ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬

ಹೂಬಿಸಿಲು

ಕೊಂಡಿದ್ದನು. "ಹೂಂ, ಮೊನ್ನೆ ನಾ ಕಲಿಸಿದ್ದಾಂಗ, ಎಲ್ಲಾ ರೂ ದುಂಡಗ ನನ್ನ ಸುತ್ತಲೂ ತಿರಿ. 5 ಲೀಲಾ, ಬೇಬಿ, ಸರೂ, ಭೀಮ್ಮಿ, ಅಲ್ಲಿ ನೋಡಿ, ಮಾಲಿ, ತಾಯಿ, ನಚ್ಚಿ, ಸೂಸಿ ಹ್ಯಾಂಗ ಛಂದಾಗಿ ಹಾಡನಕೊತ ತಿರಗಲಿಕತ್ತಾ ರ........” ಗೋವಿಂದಾ ಕಾಲು ನೋವಾಗೇದಂತ ನಾಲ್ಕು ದಿವಸಾತ್, ಮನಿ ಹಿಡಿದು ಕೂತೀದಿ, ಸಾಲೀ....? ” ಒಳಗಿನಿಂದ ಅವ್ವನ ಕೂಗು ಕೇಳಿಸಿತು. ಯಾಗಿ ಟಣ್ಣನೆ ಜಿಗಿದು ಬಿಟ್ಟನು. ಮಾಯುತ್ತ ಬಂದ ಮೊಳಕಾಲ ನೋವು ಒಡೆದು ರಕ್ತ ಸೋರಹತ್ತಿತು- ಗೊವಿಂದಾ, ನನ್ನ ಸರಕಾರದ್ದೇ ಒರಸು-ಹಿಡಿ, ನನ್ನ ಪೋಲಕಾದ್ದೇ ಒರಸು........” ಹೀಗೆ ಅವನ ಗೋಪಿಯರೆಲ್ಲ ಗಡಿಬಿಡಿ ಮಾಡಹತ್ತಿದರು. ಅಷ್ಟರಲ್ಲಿ ಒಬ್ಬ ಮಾವನು ಬಂದು ಹುಡುಗಿಯರೆಲ್ಲರಿಗೊಂದೊಂದು ಏಟು ಬಿಟ್ಟು, ಇವನ ಬುಟ್ಟನ್ನು ಹಿಡಿದು ದರದರನೆ ಎಳೆದೊಯ್ದು ಊಟಕ್ಕೆ ಕೂಡ್ರಿಸಿದನು.

ಗೋವಿಂದನಿಗೀಗ ಒಂಬತ್ತು ತುಂಬಿ ಮೇಲೆ ಆರು ತಿಂಗಳಾ- ಗಿದ್ದವು; ಅವನೀಗ ಇಂಗ್ಲೀಷು ಶಾಲೆಗೆ ಹೋಗುತ್ತಿದ್ದನು, ಒಂದು ದಿವಸ ಸಾಯಕಲ್ಲ ಮೇಲಿಂದಲೆ ಶಾಲೆಯಿಂದ ಮನೆಗೆ ಬಂದನು. "ಕಾಲಿಗೇನಾಗದೋ ?" “ಅಕ್ಕಾ, ಸಾಯಕಲ್ಲ ಮಾಲಿಂದ ಬಿದ್ದೆ. ನಾ ಅವ್ವನ ಮುಂದ ಹೇಳಬ್ಯಾಡಾ....?? ಸಾಯಕಲ್ಲು ಬ್ಯಾರೇ ಕಲೀಲಿಕ್ಷ ಹೌದು ? ” “ ಕಲಿಯೋದ ಮುಗದದ-ನಾ ಒಬ್ಬಾ- ವನ ಆದರು ಭಾಳ ಛಲೋ ಹೊಡಿತೆನಿ ಬಿಡೂ ಇನ್ನ ಬರೇ ಯಾವದರ ಒಂದು ಹುಡಿಗಿನ್ನ ಕೂಡ್ರಿಸಿಕೊಂಡು ಹೊಡೀಲಿಕ್ಕೆ ಕಲಿಯೋವಷ್ಟು ಮಾತ್ರ ಉಳದದ, ” "ಅಷ್ಟು ಮಾತ್ರ ದಯ- ಮಾಡಿ ಮಾಡಬ್ಯಾಡಪ್ಪಾ !”

ಒಂದು ರವಿವಾರ ಮಧ್ಯಾನ್ನ ಹೆಣ್ಣು ಮಕ್ಕಳೆಲ್ಲರು ತಮ್ಮ ತಮ್ಮ ಕೆಲಸಗಳನ್ನು ತೀರಿಸಿಕೊಂಡು ಅಡ್ಡಾಗಿದ್ದರು. ಗಂಡಸರೆಲ್ಲ