ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಹೂಬಿಸಿಲು

ಆಯಿತು. ಮೂವರೂ ಕಿಡಿಗೇಡಿ ಮಂಗಗಳಂತೆಯೇ ಇದ್ದರು. ಹಾಗೊಮ್ಮೆ ಹೀಗೊಮ್ಮೆ, ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಮಣಿಯುತ್ತ, ನಡನಡುವೆ ಹೊಟ್ಟೆಯನ್ನು ಹಿಡಿದುಕೊಳ್ಳುತ್ತ, ಕಣ್ಮುಚ್ಚಿ ಕಣ್ಣಿಗೆಯುತ್ತ, ನಗು ನಗುತ್ತ ಸಾಗಿದ್ದರು. ಅಷ್ಟರಲ್ಲಿ, ಎದುರಾಗಿ ಬರುತ್ತಿದ್ದ ಒಂದು ಆಕಳ ಕರುವು ಸೃಷ್ಟಿಗೆ ಹಾಯ್ದದ್ದ-ರಿ೦ದ, ಮೂವರ ಮೈಮೇಲೆಯೂ ತಾವು ಜಾರಿ ನಡೆಯುತ್ತಿರುವೆವೆಂಬ ಎಚ್ಚರ ಬಂದಿತು. ಎದುರಿಗೆನೆ ಮುನಿಸಿಪಾಲಿಟಿಯ ಹಿತ್ತಿಲು ಬಾಗಿಲು.

ಮೂವರೂ ಕಾಂಪೌಂಡಿನಲ್ಲಿ ಕಾಲಿಟ್ಟರು. ಅದಕ್ಕೊಂದು ಪ್ರದಕ್ಷಿಣೆ ಹಾಕುತ್ತ ಹೆಬ್ಬಾಗಿಲ ಕಡೆಗೆ ಹೊರಟರು. ಹೌದಿನಲ್ಲಿ ಪುಟಿಯುತ್ತಿರುವ ಕಾರಂಜಿಗಳ ಮೇಲೆ ಮುಖ ಹಿಡಿಹಿಡಿದು ನಕ್ಕರು ಗಿಡಬಳ್ಳಿಗಳನ್ನೆಲ್ಲ ನೋಡಿದ್ದಾಯಿತು. ಮೂವರೂ ಒಂದೊಂದು ಡೆರೆಯ ಹೂವುಗಳನ್ನು ತಲೆಯಲ್ಲಿ ಸಿಕ್ಕಿಸಿಕೊಂಡರು. ಅಲ್ಲೊಂದು ಊದುವ ಗುಬ್ಬಿಗಳ ಗಿಡವು ಕಂಡಿತು. ಮೆಲ್ಲಗೆ ಯಾರಿಗೂ ಕಾಣದಂತೆ ಪ್ರತಿಯೊಬ್ಬರೂ ಒಂದೊಂದು ಗುಬ್ಬಿಯನ್ನು ಹರಿದು-ಕೊಂಡು ಕಿಸೆಯಲ್ಲಿಟ್ಟು ಕೊಂಡರು. ಮೊದಲನೆ? ಕೋಣೆಯೊಂದರಲ್ಲಿ ಮೆಲ್ಲನೆ ಇಣಿಕಿದರು.

ಕೃಷ್ಟಿಯು "ಅಲ್ಲೆ ನೋಡ ಶಾಂತಾ ಬಾಜಾಪಟ್ಟಿಗೀ ಅಂಥಾದರ ಮ್ಯಾಲೆ ಒಬ್ಬಾವಾ ಬಿರಡಿ? ಹ್ಯಾಂಗ ಟಪಾ ಟಪಾ ಒತ್ತಲಿಕ ತ್ಯಾನ?" ಎಂದಳು.

ಶಾಂತೆಯೆದಳು. "ಹೌದೇಳ ಧಡ್ಡಿ?, ಆದಕ ಟೈಪ ಹೊಡಿಯೋ ಮಶಿನಂತಾರ; ನಮ್ಮಣ್ಣಾ ಮನ್ಯಾಗ ದಿನಾನೂ ಸುರೂ ಮಾಡಿರತಾನ ಕಿಟಕಿಟೀನ. ಯಾವ ಅಕ್ಷರದ ಮ್ಯಾಲೆ ಬಡ್ಡಿಡತಾರ ನೋಡು, ಅದs ಅಕ್ಷರಾನs ಕೆಳಗಿನ ಕಾಗದದ ಮ್ಯಾಲೂ ಮೂಡ್ತದಂತ.”