ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಹಾಶಿವರಾತ್ರಿ

೨೫

"ಹಾಂಗಾರ ಎಲ್ಲಾರ ಕಡಿಂದ ಗಲ್ಲಾ ಗಲ್ಲಾ ಹೊಡಿಸಿಗೋ, ತಪ್ಪಾತಂತ."

ಎಲ್ಲರೂ ಭೀಮಿಗೊಂದೊಂದು ಸಣ್ಣನ್ನ ಏಟು ಕೊಟ್ಟರು. ಯಾವಳೊಬ್ಬಳು ತನ್ನ ಮನಸಿನ ವಿರುದ್ಧ ನಡೆದರೆ, ಉಳಿದ ಎಲ್ಲರ ಕಡೆಯಿಂದ ಮೆಲ್ಲಗೆ ಅವಳಿಗೆ ಕಪಾಳಕ್ಕೆ ಏಟು ಕೊಡಿಸುವ ಶಿಕ್ಷೆಯ ಪದ್ಧತಿಯು ಗೋವಿಂದನದು.

ಅಷ್ಟರಲ್ಲಿ ಮಾಲಿಯು “ಗೋವಿಂದು, ನನಗೊಂದು ಗಂಡು ಹಡಗಪಡಿ ಮಾಡಿಕೊಡು” ಎಂದಳು. ಅವಳ ಮೇಲೆ ಗೋವಿಂದನ ಪ್ರೀತಿ ಬಹಳ. ಹಾ, ಹಾ ಅನ್ನುವಷ್ಟರಲ್ಲಿ ಅಬಚಿಯಂದಿರ ಹದಿನೈದು ಮಕ್ಕಳಿಗೆ ಹದಿನೈದು, ಮಾವಂದಿರ ಒಂಬತ್ತು ಮಕ್ಕಳಿಗೆ ಒಂಬತ್ತು ಹಿರಿಯಕ್ಕನ ಮಗಳು ಮಾಲಿಗೊಂದು ಗಂಡು ಹಡಗು ಮಾಡಿಕೊಂಡು ಕುಂಟುತ್ತ ಎದ್ದನು. ಏ, ಮನೀ ಮಂದಿಗೆ ಗೊತ್ತಾಗದ್ದಾಗ ಎಲ್ಲಾರೂ ಹಿತ್ತಲದಾಗ ನಡೀರೆ ? ” ಎಲ್ಲ ನಟ-ಯರೂ ಡಾಯರೆಕ್ಟರನ ಸೂಚನೆಯ ಮೇರೆಗೆ ಹಿತ್ತಿಲಿಗೆ ಬಂದರು, ಕಲ್ಲು ಡೋಣಿಯ ಮೇಲೆ, ಕಾಲು ನೀರಲ್ಲಿ ಇಳಿಬಿಟ್ಟು ಕೊಡಲು ಎಲ್ಲರಿಗೆ ಹೇಳಿದ. ಅವರವರ ಹಡಗುಗಳನ್ನು ತಮ್ಮತಮ್ಮೆದುರಿಗೆ ನೀರಲ್ಲಿ ತೇಲಿಬಿಟ್ಟು ಕೈಹಿಡಿದು ಕೂಡಲು ಹೇಳಿದ. ನಾಲ್ಕೈದು ನಿಮಿಷ ಹೀಗೆಯೆ ಕುಳಿತಿರುವಾಗ, ತಾನೂ ಕೈಯಲ್ಲೊಂದು ದಂಟು ಹಿಡಿದು ನಾವಿಕನಾಗಿ ಹುಟ್ಟು ನಡೆಸಿದನು. ಆಮೇಲೆ ಎರಡು ನಿಮಿಷ ಬಿಟ್ಟು, "ಹೂ, ಇಳೀರೇ, ಊರು ಬಂತು” ಎಂದನು. ಇಳಿದರು. ಎಲ್ಲರನ್ನೂ ವೃಂದಾವನದ ಸುತ್ತಲಿನ ದೊಡ್ಡ ಕಟ್ಟೆಯ ಮೇಲೆ ಕುಳ್ಳಿರಿಸಿದ. ತಾನು ಮುಖ್ಯ ವೃಂದಾವನದ ಕಟ್ಟೆಯ ಮೇಲೆ ಕುಳಿತು ಕೃಷ್ಣನ ಹಾಗೆ ಕೊಳಲು ನುಡಿಸಹತ್ತಿದ. ಆ ಕೊಳಲಿನದೊಂದು ಕತೆಯೆ. ಮನೆಯವರಿಗೆ ಎಷ್ಟು ಕಾಡಿದರೂ ಯಾರೂ ಕೊಳಲು ಕೊಡಿಸಲಿಲ್ಲ. ಕಡೆಗೆ ದನಕಾಯುವ ಕಾಶ್ಯಾನ ಸಹಾಯದಿಂದ, ಕಾದ ಮೊಳೆಯನ್ನು ಬಿದಿರಿಗೆ ಚುಚ್ಚಿ ಚುಚ್ಚಿ, ಸಪ್ತಸ್ವರಗಳನ್ನೂ ಸರಿಯಾಗಿ ಹೊಂದಿಸಿ