ಮುಂದಿನ ಹಾಲಿನಲ್ಲಿ ನೋಡಿದರು: ಒಂದಿಬ್ಬರು ಒಂದೇ ಸವನೆ ನೋಟುಗಳನ್ನೆಣಿಸುತ್ತಿದ್ದರು. ಒಬ್ಬಿಬ್ಬರು ರೂಪಾಯಿಗಳನ್ನು ಬಾರಿಸು ಎಣಿಸುತ್ತ ಚೀಲಕ್ಕೆ ತುಂಬುತ್ತಿದ್ದರು. ಒಬ್ಬನು ಏನೇನೋ ಬರೆಯುತ್ತ ಉಳಿದವರನ್ನು ಏನೇನೋ ಕೇಳುತ್ತ ಕುಳಿತಿದ್ದನು.
ಆಗ ಮಧುಮತಿಯೆಂದಳು "ಅವ್ವಯ್ಯಾ, ಇಷ್ಟ ರೂಪಾಯಿನ್ನ ನನ್ನ ಕೈಯೊಳಗ ಕೊಟ್ಟಿದ್ರ, ಏನ ಹೇಳ್ಳೆವ್ವಾ, ಭಂಗಾರದ ಮನೀನ ಕಟ್ಟಿಸಿಬಿಡ್ತಿದ್ದೆ..........ಏನು ಮಾಡಲಿ?"
ಶಾಂತೆಯು ಪ್ರಶ್ನಿಸಿದಳು. “ಅಯ್ಯ, ಮತ್ತ ಫಕ್ನ ಯಾರಾರ ಭಂಗಾರದ ಮಸೀ ಕೆಡವಿ ಭಂಗಾರಾ ಎಲ್ಲಾ ತುಡುಗಮಾಡಿ ಒಯ್ದು ವಸ್ತಾ ಮಾಡಿಸಿಕೊಂಡು ಬಿಟ್ರ?"
ಕೃಷ್ಟಿಯೆಂದಳು "ಅವರ್ನ ಹಿಡಿದೊಯ್ದು ಪೋಲೀಸರ ಕೈಯೊಳಗೆ ಕೊಟ್ರಾತೂ.”
ಇದೇ ಬಗೆಯಿಂದ ಅನೇಕ ದೃಶ್ಯಗಳನ್ನು ನೋಡುತ್ತ ಹರಟೆ ಹೊಡೆಯುತ್ತ ಬಿಲ್ಡಿಂಗನ್ನು ಕಂಡು ಹೆಬ್ಬಾಗಿಲಿನ ಬಳಿಗೆ ಬಂದರು.
ಮುಂಚೇ ಬಾಗಿಲನೆದುರಿಗಿನ ಕಮಾನುಬುಡದಲ್ಲಿ ಇಬ್ಬರು ಮೂವರು ಜರಿಯ ರುಮಾಲಿನವು ಗುಜುಬುಬೆಂದೇನೋ ಮಾತ-ನಾಡುತ್ತಿದ್ದರು. ಬಾಗಿಲಬಳಿ ನಾಲ್ಕೈದುಮಂದಿ ಜವಾನರು ಮೆಲ್ಲಗೆ ಪಿಸುಗುಡುತ್ತ ನಡುನಡುವೆ ಜರಿಯ ರುಮಾಲಿನವರ ಕಡೆಗೆ ನೋಡುತ್ತ ನಿಂತಿದ್ದರು.
ಮಧುಮತಿಯೆಂದಳು "ಹಾ, ಇಲ್ಲೇ ಎಲ್ಲ್ಯಾ ಅವರ ಹೆಣು ಇರಬೇಕ ನೋಡ್ರೇ. ”
ಶಾ೦ತಿಯು ಉತ್ತರಕೊಟ್ಟಳು "ನಿನ್ನ ತಲೀ, ಅಲ್ಲೇನದ, ಈಗೆಲ್ಲಾ ಸುತ್ತಾಡಿಕೊಂಡು ಇಲ್ಲೆ ಬರ್ಲಿಲ್ಲೇನು?"