ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ನೀಲೆಯ ಸಂಸಾರ
೧೧

ಗೌಡರ ಮನೆತನವು ಬಲು ಪುರಾತನ ಕಾಲದಿಂದ ಗೌರವವನ್ನು ಪಡೆಯುತ್ತ ಬಂದದ್ದು. ಮನೆಯ ಜನರೆಲ್ಲರೂ ತೀರ ಹಳೆಯ ಸಂಪ್ರದಾಯದವರು. ಜಾತಿಯಿಂದ ಲಿಂಗವಂತರು. ಮನೆಯೊಳಗಿನ ಹೆಣ್ಣು ಮಕ್ಕಳು ತಮ್ಮ ತಮ್ಮ ಮನೆಗೆಲಸಗಳನ್ನು ಅಚ್ಚುಕಟ್ಟು-ತನದಿಂದ ಮಾಡುತ್ತ, ಆಳುಮಕ್ಕಳ ಹೊಟ್ಟೆ-ನೆತ್ತಿಗಳನ್ನು ಮಕ್ಕಳಂತೆ ನೋಡುತ್ತ, ಅವರಿಂದ ಮೈತುಂಬ ಕೆಲಸಬೊಗಸೆಗಳನ್ನು ಮಾಡಿಸುತ್ತಿ, ಉಟ್ಟುತೊಟ್ಟು, ಉಂಡು-ತಿಂದು ಮನೆಯಲ್ಲಿ ಶೃಂಗಾರವಾಗಿ ಸುಖದಿಂದಿರಬೇಕೆಂಬುದೇ ಎಲ್ಲರ ಅಭಿಮತ. ಮಡ್ಡಮ್ಮ ಸಾಹೇಬರ ಹಾಗೆ ಅವರು ಶಾಲೆ-ಕಾಲೇಜುಗಳಿಗೆ ಹೋಗಕೂಡದು-ಸಭೆಗಳ ಸುದ್ದಿಯನ್ನಂತೂ ಕಿವಿಯಿಂದ ಸಹ ಕೇಳಬಾರದು. ನಿಬ್ಬಣ-ಜಾತ್ರೆಗಳು, ಗುಡಿಗುಂಡಾರಗ, ಹೊಲದ ರಾಶಿಯ ದಿನದ ಹೊರತಾಗಿ ಜನರು ಇನ್ನೆಲ್ಲಿಯೂ ಎಂದೆಂದಿಗೂ ಮನೆಬಿಟ್ಟು ಹೊರಬಿ?ಳಕೂಡದು! ಅಂಥದರಲ್ಲಿ ಏನೋ ಅಪ್ಪಿ ತಪ್ಪಿ ಗೌಡರ ಮಗಳ ಹೆಸರನ್ನು ಯಾರೋ 'ಲೀಲಾ' ಎಂದಿಟ್ಟಿದ್ದರು. ಆದರೆ ಗೌಡರ ಮನಸಿಗೆ ಅದು ಸಹಬಾರದ್ದರಿಂದ ಅವರು ನೀಲೆಯಂತಲೇ ಕರೆಯುತ್ತಿದ್ದರು.

ಗೌಡರ ತಂಗಿಯೊಬ್ಬಳನ್ನು ಪೇಟೆಯವರಿಗೆ ಮದುವೆಮಾಡಿ- ಕೊಟ್ಟಿದ್ದರು. ಒಕ್ಕಲಿಗರ ದೃಷ್ಟಿಗನುಸರಿಸಿ ಅವಳ ಹೆಸರೂ ಸುಧಾರಿ-ಸಿದ್ದು-ಪದ್ಮಾ ಆದರೆ ಹಳ್ಳಿಯಲ್ಲಿ ಅವಳು ಪದುಮವ್ವ. ಅವಳ ಗಂಡ ವಕೀಲ, ಮಾಳಮಡ್ಡಿಯಲ್ಲಿ ತಮ್ಮ ಸ್ವಂತದ ಬಂಗಲೆಯಲ್ಲಿ, ಸಾಕು ಠೀವಿಯಿಂದ ಇಪ್ಪತ್ತು ವರುಷದ ಶಂಕರನೊಂದಿಗೆ ಸುಖವಾಗಿದ್ದರು. ತಂಗಿಯ ಆಗ್ರಹದ ಮೂಲಕ ಗೌಡರು ತಮ್ಮ ನೀಲಿಯನ್ನವಳಲ್ಲಿ ತಂದು ಚಿಕ್ಕಂದಿನಲ್ಲಿಯೇ ಬಿಟ್ಟು ಹೋಗಿದ್ದಳು. ಅವಳಿಗೀಗ ಹದಿನಾಲ್ಕು ನಡೆದಿತ್ತು; ಮನೆಯಲ್ಲಿ ಸೋದರ-ಮಾವಂದಿರ ಅಚ್ಛೆಯಿಂದ ಯಾವುದಕ್ಕೂ ಕೊರತೆಯಾಗದೆ ಸುಖವಾಗಿ ಬೆಳೆದಿದ್ಧಳು; ಜೊತೆಗೆ ಶಂಕರನಂತಹ ಸುಗುಣಿ ಮಾವನು. ಅವಳು ಈ