ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮

ಹೂಬಿಸಿಲು

ಇದ್ದಿತು. ಆಗ ಗೌಡರು ಮಗಳ ಬಾಯಿಯಿಂದ ಸಿಟ್ಟಿನ ಭರದಲ್ಲಿ ಒಮ್ಮೆ "ಆದರೆ ನಾನು ಶಂಕರಮಾವನನ್ನೇ ಮದುವೆಯಾಗುವೆನು" ಎಂದು ನಿಷ್ಠುರವಾಗಿ ಅಂದದ್ದನ್ನು ಕೇಳಿದ್ದರು. ಅದು ಅವರ ನೆನಪಿನಲ್ಲಿತ್ತು. ಅಂತೆಯೇ ತನ್ನ ತಂಗಿ ಪದುಮವ್ವನ ಮನೆಯಲ್ಲಿ ಯಾರನ್ನ ಮದುವೆಗೆ ಕರೆಕಳುಹಿರಲಿಲ್ಲ-ಅವರೆಲ್ಲಿಯಾದರೂ ಅಡ್ಡಿಯಾಗಬಹುದೆಂದು.

ಇತ್ತ ಮದುವೆಯ ದಿವಸ ಮಧ್ಯಾಹ್ನಕ್ಕೆನೇ ಪದ್ಮಾಬಾಯಿಯ ಕೈಯ್ಯಲ್ಲಿ ಲೀಲಾವತಿಯ ಎರಡು ಪತ್ರಗಳು ಬಂದು ಬಿದ್ದವು. ಡ್ರಾಯಿಂಗ ತೆಗೆಯುವ ಕೆಂಪು ಖಡುವಿನಿಂದ ಬರೆದಿದ್ದಳು. ಒಂದು ಲೀಲೆ ತೇಗೂರಿಗೆ ಹೋದ ಮರುದಿನವೇ ಬರೆದದ್ದು; ಇನ್ನೊಂದು ನಿಶ್ಚಯದ ದಿವಸ ಬರೆದದ್ದು, ಓದಿಕೊಂಡಳು. ಹೊಟ್ಟೆಯಲ್ಲಿ ಪಂಜು ಹಚ್ಚಿದಂತಾಯಿತು.

ಅವಳಾದರೂ ಏನು ಮಾಡಬೇಕು? ಗಂಡನೂ ಮಗನೂ ಎರಡು ದಿನದ ದಾರಿಯ ಆಚೆಗೆ. ಅದು ಕೂಡ ಸತ್ರ-ತಾರು ವೇಳೆಗೆ ಮುಟ್ಟುವಂತಿಲ್ಲ, ನಿಧಾನವಾಗಿ ಈ ಬಗ್ಗೆ ವಿಚಾರಮಾಡಲು ಸಹ ಅವಳಿಗೆ ಸಾಕಷ್ಟು ವೇಳೆಯಿರಲಿಲ್ಲ. ಹಿಂದುಮುಂದಿನ ವಿಚಾರ ಮಾಡದೆ, ತಟ್ಟನೆದ್ದು ಬಾಗಿಲುಗಳನ್ನು ಇಕ್ಕಿ ಕೀಲಿಹಾಕಿ, ಆಳಿನೊಡನೆ ಟಾಂಗಾ ಮಾಡಿಕೊಂಡು ಮೋಟಾರಸ್ಟ್ಯಾಂಡಿಗೆ ಹೊರಟೇ ಬಿಟ್ಟಳು; ಬಸ್ಸೂ ಸಿದ್ಧವಾಗಿತ್ತು; ಒಂದು ಗಂಟೆಯಲ್ಲಿ ತೇಗೂರಿಗೆ ಬಂದು ಮುಟ್ಟಿದಳು.

ಖುಸ್-ಖುಸ್ಸೆಂದು ಮುಸುಕಿನಲ್ಲಿಯೇ ಬಿಕ್ಕುತ್ತ ಹಸೆಮಣೆಯ ಮೇಲೆ ಒಬ್ಬ ಕಡ್ಡೀಪುಡಿ ಕೆಂಚನೊಡನೆ ಕುಳಿತ ತನ್ನ ಲೀಲೆಯನ್ನು ಕಂಡಳು. ಉಬ್ಬಸಬಡುತ್ತ "ಅಯ್ಯೋ ಲೀಲಾ”....ಎಂದಳು.

"ಹಾ, ಅತ್ತೆವ್ವಾs........” ರಂಬಾಟವಾಯಿತು. ಇದನ್ನೆಲ್ಲ ಕೇಳಿ, ನೆರೆಮನೆಯ ತಿಪ್ಪಾಭಟ್ಟರು ಬಂದು, “ಗೌಡ್ರ-ಇಂಥಾ