ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೂಬಿಸಿಲು

ಕೃಷ್ಟಿಯೆಂದಳು "ಸಾಕ ಬಿಡ್ರೇ ನಮ್ಮವ್ವಾ, ಒಂದು ಸ್ವಲ್ಪು ಅಂದದ್ದಕ್ಕ ಎಷ್ಟ ಹಂಗಸ್ಲಿ ಕ್ಹತ್ತೀರಿ ನನಗ.ಅಲ್ಲೆ ನೋಡ್ರಿ, ಗಂಡ ಹುಡುಗರ ಸಾಲೀನೂ ಬಿಡ್ಲಿಕ್ಹತ್ತ್ಯಾರ !!"

ಶಾಂತಿಯೆಂದಳು “ಮತ್ತ, ಆ ನಮ್ಮ ಅಕ್ಕವ್ರತಾಂಗ, ಅವರ ಮಾಸ್ತರ್ರೂ ಮೆಂಬರ್ರ ಮಣ್ಣಿಗೊಗತಾರ ಕಾಣಸ್ತದ, ಅದಕ ಬಿಟ್ಟಾರ ಅವರ ಸಾಲೀನೂ."

ಅದಕ್ಕೆ ಮಧುಮತಿಯೆಂದಳು "ಅದೆಲ್ಲಾ ಇಲ್ಲಿ ಬಿಡ್ರೇ, ಹ್ಯಾಂಗೂ ಅನಾಯಾಸಾ ಸಾಲಿ ಇವೊತ್ತ ಲಗೂ ಬಿಟ್ಟದ, ಮೂರೂ ಮಂದಿ ಹೋಗಿ, ಆ ಸತ್ರ ಮೆಂಬರ ಮಾರಿ?ನರ ಅಷ್ಟ ನೋಡಿಕೊಂಡು ಬರೋಣ, ಬರೇ ?

ಇಬ್ಬರೂ "ಹುಮ್ಮಾ, ನಡೀರೆ, ನೋಡ್ಯಾರ ಬರೋಣ, ಪಾಪ, " ಎಂದರು.

ಅಷ್ಟರಲ್ಲಿ ಎದುರಿಗೊಂದು ಎಕ್ಕಾದಲ್ಲಿ ಬ್ಯಾಂಡು ಕೇಳಿಸಿತು.

ಶಾಂತಿಯೆಂದಳು « ಏ, ಲಗೂನ ಓಡಿ ಆ ಎಕ್ಕಾಗಾಡಿ ಮುಟ್ಟಿ, ಸಿನೇಮಾದ ಹ್ಯಾಂಡಬಿಲ್ಲು ಯಾರ ಮುಂಚೆ ಇಸಗೊತವೋ ? ”

“ಹುಮ್ಮ' ಎಂದವರೇ ಮೂವರೂ ರಪಾಟಿ ಓಡಲಾರಂಭಿಸಿದರು. ಗೌಳೀಗಲ್ಲಿಯ ಅರ್ಧದ ಸುಮಾರಿಗೆ ಮೂವರೂ ಒಮ್ಮೆಲೇ ಗಾಡಿಯನ್ನು ಮುಟ್ಟಿದರು. ಹ್ಯಾಂಡ ಬಿಲ್ಲು ಹಂಚುವವನು ಹತ್ತೆಂಟು ಹಾಳೆಗಳನ್ನು ದೂರವಾಗಿ ಎಸೆದನು; ಒಬ್ಬೊಬ್ಬರು ಒಂದೊಂದು ಎರಡೆರಡು ಕೈಯ್ಯಲ್ಲಿ ಹಿಡಿದುಕೊಂಡು ಹಿಂದಕ್ಕೆ ತಿರುಗಿ, ಪೇಟೆಯ ದಾರೀ ಹಿಡಿದರು.

ಮಟಮಟ ಮಧ್ಯಾಹ್ನ. ಟಾವರಕ್ಷಾಕ್ ನಲ್ಲಿ ಅದೇ ಹನ್ನೆರಡು ಬಡಿಯತೊಡಗಿತ್ತು. ಗೆಳತಿಯರು ಹನ್ನೆರಡನೆಯ ಕಡೆಯ ಗಂಟೆ ಬಾರಿಸುವ ವರೆಗೂ ಬಿಲ್ಲಿಂಗಿನೆದುರಿಗೆ ನಿಂತು, “ಒಂದೋ ಎರಡೋ.