ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೂವರು ನಾಗರಿಕರು

ಧುಮತಿಯೂ, ಕೃಷ್ಟಿಯೂ, ಶಾಂತೆಯೂ ಅತ್ಯಂತ ಜೀವದ ಗೆಳತಿಯರು. ಮೂವರೂ ಎಂಟರಿಂದ ಹತ್ತರ ಒಳಹೊರಗಿನ ವಯಸಿನವರು. ಮೂವರೂ ಹೋಗುತ್ತಿದ್ದುದು ಮ್ಯುನಿಸಿಪಾಲಿಟಿ ಶಾಲೆಗೆ, ಕಲಿಯುತ್ತಿದ್ದುದು ಕನ್ನಡ ನಾಲ್ಕನೇ ಇಯತ್ತೆಯಲ್ಲಿ.

ಒಂದು ದಿವಸ ಇವರ ಶಾಲೆಯು ಸುರುವಾದ ಅರ್ಧ ತಾಸಿನಲ್ಲಿಯೇ ಬಿಟ್ಟು ಬಿಟ್ಟಿತು. ಮೂವರೂ ಶಾಲೆಯ ಹೊರಗೆ ಬಂದರು. ಶಾಂತೆಯು ಕೇಳಿದಳು:

"ಅಲ್ರೇ, ಮಧುಮತೀ,ಕೃಷ್ಟೀ, ನಮ್ಮ ಸಾಲ್ಯಾಕ ಇವೊತ್ತ ಲಗೂ ಬಿಟ್ಟದ್ರೇ ? "

ಅದಕ್ಕೆ ಮಧುಮತಿಯು ಹೇಳಿದಳು "ಇಷ್ಟೂ ತಿಳೂದುಲ್ಲೇನ ? ಇವೊತ್ತ ನನ್ನ ಸಾಲಿ ಮುನಿಸಿಪಾಲಿಟಿ ಮೆಂಬರ್ರು ಸುತ್ತಾರಂತ!! !!

"ಅಯ್ಯ, ಮೆಂಬರು ಸತ್ತ ಘಳಿಗ್ಗೆ ಸಾಲಿಗೆ ಸೂಟ ಆಗತಿದ್ರ, ದಿನಾನು ಒಬ್ಬ ಮೆಂಬರ್ರು ಸಾಯವಾಲ್ರಯಾಕ ಬಿಡೂ, ಅಂದ್ರ ದಿನಾನೂ ನಮಗ ಆಡಲಿಕ್ಕೆ ಸೂಟೀನರ ಸಿಕ್ಹಾಂಗಾಗತದ. ” ಕೃಷ್ಟಿಯು ಎಂದಳು.

ಅದಕ್ಕೆ ಶಾಂತಿಯೆಂದಳು “ ಏ ಕೃಸ್ಟಿ, ಕರೇ ಭ್ರಷ್ಟಿ, ಎಲ್ಲಾ ಮೆಂಬರು ಸತ್ರ ನಿನಗೇನ ಬರೋದು ? ಆ ಮೆಂಬರೆಲ್ಲಾ ಇದ್ದಾರಂತ ನಮ್ಮ ದಶಿಂದ ಸಾಲೀ ತಗದ್ರೂ; ವರ್ಷ ವರ್ಷಾ ಅವರsನಾ ನಮಗೆಲ್ಲಾ ಇನಾಮು ಕೊಡಾವ್ರು ”

ಮಧುಮತಿಯೆಂದಳು “ ಅಲ್ಲ… ಎಲ್ಲಾರು ಸತ್ರ ಮತ್ತ ನಮ್ಮ ಸಾಲೀನೂ ಮುಳಿಗೀತಲ್ಲ ? ಆ ಮ್ಯಾಲೆ ನಾವೇನು ಮನೀವಳಗ ಬರೇ ತಮ್ಮಂದ್ರನಾಡಿಸಿತನ ಕೂಡಬೇಕಂತೀಯೇನು ? ”