ಬರಗೊಡಲಿಲ್ಲ. ಮುಂದೆ ನಾನು ಹುಜೂರ್ ಪಾಗಾದಲ್ಲಿರಹತ್ತಿದೆ. ನನ್ನ ಮ್ಯಾಟ್ರಿಕ್ ಪರೀಕ್ಷೆ ನಡೆದಿರುವಾಗಲೇ ಒಂದು ಪತ್ರ ಬಂದಿತ್ತು, "ನಿನಗಿನ್ನು ನನ್ನಿಂದ ಕಲಿಸಲಾಗುವದಿಲ್ಲ; ಹೊರಟು ಬಾ' ಎಂದು, ಮೊದಲೇ ತಾಯ ದರ್ಶನಕ್ಕಾಗಿ ಹಾತೊರೆಯುತ್ತಿದ್ದ ನಾನು ಏನನ್ನೂ ವಿಚಾರಿಸದೆ ಊರಿಗೆ ಹೋದೆ............
"ನಾಲ್ಕಾರು ದಿನಗಳಲ್ಲಿಯೇ, ತಾಯಿಯೊಬ್ಬ ದೂರದ ಆಪ್ತನೊಡನೆ ಬಲುದಿನಗಳಿಂದಿರಬೇಕೆಂದು ಕಂಡುಬಂದಿತು, ಇವನಾರೆಂದರೆ ತನ್ನ ಮೈದುನನೆಂತಲೂ, ಇವನೇ ನಿನಗೆ ಇಲ್ಲಿಯ ವರೆಗೆ ಕಲಿಸಿದನೆಂತಲೂ ಹೇಳಿದಳು, ಆದರೆ ಮುಂದೆ ಕೆಲದಿನಗಳಲ್ಲಿಯೇ ಮೈದುನ -ಗಿನ ಎಲ್ಲವೂ ಸುಳ್ಳು, ಇಬ್ಬರೂ ಕಾಮುಕ ಸಂಬಂಧವುಳ್ಳವರು —ಎಂದು ನಾನು ಪೂರ್ಣವಾಗಿ ಮನಗಂಡೆನು.
"ನನ್ನ ಮೈಯೆಲ್ಲ ಜುಮ್ಮೆಂದಿತು, ಇಂತಹ ರಾಕ್ಷಸಿಯ ಕೈಕೆಳಗೆ ನಾನಿರುವುದು ಹೇಗೆ? ಎಂದು ಬೆದರಿದೆನು, ಒಂದು ದಿನ ಸಾಧಿಸಿ ಊರು ಬಿಟ್ಟು ಓಡಿಹೋದರಾಯಿತೆಂದೆ, ಡಾಕ್ಟರ್ ಸಾಹೇಬ, ಅವಳ ಸಹವಾಸದಲ್ಲಿದ್ದುದೆಂದರೆ, ಉಡಿಯಲ್ಲಿ ಬೆಂಕಿಯನ್ನು ಕಟ್ಟಿಕೊಂಡಂತೆಂದು ನನಗೆ ಅನಿಸಿತು; ನಾನು ಆ ಕ್ಷಣವೇ ಓಡ ಬೇಕಿತ್ತು; ಏನಾದರೂ ಕೆಲವು ಆಭರಣಗಳನ್ನು ಅಪಹರಿಸಿ ದುಡ್ಡಿನ ವ್ಯವಸ್ಥೆ ಯನ್ನು ಮುಖ್ಯವಾಗಿ ಮಾಡಿಕೊಳ್ಳುವ ಹೊರತು ಹೊರಡಬಾರದೆಂದು ಹೊಂಚುಹಾದೆ. ಆದರೆ........
"ಆದರೆ.... ಅವಳ ಸಹವಾಸದ ಪಾಪದ ಫಲವು ನನಗೂ ತಾಕಿತು. ಅದೇ ದಿವಸ ರಾತ್ರಿ, ತಮ್ಮ ಇಂದಿರಾಬಾಯಿಯ ತಮ್ಮಂದಿರ ಗೆಳೆಯನಾವನೋ ಒಬ್ಬ ಕಾಮಾಂಧನು- ಅವಳ ಸಹಾಯದಿಂದ ನನಗಾಗಿ ಬಂದಿದ್ದ. ನಮ್ಮ ತಾಯಿಗೆ ನಾನು ಬೇಕಾದಷ್ಟು ಹೇಳೆದೆ ... ಅವನಿಗೂ ಹೇಳಿದೆ.... ಮದುವೆಯಾಗೆಂದೆ........ ಆದರೆ, ದಾದಾ, ದುಷ್ಟರು ಕೇಳಲಿಲ್ಲ.... ಹಡೆದಮ್ಮನೇ ಕೇಳಲಿಲ್ಲ. ಅನ್ಯರದೇನು? ಮತ್ತೆ ಅವನಾದರೂ ಏನು? ಹೇಸಿಗೆಯೊಳಗಿನ ಹುಳು