ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಹಾಶಿವರಾತ್ರಿ

ಗೋವಿಂದನು ಬಳಗದ ಮನೆಯವನು, ಆರಂಭದ ಮನೆ- 'ಯವನು. ಮನೆತುಂಬ ಮಕ್ಕಳು, ಕೊಟ್ಟಡಿಯ ತುಂಬ ದನಗಳು, ಮಕ್ಕಳಲ್ಲಿ ಹೆಣ್ಣು ಮಗುಗಳು ಹೆಚ್ಚು, ದನಗಳಲ್ಲಿ ಹೋರಿಗಳು ಹೆಚ್ಚು. ಅವನ ಮನೆಯ ಹಿತ್ತಿಲು ಬಹಳ ದೊಡ್ಡದು. ಹಿತ್ತಿಲಲ್ಲಿ ದನಗಳಿ- ಗಾಗಿ ಸಿಹಿನೀರಿನಿಂದ ತುಂಬಿಟ್ಟ ದೊಡ್ಡದೊಂದು ಕಲ್ಲುಡೋಣಿ.--ಜನ ಗಳಿಗಾಗಿ ಬಟ್ಟೆ ಬರೆ ಒಗೆಯುವದಕ್ಕೋಸ್ಕರ ತುಂಬಿಟ್ಟ ದೊಡ್ಡದೊಂದು ಟಬ್ಬು. ಹಿತ್ತಿಲ ಒಂದು ಭಾಗಕ್ಕೆ ದೊಡ್ಡದಾದ ಬಾಗಿಲು ಹಚ್ಚಿದ ಬಾಂವಿ. ಒಂದು ಬದಿಗೆ ಸುಂದರವಾದ ತುಳಸೀ ವೃಂದಾವನ, ಒಂದು ಹಳೆಯ ಹುಣಸೇಮರ, ಒಂದು ನುಗ್ಗಿ ಯಗಿಡ, ಒಂದು ಚೊಗಚಿಯ ಗಿಡ-ಆಮೇಲೆ ಅಲ್ಲಲ್ಲಿ ಉಳಿದ ಸಣ್ಣ ಪುಟ್ಟ ಹೂ-ಕಾಯಿ ಗಿಡಗಳು ಕೆಲವು.

ಆಗ ಗೋವಿಂದನಿಗೆಂಟು ತುಂಬಿತ್ತು. ಎಷ್ಟು ಮುದ್ದು ಮುದ್ದಾಗಿ ಹಾಡುವನು, ಕೊಳಲನ್ನೆ ಷ್ಟು ಇಂಪಾಗಿ ಬಾರಿಸುವನು! ಬಾರಿಸಿದ್ದನ್ನೆ, ಹಾಡಿದ್ದನ್ನೇ ಮತ್ತೆ ಸುಂದರವಾಗಿ ಸಿಳ್ಳು ಹೊಡೆಯು- ವನು, ಯಾರು ಏನೆಂದರೂ ಅನ್ನಿಸಿಕೊಳ್ಳುವನು, ಹೊಡೆದರೂ ಹೊಡೆಯಿಸಿಕೊಳ್ಳುವನು-ಆದರೆ ತನ್ನ ಕೆಲವು ಕಾಯಕಗಳನ್ನು ಮಾತ್ರ ಒಂದು ದಿನವೂ ಬಿಡುತ್ತಿದ್ದಿಲ್ಲ. ಸ್ವಭಾವ ಒ ಳ್ಳೆ ಯ ದು. ಚಿತ್ರಗಳ ಮೇಲೆ ಪ್ರೀತಿ ಬಹಳ; ಅದರಂತೆಯೆ ಸಿನೇಮಾದ ಹುಚ್ಚು ವಿಪರೀತ. ಮೂರುದಿನಕ್ಕೊಮ್ಮೆ ಸಿನೇಮಾದ ಹೊಸ ಆಟ ವಿರುವಾಗ, ಹೇಗೋ ಯಾರ ಕಡೆಯಿಂದಲೋ ರೊಕ್ಕ ಸೆಳೆದುಕೊಂಡು ಥಿಯೇಟರಿಗೆ ಓಡುವನು. ಗಂಡಸರಿಗಿಂತ ವಿಶೇಷವಾಗಿ ಹೆಂಗಸರೇ ಅವನಿಗೆ ರೊಕ್ಕಕೊಡುವವರು, ಸಿನೇಮಾಕ್ಕೆ ಕಳಿಸುವವರು. ಆದರೆ ಪ್ರತಿಯೊಬ್ಬಳೂ ರೊಕ್ಕಕೊಟ್ಟ ಕೂಡಲೆ, "ಒಬ್ಬನs ಹೋಗ್ತಿ ಯೇನಪ್ಪಾ, ಗೋವಿಂದಾ, ನಿನ್ನ ಹೆಂಡಂದಿರನ್ನ ಕರಕೊಂಡು ಹೋಗೂ