ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೨
ಹೂಬಿಸಿಲು

ಅವಧಿಯಲ್ಲಿ ಟ್ರೇನಿಂಗ ಕಾಲೇಜಿನಲ್ಲಿ ಮೂರನೆಯ ವರುಷವನ್ನು ಮುಗಿಸಿ, ಮನೆಯಲ್ಲಿ ಇಂಗ್ಲೀಷು ಸಹ ಓದಿಕೊಂಡು, ಶಂಕರನ ಸಹಾಯದಿಂದ ಜಾಣಳಾಗಿ, A. V. School ನಲ್ಲಿ ಇಂಗ್ಲೀಷು ನಾಲ್ಕನೆಯ ಇಯತ್ತೆಯ ಸರ್ಟಿಫಿಕೆಟನ್ನು ಪಡೆದಿದ್ದಳು.

ವಿದ್ಯೆಗೆ ಭೂಷಣ ತರುವಂತಹ ವಿನಯವೂ ಲೀಲೆಯಲ್ಲಿತ್ತು. ಶಾಲೆಯ ಅಭ್ಯಾಸ ಮಾಡಿಕೊಂಡು ಮಿಕ್ಕ ವೇಳೆಯಲ್ಲಿ ಹಾರ್ಮೋನಿಯಂ ಕಲಿಯುವದು, ಇನ್ನುಳಿದ ವೇಳೆಯಲ್ಲಿ ಸೋದರತ್ತೆಗೆ ನೆರವಾಗುವದು. ಇದು ಅವಳ ನಿತ್ಯಕ್ರಮ. ಅತ್ತೆಯು ಅವಳ ಗುಣಕ್ಕೆ ಮೆಚ್ಚಿದ್ದಳು. ದಿನಾಲು ಅವಳಗೊಂದೊಂದು ಬಗೆಯ ಹೆಳಲು ಹಾಕಿ, ಬಗೆಬಗೆಯ ಬಣ್ಣದ ಸಾಲಗಳನ್ನು ಉಡಿಸುವಳು. ಶಂಕರನು ಖಾದಿಭಕ್ತ-ನಿದ್ದನೆಂದು, ಅವಳೂ ಖಾದಿಯ ಸುಂದರವಾದ ಪತ್ರಲಗಳನ್ನೇ ಉಡುತ್ತಿದ್ದಳು. ಸೋದರಮಾವನಂತೂ, ಅವಳೇನು ಈಗಾಗಲೇ ತನ್ನ ಶಂಕರನ ಹೆಂಡತಿಯಾಗಿ ಬಿಟ್ಟಳೋ ಏನೋ ಎಂದು ತಿಳಿದು ಹಿರಿಹಿರಿ ಹಿಗ್ಗುವನು. ಪತಿಪತ್ನಿಯರಿಬ್ಬರೂ ಒಂದೆರಡು ಅವಳಿಗೆ ಹಿಗೆ ನಗೆಯಾಡಿದ್ದರು ಸಹ.

ಈ ತಿಂಗಳೊಪ್ಪತ್ತಿನಲ್ಲಿಯಂತೂ ವಕೀಲರು ಸಂಜೆಗೆ ಮನೆಗೆ ಮರಳುವಾಗ ಬರಿಗೈಯಿಂದ ಎಂದಿಗೂ ಬರುತ್ತಿದ್ದಿಲ್ಲ. ಸೋದರ-ಸೊಸೆಗೆ ಒಂದಿಲ್ಲೊಂದು ಇನಾಮು ದಿನಾಲು ಇದ್ದುದೇ. ಜರದ ಸೀರೆ, ಬ್ಲಾವುಜಪಿಸು, ಲಾಯಿನ ಬಝಾರ ಪೇಢೇ, ಸುಕ ಅಂಜೀರು, ಕಾಗದೀ ಬದಾಮು, ಇಂಪೀರಿಯಲ್ ಕ್ಯಾಫೆ ಬಿಸ್ಕೀಟು, ಆಯಾ ದಿನಮಾನಗಳಿಗನುಸರಿಸಿ ಹೂವುಗಳು............

ಇತ್ತ ಶಂಕರ ಲೀಲೆಯರೂ ಒಬ್ಬರನ್ನೊಬ್ಬರು ಪ್ರೀತಿಸು-ತ್ತಿದ್ದರು. ಹಿರಿಯರಿಬ್ಬರ ಚೇಷ್ಟೆಯಿಂದ ಅವರ ಪ್ರೀತಿಗಿನ್ನಿಷ್ಟು ಪುಟಕೊಟ್ಟಂತಾಗುತ್ತಿತ್ತು. ಇಬ್ಬರೂ ಒಬ್ಬರನ್ನೊಬ್ಬರು ನೋಡಲು ನಾಚುತ್ತಿದ್ಧರು. ಒಬ್ಬರೊಡನೊಬ್ಬರು ಮಾತನಾಡುವದಂತೂ ಕಷ್ಣವೇ.