ಶಂಕರ-ಲೀಲೆಯರ ಪರೀಕ್ಷೆಗಳು ಮುಗಿದದ್ದರಿಂದಲೂ, ವಕೀಲರ ಕೋರ್ಟಿಗೆ ಸೂಯಾದುದರಿಂದಲೂ, ವಕೀಲರು ಅದೇ ಮೇ ತಿಂಗಳಲ್ಲಿ ಎಲ್ಲರಿಗೂ ಮುಂಬೈಯನ್ನು ತೋರಿಸಲಿಕ್ಕೆ ಕರೆದು-ಕೊಂಡು ಹೋಗಬೇಕೆಂದು ಮಾಡಿದ್ದರು. ಅಷ್ಟರಲ್ಲಿ ಒಂದು ದಿವಸ ಅಕಸ್ಮಾತ್ತಾಗಿ ಲೀಲೆಗೆ ತಂದೆಯಿಂದ 'ಕೂಡಲೆ ಹೊರಟು ಬಾ' ಎಂದು ಪತ್ರವೊಂದು ಬಂದಿತು. ಮರುದಿವಸ ನಸುಕು ಹರಿಯುವದ-ರೊಳಗೆ ಅವರ ಕಡೆಯ ಆಳೊಂದು ಅವರನ್ನು ಕರೆಯಲಿಕ್ಕೆಂದು ಮೂರ್ತಿಮತ್ತಾಗಿ ಬರುತ್ತಿರುವುದು ಕಂಡಿತು.
ಎಲ್ಲರಿಗೂ ಸೋಜಿಗವಾಯಿತು. ಏನು ಕಾರಣ ಹೀಗೆ ಒಮ್ಮಿಂದೊಮ್ಮೆ ಮಗಳನ್ನು ಕರೆಕಳುಹಿರಬಹುದೆಂದು ಯಾರಿಗೂ ತಿಳಿಯಲಿಲ್ಲ; ತಿಳಿದುಕೊಳ್ಳಲು ಅವಕಾಶ ಕೂಡ ಉಳಿಯಲಿಲ್ಲ. ಆಳು-ಮಗನಿಗೆ ಕೇಳಲು ಸಹ ಒಬ್ಬರಿಗೂ ಧೈರ್ಯ ಸಾಲಲಿಲ್ಲ. ತಟ್ಟನೆ ಹೋಗಿ ಅವನು ಗೌಡರ ಮುಂದೆ ಒಂದಕ್ಕೆರಡು ಹೇಳಿಬಿಟ್ಟರೆ?........ ಗೌಡರ ಹಟಮಾರಿತನವನ್ನೆಲ್ಲರೂ ಬಲ್ಲರು. ಮುಂಬಯಿಗೆ ಹೊರಡುವ ಉಲ್ಲಾಸದಲ್ಲಿದ್ದ ಅವರೆಲ್ಲರೂ ಕಳೆಗುಂದಿದರು.
ಲೀಲೆಯು ತೇಗೂರಿಗೆ ಬಂದಳು. ಊರಿಗೆ ಬಂದ ದಿವಸ ತಂದೆಯ ಅವಳೊಡನೆ ಮಾತನ್ನೇ ಆಡಲಿಲ್ಲ. ತಾಯಿಯೂ ಅಷ್ಟಕ್ಕಷ್ಟೇ! ಮೋಟರ ಸ್ಟ್ಯಾಂಡಿನಿಂದ ಮನೆಯವರೆಗೆ ಅವಳೊಡನೆ ಆಳಿನ ತಲೆಯ ಮೇಲೆ ಬರುತ್ತಿದ್ದ ಅವಳ ಟ್ರಂಕು, ಸೂಟಕೇಸುಗಳನ್ನು ಇಡಿಯ ಊರ ಜನವೇ ದಂಗುಬಡಿದು ನೋಡುತ್ತಿತ್ತು. ಅಡಿಗೆಯ ಮನೆ-ಯಲ್ಲಿ ಹೋಗಿ ತಾಯಿಗೆ ವಂದಿಸಿದೊಡನೆಯೇ 'ತೆಲಿಮ್ಯಾಗ ಸೆರಗಹೊರs ಮೂಳಾ' ಎಂಬ ಆಶಿರ್ವಾದವಾಯಿತು.
ಮರುದಿವಸ ಗಚ್ಚೀಧಡಿಯ ಸೀರೆಗಳು ಅವಳನ್ನಲಂಕರಿದವು.
"ನಾಲ್ಕು ದಿವಸ ನಾನಿಲ್ಲಿರುವವಳು ಸುಮ್ಮನೆ ಎಲ್ಲರ ಮನಸಿನ ವಿರುದ್ಧವಾಗಿದ್ದು ಅವರ ಮನಸ್ಸನ್ನೇಕೆ ನೋಯಿಸುವದು! ಹಳ್ಳಿಯ