ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೂವರು ನಾಗರಿಕರು

ಜರೂರ ಕೆಲಸಿದ್ವಂತ ಮೂರು ನಾಲ್ಕು ಜನರು ಬಂದಾರ- ಸಂಜ್ಯಾತು ಮನೀಗೆ ಹೋಗ್ರೀ............" ಎಂದು ಹೇಳಿದನು.

"ಅಯ್ಯ, ನಮ್ಮ ಹಣೆ ಬರಹಾನ- ನಡೀರೆವ್ವಾ, ಸುಮ್ಮನ ಇಷ್ಟು ದೂರ ಬಂದ್ವಿ" ಎನ್ನುತ್ತ ಹೊರಟರು; ದಾರಿಯಲ್ಲಿ ಮಧುಮತಿಯೆಂದಳು "ಹಾ, ಹಾ, ನಾವು ಹ್ಯಾಂಗ ಸಾಲಿಗೆ ಹೋಗ್ತೇವಿ ನೋಡು ಹಾಂಗ ಈ ಮುನಿಸೀಪಾಲಿಟೀ ಅಂದ್ರ, ಮೆಂಬರ್ರ ಜನರದೆಲ್ಲಾ ಸಾಲೀನ ನೋಡು."

ಶಾಂತೆಯೆಂದಳು, “ಹೌದು ನೋಡವ್ವಾ, ನೀ ಹೇಳಿದ್ದು ಖರೇ. ಹ್ಯಾಂಗ ನಮ್ಮ ಸಾಲ್ಯಾಗ ಎಲ್ಲಾ ಅಕ್ಕವರದಶಿಂದ ಒಂದು ಚೀಲದ ತುಂಬ ರೂಪಾಯಿ ಬರ್ತಾವ ನೋಡು, ಒಂದನೆ ತಾರೀಖಿಗೆ, ಹಾಂಗ ಈ ಮೆಂಬರರದಲ್ಲಾ ಇವೊತ್ತು ಪಗಾರ ಬಂದಿರಬೇಕು."

ಕೃಷ್ಟಿಯೆಂದಳು “ಇರ್ಲಿ ನಡಿರೇ ನಮ್ಮವ್ವಾ, ಹೊಟ್ಟಿ ಭಾಳ ಹಸದದ. ಸಂಜೆಬ್ಯಾರೆ ಆಗೇದ, ಅವ್ವಾ ಏನ ಅನ್ನಾ ಹಾಕತಾಳೋ ಏನ ಕಡಬು ಕೊಡತಾಳೊ ನಾಲ್ಕು........?"

ಮೂವರೂ ಓಟ ಬಿಟ್ಟರು !