚಿತು. ಇಂದಿರಾಬಾಯಿಯು ಓಡಿಬಂದು ತೆಗೆದಳು; ಓದಿಕೊಂಡಳು,
"ಅಯ್ಯೋ ಏನಿದು ? ಇದಕ್ಕಾಗಿಯೇ ಆ ಹುಡುಗಿಯನ್ನು ತಮ್ಮಲ್ಲಿಗೆ ಕಳಿಸಿರುವನೆ ? 'ಉಳಿದ ಸಂಗತಿಯು ಹಿಂದಿನಿಂದ ತಿಳಿಯುವದು' ಎಂದಿದ್ದಾನೆ. ಅಯ್ಯೋ ಭಾಗಾದಿ, ನೀನು ನನ್ನ ತಮ್ಮನಾಗಿ ಹುಟ್ಟಬಾರದಿತ್ತು. ಉಳಿದ ಸಂಗತಿ' ಹಿಂದಿನಿಂದೇಕೆ, ಈಗಲೇ ತಿಳಿಯಿತಲ್ಲ, ಪಾಪಿಷ್ಠಾ !"
"ನೋಡು, ಇನ್ನ ತಮ್ಮನ ಘೋರಕೃತ್ಯವನ್ನು !” ಡಾಕ್ಟರ್ ರೆವರು.
ಇಬ್ಬರೂ ಹೇಗೇಗೋ ಊಟಮಾಡಿ ನಿದ್ರಿಸಿದರು. ಬೆಳಗಾಗುತ್ತಲೆ ಬೀಗನಿಗೆ ' ಕೂಡಲೆ ಹೊರಟು ಬಾ ' ಎಂದು ತಂತಿ ಬಿಟ್ಟರು. ಅವನು ಊರಲ್ಲಿಲ್ಲವೆಂದು ಜವಾಬು ಬಂದಿತು. “ಆಯಿತು, ಫರಾರಿಯಾಗಿರಲಿಕ್ಕೆ ಸಾಕು ? ಎಂದು ಇನ್ನಿಷ್ಟು ರೇಗಿದರು. ಮಧ್ಯಾಹ್ನಕ್ಕೆ ಆ ಸುಸ್ವರೂಪಿಯಾದ ಲೀಲೆಯು ಆಕಳಿಸು, ಬಾಡಿದ ಮುಖದಿಂದ ಮೆಲ್ಲನಡಿಯಿಡುತ್ತ ಬಂದಳು.
"ತಂಗಿ, ಅಟ್ಟದ ಮೇಲೆ ನಡೆ- ಪೇಶಂಟ್ಸ್ ನೋಡಿಕೊಂಡು ಈಗ ಬರುವೆನು."
ಇಂದಿರಾಬಾಯಿಯೊಡನೆಯೇ ಡಾಕ್ಟರರು ಅಟ್ಟವನ್ನು ಹತ್ತಿದರು. ಇಂದಿರಾಬಾಯಿಯನ್ನು ಕಂಡೊಡನೆ ಲೀಲೆಯು, “ಅಮ್ಮಾ, ಈ