ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೧೦
ಹೂಬಿಸಿಲು

ಪೆಟ್ಟಿಗೆಯು ತಮ್ಮ ಬಳಿಯಿರಲಿ, ನಾನು ಬೇಡಿದಾಗ ಕೊಡಿರಿ" ಎಂದು ಹೇಳಿ, ಒಂದು ಭಾರವಾದ ಚಿಕ್ಕ ಪೆಟ್ಟಿಗೆಯನ್ನು ಅವಳ ಕೈಗೆ ಕೊಟ್ಟಳು.

ಆಗಬೇಕಾದುದೆಲ್ಲ ಆಗಿಹೋಯಿತು.......ಕ್ಲೋರೋಫಾರ್ಮಿನ ಮಬ್ಬು ಇಳಿದೊಡನೆ, “ಅಮ್ಮಾ, ನೀನೇ ನನ್ನ ತಾಯಿ ! ಸಾಹೇಬರೆ, ನೀವೇ ನನ್ನ ತಂದೆ !” ಕಣ್ಣಲ್ಲಿ ನೀರು ತುಂಬಿ, ಗಂಟಲುಬ್ಬಿ ಬಂದು, ಮುಂದೆ ಮಾತು ಬರವಾದವು.

ಹತ್ತೆಂಟು ದಿನ ಶುಶ್ರೂಷೆ ಹೊಂದಿ ಲೀಲೆ ಗುಣಮುಖಳಾದಳು. ಅಂದು ಅವಳಿಗೆ ಹೋಗಬೇಕಾಗಿತ್ತು.

"ಅಮ್ಮಾ, ಅಂದು ತಮ್ಮಲ್ಲಿಡಲು ಕೊಟ್ಟ ನನ್ನ ಆ ಪೆಟ್ಟಿಗೆಯನ್ನು ತನ್ನಿರಿ. ”

ತೆರೆದಳು. ತುಂಬ ಬಂಗಾರದ ಆಭರಣಗಳು, ಮುತ್ತಿನ ಕಂಠಿಯೊಂದು, ಅದನ್ನು ತೆಗೆದು ಇಂದಿರಾಬಾಯಿಗೆ ಕೊಟ್ಟಳು-ಆಕೆ ತೋರಿಸಿದ ಕರುಣೆಗೆ ಪ್ರತಿದಾನವೆಂದು.

ಆಗ ಇಂದಿರಾಬಾಯಿಯು ಕೇಳಿದಳು, “ತಂಗೀ, ಹಿಗೇಕೆ ನಿನ್ನ ಅವಸ್ಥೆ ?"

“ ಅಯ್ಯೋ, ಅಮ್ಮಾ, ಅದನ್ನೇನೆಂದು ಹೇಳಲಿ ?....ಮೊದಲು ನಮ್ಮ ತಾಯಿ ಕುಲೀನ ಮನೆತನದವಳು.... ಈಗಲಾದರೂ ಅಂಧ- ಸಮಾಜಕ್ಕೆ ಅವಳು ಕುಲೀನಳೆ ! ಮುಂಬಯಿಯಂತಹ ದೊಡ್ಡ ಪಟ್ಟಣದಲ್ಲಿದ್ದವಳು; ಅಲ್ಲಿಯ ಸಾಹುಕಾರರ ಪತ್ನಿ. ನಾನು ಇನ್ನೂ ತಾಯ ಗರ್ಭದಲ್ಲಿರುವಾಗಲೇ ತಂದೆಗೆರವಾದೆ. ಹೆರಿಗೆಯನ್ನು ಬಳಗದವರಲ್ಲಿ ತೀರಿಸಿಕೊಂಡು, ನನ್ನೊಡನೆ ಪುಣೆಯಲ್ಲಿ ಇದ್ದಳಂತೆ. ನನಗೆ ತಿಳಿಯತೊಡಗಿದಾಗ ನನ್ನನ್ನು ಪುಣೆಯ ಬೋರ್ಡಿ೦ಗಿನಲ್ಲಿ ಕಲಿಯಲಿಟ್ಟು ತಾನು ಘೋಪಡಿಯಲ್ಲಿ ಮನೆಮಾಡಿದಳು. ನಾನು ಆಗಾಗ ಸೂಟಿಯಲ್ಲಿ ಬರಲಿಚ್ಛಿಸಿದರೆ, “ಬೇಡ-ಅಭ್ಯಾಸವು ಚೆನ್ನಾಗಿ ಆಗಲಾರದು....ಆಟನೋಟಕ್ಕೆ ಬಿದ್ದೆಯೆಂದರೆ ಇಲ್ಲಿಗೆ ಬಂದು !' ಎಂದು