ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೂಬಿಸಿಲು

ಮಧುಮತಿ ಹಾಂಗಾರ ಅಟ್ಟಾ ಏರಿ ನೋಡೋಣ ನಡೀರಿ" ಎಂದಳು.

ಶಾಂತೆಯು ಕೇಳಿದಳು. "ಫಕ್ನ ಯಾರಾರ ಬೈದರೇನು ಮಾಡ್ಬೇಕೂ?"

"ಹುಮ್ಮಾ ! ಅ೦ತ ಓಟಾ ಹಚ್ಚಿದರಾತು.” ಎದು ಹೇಳಿದಳು ಕೃಷ್ಟಿ.

ಅಟ್ಟವನ್ನೆರಿದರು. ಎಷ್ಟು ಮೆಲ್ಲಗೆ ಹತ್ತಿದರೂ ದಪ್ಪ-ದಪ್ಪೆಂದು ಸಪ್ಪಳವಾಗಲೇ ತೊಡಗಿತು. ಎದುರಿನ ಕೋಣೆಯಲ್ಲಿ ನಡುವಿನ ಕುರ್ಚೆಯ ಮೇಲೆ ಹಿರಿಯವಯಸಿನವರೊಬ್ಬರು ಕುಳಿತಿದ್ದರು. ಸುತ್ತಲಿನ ಕುರ್ಚೆಯ ಮೇಲೆ ನಾಲ್ಕಾರು ಜನರು ಕುಳಿತಿದ್ದರು. ಒಬ್ಬೊಬ್ಬರು ಬಡಿಗೆ ಅಥವಾ ಚತ್ತರಿಗೆಗಳನ್ನು ಗದ್ದಕ್ಕೆ ಆನಿಸಿಕೊಂಡು ಕುಳಿತಿದ್ದರು. ಈ ಕಳ್ಳಿಯರು ಮೆಲ್ಲಗೆ ದೊಡ್ಡ ಹಾಲಿನಲ್ಲಿ ಹಣಿಕಿದರು. ಸುತ್ತಲೂ ನೋಡಿದರು. "ಎಲ್ರೆ, ಎಲ್ಲೆದ ಹೆಣಾ? ಯಾರೂ ನಮ್ಮಕ್ಕಾದರೂ ಕಾಣುಸೂದುಲ್ಲಾ--ಮಾಸ್ತರರೂ ಕಾಣುಸೂದುಲ್ಲಲ್ಲಾ? ಮಣ್ಣ ಆಗಿ ಹೋಗೆದೋ ಏನೋನವ್ವಾ?......." ಹೀಗೆಲ್ಲಾ ಹೇಳುತ್ತ ಅಟ್ಟವನ್ನಿಳಿಯಹತ್ತಿದರು. ಬೆನ್ನುಗುಂಟ ಒಬ್ಬ ಸಿಪಾಯಿಯು ಕೈಯಲ್ಲಿ ಉದ್ದವಾದ ಕಾಗದವನ್ನು ಹಿಡಿದುಕೊಂಡು ಬ೦ದನು.

"ಯಾಕ್ರೇ, ತಂಗೆಮ್ಮಾ, ಇಲ್ಯಾಕ್ರೇ ನೀವು ? ಯಾರ ಬೇಕು ನಿಮಗ?"

ಪೆಚ್ಚ ಕೃಷ್ಟಿಯೇ ಧೈರ್ಯ ಮಾಡಿದಳು “ಅಲ್ಲಪ್ಪಾ, ಇವೊತ್ತ ಮುನಿಸಿಪಾಲಿಟ ಮೆಂಬರು ಸತ್ತಾರಂತ ನೋಡಲಿಕ್ಕೆಂತ ಬಂದಿದ್ವಿ. ಅವರ ಹೆಣಾ ಈಗೆಲ್ಲೆದ?”

ಸಿಪಾಯಿ, "ಇಲ್ಲಾ, ಅವರು ತಮ್ಮನೀವಳಗ ತೀರಿಕೊಂಡಾರ; ಇವೊತ್ತು ಮುನಿಸಿಪಾಲ್ಟಿಗುನೂ ಸೂಟೀ ಅದ;