ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೪
ಹೂಬಿಸಿಲು

ಊರು--ಅದರಂತೆಯೆ ನಡೆದರಾಯಿತು.” ಎಂದುಕೊಂಡು ಸುಮ್ಮನಾದಳು. ಅದೇ ದಿನ ಮಧ್ಯಾಹ್ನಕ್ಕೆ ತಂದೆ ಮಗಳ ತುದಿಮೊದಲಿಲ್ಲದ ಸಂವಾದವಾದದ್ದು.

ಸಾಯಂಕಾಲಕ್ಕೆ ತಂದೆಯೊಡನೆ ಊಟಕ್ಕೆ ಕುಳಿತಿದ್ದಳು. "ನೀಲಾ......” ಮುದುಕನ ಕಂಠವು ಬಿಗಿಯಿತು.

"ಮಧ್ಯಾಹ್ನದಲ್ಲಿ ನೀಲಿ, ನೀಲಿಯೆದು ಆರ್ಭಟಿಸಿದನೇನು, ಈಗ ಒಮ್ಮೆಲೆ ದುಃಖಿಸುವನೇನು ? ಇದರ ರಹಸ್ಯವಾದರೂ ಏನಿರಬಹುದು? ” ಎಂದು ದಿಗಿಲುಗೊ೦ಡ ನೀಲೆಯು ಸುಮ್ಮನೆ ತಂದೆಯ ಕಡೆಗೆ ಮುಖವೆತ್ತಿದಳು.

"ನೀಲಾ, ನೀ: ನಾನ್ನ ಮನೀ ಮರ್ಯಾದಿನ ಕಳದಿ--ಅದು ನಿನ್ನ ತಪ್ಪಲ್ಲಾ-ಪ್ಯಾಟಿ ಊರಾಗ ಒಯ್ದ ನಿನ್ನ ಕಲ್ಯಾಕಿಟ್ಟದ್ದು ಮದ್ಲ ನನ್ನ ತಪ್ಪು. ಅಲ್ಲೆ ನೀ ಎಟ್ಟದು ದಾಂದಲೇ ಹಾಕೂದು ? ಮ್ಯಾಗಿಂದ ಮ್ಯಾಗ ಅವರೆಲ್ಲಾರ ಸಂಗಾಟ ಶಿನೇಮಾಕ್ಕೇನ ಹೋಕ್ಕಿದ್ದೆಂತ, ಗಂಡರಾಮ್ಯಾರ ಹಾ೦ಗ ನಿಮ್ಮತ್ತೀ-ಮಾವಾ ಅವರ ಹಂತೇಕ ಕುರ್ಚಿದಮ್ಯಾಗ ಕುಂದರತಿದ್ದೇನ, ಪ್ಯಾಟ ಪ್ಯಾಟಿ ಆ ಶಂಕರ್‍ಯಾನ ಸಂಗಾಟ ತಿರಗೂದೇನ, ಗುಜ್ಜರ ಹಾಂಗ ಪತ್ಲಾ ಏನ ಉಡೋದು--ಅವು ಸಂಕಾ ಕಾದೀವಸs ಸತ್ತಾ ? ನೀ ಕಾದಿ ಉಟಗೊಂಡಕ್ಯಾರಾ ನಿಮ್ಮನೀ ಗೌಡಕಿ ಕಳೀಬೇಕಂತ ಮಾಡೀದ್ಯಾ? ಸರಕಾರ ಮುಂದ ಸಂಕಾ ಬೆದರದ ದರಪಾ ಕಾಯ್ಕಂಡ ಹ್ವಾದ ನಮ್ಮೆಲ್ಲಾರ್ನ ಅವರ ದರಬಾರದಾಗ ಕಾಲಿಡದ್ದಾಗ ಮಾಡಬೇಕಂತಿಯಾ ಮೂಳಿ ?....... ಸಾಕ, ಸಾಕ--ನಿನ್ನ ಸಾಲೀ ಪಾಲೀ ಸಾಕಿನ್ನ-ತಣ್ಣಗ ಮೂಲ್ಯಾಗ ಕುಂಡ್ರು. ನಿನ್ನ ಹೀ೦ಗ ಬಿಟ್ರ, ಯಾವ ಗೌಡ್ರ ಮಗಾನೂ ನಿನಗೆ ಮಾಡಿಕೊಳ್ಳಾಕ ಒಪ್ಪಾಕಿಲ್ಲಾ. ಪದಮವ್ವನ ಮನ್ಯಾಗ ನಿನಗ ಹ್ಯಾಂಗ್ಯಾಂಗ ರೀತೀ ಮಾಡಿ ಕುಣಿಸ್ಯಾರಂತ ನನಗೆಲ್ಲಾ ಗೊಂತೈತಿ; ಪ್ಯಾಟಿ ಊರಿಗೆ ವಾರಾವಾರಾ ಹೋಗಿಬರೂ ನನ್ನ ರೈತರು ನನಗೆಲ್ಲಾ