ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮಹಾಶಿವರಾತ್ರಿ
೨೭

ನೆರೆಮನೆಯ ಅಟ್ಟದ ಮೇಲೆ ಹಣಹೊತ್ತು ವಿಶ್ರಾಂತಿಗಾಗಿಯೆಂದು ಹೋಗಿದ್ದರು. ಗೋವಿಂದನು ಅಭ್ಯಾಸ ಮುಗಿಸಿಕೊಂಡು ಕೋಣೆಯ ಹೊರಗೆ ಬಂದನು. ಎಲ್ಲ ಹುಡುಗಿಯರೂ ತಮ್ಮ ತಮ್ಮ ತಾಯಂದಿರ ಬಳಿ ಅಡ್ಡಾಗಿದ್ದರು. ಅವರಿಗೆ ಗಾಢ ನಿದ್ರೆ ಹತ್ತಿದುದನ್ನು ನೋಡಿ ಮರಳಿ ಕೋಣೆಗೆ ಬಂದನು. ಲೋಡಿಗೆ ಆತುಕೊಂಡು ಕುಳಿತು ಸಂಪಾಗಿ ಕಳ್ಳ ಧ್ವನಿಯಲ್ಲಿ ಹಾಡಲಾರಂಬಿಸಿದನು, ಮೊದಲು ಮಾಲಿಯು ಎಚ್ಚತ್ತಳು. ಮೆಲ್ಲಗೆ ಸುಶಿಲೆಯ ಕಿವಿಯಲ್ಲಿ, " ಏ ಸುಶಾ, ನಮ್ಮ ಗೋವಿಂದರಾವ ಟೇಂಬೆ ಹಾಡಲಿಕ್ಷಾನ ಬಾರ! ಲಗೂ ಏಳS !!” ಈ ಗುಣುಗುಟ್ಟುವಿಕೆಯನ್ನು ಕೇಳಿ ಎಲ್ಲ ಸೈನ್ಯವೂ ಎಚ್ಚರವಾಗಿ ಎದ್ದು ಕೋಣೆಯ ಕಡೆಗೆ ಓಡಿತು, ಎಲ್ಲರನ್ನೂ ಕೈಸನ್ನೆಯಿಂದ ಹಿತ್ತಿಲಲ್ಲಿ ಕರೆತಂದನು. ಒಬ್ಬಳ ಸರಕಾರವಾದರೆ ಇನ್ನೊಬ್ಬಳ ಪೋಲಕ, ಮತ್ತೊಬ್ಬಳ ಝಂಪರು ಆದರೆ ಮಗದೊಬ್ಬಳ ಝಗಾ, ಹೀಗೆಲ್ಲರ ಕಡೆಯಿಂದ ಒಂದೊಂದು ಅರಿವೆಗಳನ್ನು ಇಸಿದುಕೊಂಡು ಸತ್ರನೆ ಹುಣಸೆಯ ಮರವನ್ನೆ?ರಿ, ಒಂದೊಂದು ಟೊಂಗೆಗೆ ಒಂದೊಂದು ಅರಿವೆಯನ್ನು ಹಾಕಿದ, ಕೊಳಲು ನುಡಿಸಹತ್ತಿದ ಆಜ ಶ್ಯಾಮ- ಮೋಹಲಿನೊ ಬಾಸಂ ಬಜಾಯಕೆ....” ಗೋವಿಂದಾ ತಾರಪ್ಪಾ ನಮ್ಮ ಅರಿವಿ-ಮನೀ ಒಳಗ ಅಪ್ಪ ಬೈತಾಳ-ಬರೆ ಧಾಂದಲೆ ಹಾಕಿದೆಂತ....” ಹೀಗೆ ಪ್ರತಿಯೊಬ್ಬರೂ ಕೇಳಿದಳು. ಅಲ್ಲೇ, ಮೊನ್ನೆ ನಾನು ಸಿನೇಮಾದಾಗ ಕೃಷ್ಣನ ಹಾಂಗ ನಾವೂ ಆಡೋ- ಇವ್ವಾ ಅಂದ ನೀವೆಲ್ಲಾ ಹೂಂ ಅನ್ನಲಿಲ್ಲ ಮತ್ತ ? ಹಾಂಗಾರ ಲಗೂನ ಆಟಾ ಆಡಿ ಮುಗಿಸೋಣ--ಮೊನ್ನೆ ನಾ ಕಲಿಸಿದ್ದ ಚುಟಕೀ ಅನ್ನಿ ಲಗೂನ........ ಆ ಪ್ಯಾರಾಂಗ, ” “ ಹೂ, ಅಂತೇವಿ ಕೊಡಪ್ಪಾ...” ಜೋಣಿಯಲ್ಲಿ ಒಂದಿಬ್ಬರು, ಟಬ್ಬಿನಲ್ಲಿ ಒಂದಿಬ್ಬರು, ಒಬ್ಬಿಬ್ಬರು ಗಿಡದಡಿಯಲ್ಲಿ ನಾಲ್ಕಾರು ಜನರು ವೃಂದಾವನದ ಕಟ್ಟೆಯ ಮೇಲೆ, ಹೀಗೆಲ್ಲರೂ ಕೈಮುಗಿದುಕೊಂಡು ನಿಂತರು.